Sweet Pumpkin: ಮಳೆ ನೀರಿನಿಂದಲೇ ಸಿಹಿ ಕುಂಬಳಕಾಯಿ ಬೆಳೆದ ರೈತ
20 ರಿಂದ 25ರೂ.ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು
Team Udayavani, Sep 24, 2024, 4:03 PM IST
ಉದಯವಾಣಿ ಸಮಾಚಾರ
ಮಾಗಡಿ: ತಾಲೂಕಿನ ಹಂಚಿಕುಪ್ಪೆ ಗ್ರಾಪಂ ವ್ಯಾಪ್ತಿಯ ಗುಡ್ಡಹಳ್ಳಿಯ ಪ್ರಗತಿಪರ ಕುಂಬಳಕಾಯಿ ಗಂಗಣ್ಣ ತಮ್ಮ ಐದು ಎಕರೆ ಭೂಪ್ರದೇಶದಲ್ಲಿ ಭರ್ಜರಿಯಾಗಿ ಸಿಹಿ ಕುಂಬಳಕಾಯಿ ಬೆಳೆದಿದ್ದಾರೆ. ತಲಾ ಕುಂಬಳಕಾಯಿ 20 ರಿಂದ 25 ಕೆ.ಜಿ ತೂಗುವಷ್ಟರ ಮಟ್ಟಿಗೆ ಗುಣಮಟ್ಟದ ಬೆಳೆ ಬಂದಿದೆ.
ಉತ್ತಮ ಮಳೆಯಾಗಿದೆ. ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ನೀರಿನಿಂದಲೇ ಭರ್ಜರಿ ಕುಂಬಳ ಕಾಯಿ ಬೆಳೆದಿದ್ದಾರೆ. ಕಾಡಂಚಿನಲ್ಲಿ ರುವುದರಿಂದ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಗಲು ರಾತ್ರಿ ಜಮೀನಲ್ಲಿಯೇ ಕಾದು ಬೆಳೆಯನ್ನು ರಕ್ಷಿಸಿ ಕೊಂಡಿದ್ದರು. ಕೆಲವೊಂದು ವೇಳೆ ಕಾಡಾನೆ ಕುಂಬಳ ಕಾಯಿಯನ್ನು ತಿಂದು, ತುಳಿದು ನಷ್ಟಸಹ ಮಾಡಿತ್ತು. ಎದೆಗುಂದಲಿಲ್ಲ.
ಪ್ರೇರಣೆ: ಕುಂಬಳಕಾಯಿ ಗಂಗಣ್ಣ ಅವರ ಸಾಧನೆಯನ್ನು ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಸಹ ಮೆಚ್ಚಿ ಕೊಂಡಾಡಿದ್ದರು. ಇದೇ ಗಂಗಣ್ಣ ಅವರು ಎಚ್.ಎಂ.ರೇವಣ್ಣ ಅವರನ್ನು ಸಹ ಕುಂಬಳಕಾಯಿ ಬೆಳೆಯುವಂತೆ ಪ್ರೇರೇ ಪಿಸಿದ್ದರು.
ಎಚ್.ಎಂ.ರೇವಣ್ಣ ಸಹ ಕುಂಬಳಕಾಯಿ ಬೆಳೆದು ಉತ್ತಮ ಇಳುವರಿ ಪಡೆದು ಗಂಗಣ್ಣ ಅವರ ಮಾರ್ಗ ದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಳೆ ನೀರಿನಿಂದಲೇ ಕನಿಷ್ಠ ಕೆ.ಜಿ.ಕುಂಬಳಕಾಯಿಗೆ 20 ರಿಂದ 25ರೂ.ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆಗಿದ್ದೆ ಬೇರೆ. ಬೆಲೆ ಸಿಗದೆ ತಲಾ ಕೆ.ಜಿಗೆ 8 ರಿಂದ 10ರೂ.ಗೆ ಖರೀದಿ ಕೇಳುತ್ತಿದ್ದಾರೆ. ಸುಮಾರು 40 ರಿಂದ 50 ಟನ್ ಕುಂಬಳಕಾಯಿ ಬೆಳೆದಿದ್ದು, ಸಾಲದ ಬಾಧೆಯಿಂದ ವಿಧಿಯಿಲ್ಲದೆ ಈಗಾಗಲೇ 2 ಟನ್ ಕುಂಬಳಕಾಯಿಯನ್ನು ಕೇವಲ 8ರೂ.ಗೆ ಮಾರಾಟ ಮಾಡಿದ್ದಾಗಿ ಇಂಥ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ನೋವಿನಿಂದ ಗಂಗಣ್ಣ ನುಡಿಯುತ್ತಾರೆ ಗಂಗಣ್ಣ. ಸದ್ಯಕ್ಕೆ ಮಳೆಯಾಗುತ್ತಿರುವುದರಿಂದ ಸ್ಟೋರೇಜ್ ರೂಂ ಇಲ್ಲದ ಕಾರಣೆ ಹೆಚ್ಚು ದಿನಗಳ ಕಾಲ ಇಟ್ಟುಕೊಳ್ಳಲು ಸಾಧ್ಯವಿಲ್ಲ,
ಕೃಷಿ ಕ್ರಮಗಳನ್ನು ಚಾಚೂ ತಪ್ಪದೇ ಪಾಲನೆ: ಸಿಹಿ ಕುಂಬಳಕಾಯಿ ಬೆಳೆದ ಗಂಗಣ್ಣನಿಗೆ ಅದೃಷ್ಟ ಕುಲಾಯಿಸಲಿಲ್ಲ. ಕೃಷಿಯಲ್ಲಿ ಸದಾ ಏನಾದರೊಂದು ಮಾಡ ಬೇಕೆಂಬ ತುಡಿತದಲ್ಲಿದ್ದ ಗಂಗಣ್ಣ ಅವರು ಕುಂಬಳಕಾಯಿ ಬೀಜವನ್ನು ಬಿತ್ತಿ ಕೃಷಿ ಆರಂಭಿ
ಸಿದ್ದರು. ಇದು ಅಲ್ಪಾವಧಿ ಬೆಳೆ ಯಾದ್ದರಿಂದ ನೋಡಿಯೇ ಬಿಡೋಣ ಎಂದು ಕೃಷಿ ಕ್ರಮಗಳನ್ನು ಚಾಚೂ ತಪ್ಪದೇ ಮಾಡಿದರು. ಈ ಕೃಷಿ ಇವರಿಗೇನು ಹೊಸದಲ್ಲ. ಹಲವು ವರ್ಷಗಳಿಂದಲೂ ಸಿಹಿ ಮತ್ತು ಬೂದ ಕುಂಬಳಕಾಯಿ ಬೆಳೆಯುವ ಪರಿಣಿತರು.
ರೈತರಿಗೆ ಮಾದರಿಯಾದ ಗಂಗಣ್ಣ: ಆಯಾಯ ಸಂದರ್ಭಕ್ಕೆ ತಕ್ಕಂತೆ ಯಾವ ಬೆಳೆ ಬೆಳೆದರೆ ಅನು ಕೂಲವಾಗಬಹುದು ಎಂಬುದನ್ನು ಅರಿತು ಅದನ್ನು ಬೆಳೆದು ಆರ್ಥಿಕ ಮಟ್ಟ ಸುಧಾರಿಸಿ ಕೊಳ್ಳಲು ಮುಂದಾಗಬೇಕು ಎಂಬುದನ್ನು ಗುಡ್ಡಹಳ್ಳಿ ಗ್ರಾಮದ ಪ್ರಗತಿ ಪರ ರೈತ ಗಂಗಣ್ಣ ತೋರಿಸಿಕೊಟ್ಟಿದ್ದಾರೆ.
ರೈತ ಸಂಘದ ದಿನಾಚರಣೆಯಲ್ಲಿ ಕುಂಬಳಕಾಯಿ ಗಂಗಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದ್ದೇನೆ. ಕುಂಬಳ ಕಾಯಿ ಗಂಗಣ್ಣ ಅವರಿಗೆ ತೋಟಗಾರಿಕೆ ಇಲಾಖೆ ಪ್ರೋತ್ಸಾಹಿಸ ಬೇಕು. ಕುಂಬಳ ಕಾಯಿ ಗಂಗಣ್ಣ ಕಷ್ಟಪಟ್ಟು ಕುಂಬಳ ಕಾಯಿ ಬೆಳೆದಿದ್ದಾರೆ. ಬೆಲೆ ಸಿಗದೆ ಕಂಗಾಲಾಗಿರುವ ರೈತ ಗಂಗಣ್ಣ ಅವರಿಗೆ ಸರ್ಕಾರದ ನೆರವು ಅಗತ್ಯವಿದೆ.
●ಹೊಸಪಾಳ್ಯದ ಲೋಕೇಶ್,
ತಾ.ರೈತ ಸಂಘದ ಅಧ್ಯಕ್ಷ
*ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.