Paralympics; ಪ್ಯಾರಾ ಶಟ್ಲರ್‌ ಗಳಿಗೆ ನಗದು ಬಹುಮಾನ


Team Udayavani, Sep 24, 2024, 11:34 PM IST

Cash prize for para shuttlers

ಹೊಸದಿಲ್ಲಿ: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಶಟ್ಲರ್‌ಗಳಿಗೆ “ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಆಫ್ ಇಂಡಿಯಾ’ (ಬಿಎಐ) 50 ಲಕ್ಷ ರೂ. ಬಹುಮಾನ ಘೋಷಿಸಿದೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾ ಶಟ್ಲರ್ 5 ಪದಕ ಜಯಿಸಿದ್ದರು. ಇದರಲ್ಲಿ ಒಂದು ಚಿನ್ನವೂ ಸೇರಿತ್ತು. ಉಳಿದಂತೆ 2 ಬೆಳ್ಳಿ ಹಾಗೂ 2 ಕಂಚಿನ ಪದಕಗಳಿದ್ದವು.

ಪುರುಷರ ಸಿಂಗಲ್ಸ್‌ ಎಸ್‌ಎಲ್‌3 ವಿಭಾಗದಲ್ಲಿ ಬಂಗಾರ ಗೆದ್ದ ನಿತೇಶ್‌ ಕುಮಾರ್‌ ಅವರಿಗೆ 15 ಲಕ್ಷ ರೂ. ಬಹುಮಾನ ಲಭಿಸಲಿದೆ. ಬೆಳ್ಳಿ ಗೆದ್ದ ಸುಹಾಸ್‌ ಯತಿರಾಜ್‌ (ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ವಿಭಾಗ) ಮತ್ತು ತುಳಸೀಮತಿ ಮುರುಗೇಶನ್‌ (ವನಿತಾ ಸಿಂಗಲ್ಸ್‌ ಎಸ್‌ಯು5) ತಲಾ 10 ಲಕ್ಷ ರೂ. ಪಡೆಯಲಿದ್ದಾರೆ.

ಕಂಚಿನ ಪದಕ ಗೆದ್ದ ಮನೀಷಾ ರಾಮದಾಸ್‌ (ವನಿತಾ ಸಿಂಗಲ್ಸ್‌ ಎಸ್‌ಯು5) ಮತ್ತು ನಿತ್ಯಶ್ರೀ ಶಿವನ್‌ (ವನಿತಾ ಸಿಂಗಲ್ಸ್‌ ಎಸ್‌ಎಚ್‌6) ತಲಾ 7.5 ಲಕ್ಷ ರೂ. ಪಡೆಯುವರು. ಇವರಲ್ಲಿ ತುಳಸೀಮತಿ, ಮನೀಷಾ ಮತ್ತು ನಿತ್ಯಶ್ರೀ ಅವರು ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ವನಿತಾ ಶಟ್ಲರ್‌ಗಳಾಗಿದ್ದಾರೆ.

“ಸಾಧನೆ ಗುರುತಿಸಿದ್ದೇವೆ’

“ಭಾರತದ ಪ್ಯಾರಾ ಬ್ಯಾಡ್ಮಿಂಟನ್‌ ಆಟಗಾರರು ವಿಶ್ವ ದರ್ಜೆಯ ಪ್ಯಾರಾಲಿಂಪಿಕ್ಸ್‌ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಬಿಎಐ ಮುಂದಿರುವ ಒಂದು ಮಾರ್ಗ ಇದಾಗಿದೆ. ದೇಶಾದ್ಯಂತ ಪ್ಯಾರಾ ಬ್ಯಾಡ್ಮಿಂಟನ್‌ ಪ್ರಗತಿಗೆ ನಾವು ಬದ್ಧರಾಗಿದ್ದೇವೆ’ ಎಂಬುದಾಗಿ ಬಿಎಐ ಪ್ರಧಾನ ಕಾರ್ಯದರ್ಶಿ ಸಂಜಯ್‌ ಮಿಶ್ರಾ ಹೇಳಿದರು.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Siddu-Cong

Congress: ಶಾಸಕಾಂಗ ಪಕ್ಷದ ಸಭೆ ಇಲ್ಲ: ಸಿಎಂ ಸಿದ್ದರಾಮಯ್ಯ ಇಂದು ಕೇರಳಕ್ಕೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Udupi: ಕಸ್ತೂರಿ ರಂಗನ್‌ ವರದಿ ಬಡವರ ಮೇಲಿನ ದಾಳಿ

Udupi: ಕಸ್ತೂರಿ ರಂಗನ್‌ ವರದಿ ಬಡವರ ಮೇಲಿನ ದಾಳಿ

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

BJP-protest

MUDA Scam: ಹೈಕೋರ್ಟ್‌ ತೀರ್ಪು ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hockeyIndia-Germany: Two match hockey series

Hockey; ಭಾರತ-ಜರ್ಮನಿ: ಎರಡು ಪಂದ್ಯಗಳ ಹಾಕಿ ಸರಣಿ

Tennis Final: Mixed results for India: Jeevan-Vijay pair win first title

Tennis Final: ಭಾರತಕ್ಕೆ ಮಿಶ್ರಫ‌ಲ: ಜೀವನ್‌-ವಿಜಯ್‌ ಜೋಡಿಗೆ ಮೊದಲ ಪ್ರಶಸ್ತಿ

1-kllll

BCCIಯಿಂದ ಕಲಿಯಿರಿ: ಪಿಸಿಬಿಗೆ ಅಕ್ಮಲ್‌ ಸಲಹೆ !

Rehane (2)

Irani Trophy: ರಹಾನೆ ಮುಂಬಯಿ ನಾಯಕ

P-V-sindhu

Badminton ತಾರೆ ಪಿ.ವಿ.ಸಿಂಧುಗೆ ಅನೂಪ್‌ ನೂತನ ಕೋಚ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Siddu-Cong

Congress: ಶಾಸಕಾಂಗ ಪಕ್ಷದ ಸಭೆ ಇಲ್ಲ: ಸಿಎಂ ಸಿದ್ದರಾಮಯ್ಯ ಇಂದು ಕೇರಳಕ್ಕೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Kasaragod ಇಲಿ ಜ್ವರ: ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಇಲಿ ಜ್ವರ; ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.