Karkala: ಎಟಿಎಂ ಕಾರ್ಡ್ ಅದಲು ಬದಲು; ಮೋಸ
Team Udayavani, Sep 24, 2024, 11:44 PM IST
ಕಾರ್ಕಳ: ಎಟಿಎಂನಿಂದ ಹಣ ತೆಗೆಯಲು ಹೋಗಿದ್ದ ಮಹಿಳೆಯ ಗಮನ ಬೇರೆಡೆ ಸೆಳೆದು ಎಟಿಎಂ ಕಾರ್ಡ್ ಬದಲಿಸಿ ಹಣ ಪಡೆದು ವಂಚನೆ ಮಾಡಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕುಕ್ಕುಂದೂರು ಗ್ರಾಮದ ನಿವಾಸಿ ರಫೀಕ್ ಆಹ್ಮದ್ ಅವರ ಪತ್ನಿ ಸಮೀನಾ ಬೇಗಂ ಅವರು ಕಾರ್ಕಳ ದಲ್ಲಿ ಎಟಿಎಂನಿಂದ ಹಣ ತೆಗೆಯಲು ಹೋಗಿದ್ದರು. ಅಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಇದ್ದರು. ಅಲ್ಲಿ ಮಹಿಳೆ ಎಟಿಎಂಗೆ ಹಾಕಿರುವ ಪಾಸ್ ವರ್ಡ್ ಅನ್ನು ಉಪಾಯದಿಂದ ಗುರುತಿಸಿಕೊಂಡು ಮಹಿಳೆಯ ಗಮನ ಬೇರೆಡೆ ಸೆಳೆದು ಎಟಿಎಂ ಯಂತ್ರದಲ್ಲಿಯೇ ಕಾರ್ಡ್ ಇರುವಾಗ ಬದಲಾವಣೆ ಮಾಡಿದ್ದರು. ಮಹಿಳೆ ನಕಲಿ ಎಟಿಎಂನೊಂದಿಗೆ ವಾಪಸಾಗಿದ್ದರು. ಮಹಿಳೆಯ ಎಟಿಎಂ ಇದ್ದ ಅಪರಿಚಿತರು ಕಾರ್ಡ್ ಅನ್ನು ಬಳಸಿಕೊಂಡು 70 ಸಾವಿರ ರೂ. ಹಂತಹಂತವಾಗಿ ಡ್ರಾ ಮಾಡಿ ಮೋಸ ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.