UV Fusion: ಇನ್ನಾದರೂ ಎಚ್ಚೆತ್ತುಕೋ ಮಾನವ


Team Udayavani, Sep 25, 2024, 11:22 AM IST

3-uv-fusion

ಪ್ರಕೃತಿಗೆ ನಾವು ಏನು ನೀಡುತ್ತೇವೆಯೋ ಅದುವೇ ನಮಗೆ ಮರಳಿ ಸಿಗುತ್ತದೆ. ಇದುವೇ ಕರ್ಮ ಸಿದ್ಧಾಂತ. ಮಾನವನ ನಿರಂತರ ಶೋಷಣೆಯಿಂದಾಗಿ ಪ್ರಕೃತಿಯ ಮಡಿಲು, ಒಡಲು ನಿರಂತರ ಏಳುಬೀಳನ್ನು ಎದುರಿಸುತ್ತಿದೆ. ಮನುಷ್ಯನ ಉಪಟಳವನ್ನು ತಡೆದುಕೊಳ್ಳುವ ಶಕ್ತಿ ಇನ್ನು ಪ್ರಕೃತಿಗಿಲ್ಲ. ಅದೀಗ ಕೆರಳುವುದು ಸಹಜವೇ!

ಅತಿವೃಷ್ಟಿ- ಅನಾವೃಷ್ಟಿ ಎನ್ನುವ ಎರಡು ಪ್ರಬಲ ಅಸ್ತ್ರಳು ಪ್ರಕೃತಿ ಮಾತೆಯ ಬತ್ತಳಿಕೆಯಲ್ಲಿವೆ. ಅದನ್ನು ಬಳಸಿದ್ದೆ ಆದಲ್ಲಿ, ನೈಸರ್ಗಿಕ ವಿಕೋಪದ ಕಡೆಗೆ ನಡಿಗೆ ಹಾಕಿದ್ದೆ ಆದಲ್ಲಿ, ಗಗನಚುಂಬಿ ಕಟ್ಟಡವಾಗಲಿ, ಗುಡ್ಡ ಸಮತಟ್ಟು ಮಾಡಿ ಕಟ್ಟಿದ ಮನೆಗಳು, ಯಾವುದೇ ಕನಸಿನ ಯೋಚನೆಯಾಗಲಿ ಉಳಿಯದು. ಇದು ತಿಳಿದಿದ್ದರೂ, ಮಾನವ ಹಳೆಯ ಚಾಳಿಯನ್ನೇ ಮುಂದುವರಿಸುತ್ತಿದ್ದಾನೆ. ಯಾಕೆಂದರೆ ಅತಿಯಾಸೆಗೆ ಆತ ಬಲಿಯಾಗಿದ್ದಾನೆ.

ಹಚ್ಚ ಹಸುರುನಿಂದ ಕಂಗೊಳಿಸುತ್ತಿದ್ದ ಮಲೆಗಳು ಇಂದು ನಿರಂತರ ಮಳೆಗೆ ಜರಿಯುತ್ತಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಬೆಳವಣಿಗೆ ಹೆಚ್ಚಿದೆ. ಇದಕ್ಕೆ ಕಾರಣ ಮಾನವನ ಪ್ರಕೃತಿ ಮೇಲಿನ ಅತಿಯಾದ ಮಮಕಾರ, ಪ್ರೀತಿ. ಈ ಪ್ರೀತಿ ತಮ್ಮ ನೆಲೆಯನ್ನೇ ಕೆಡಿಸುವಷ್ಟು, ನದಿಯ ದಿಕ್ಕನ್ನೇ ಬದಲಾಯಿಸುವಷ್ಟು, ಸಾವನ್ನು ಇನ್ನಷ್ಟು ಹತ್ತಿರಕ್ಕೆ ತರುವಷ್ಟು. ಇದುವೇ ಮಾನವನಿಗೆ ಪ್ರಕೃತಿ ಮೇಲಿನ ಅಭಿಮಾನ.

ಶಿರೂರು ಮತ್ತು ವಯನಾಡಿನಲ್ಲಿ ಸಂಭವಿಸಿದ ಘಟನೆಗಳು ಎಷ್ಟೇ ನಡೆದರೂ ಪ್ರಕೃತಿ ಪೀಡಕರಿಗೆ ಮಾತ್ರ ಬುದ್ಧಿ ಬರದು. ಕಾಡನ್ನು ನಾಡಾಗಿ ಮಾಡುವ ಅವಸರ ಅವರನ್ನು ಸರಸರನೇ ಪರಲೋಕಕ್ಕೆ ಕೊಂಡೊಯ್ಯುತ್ತದೆ ಎನ್ನುವ ಸತ್ಯ ಅವರ ಅರಿವಿಗೆ ಬರುವುದು ಯಾವತ್ತೋ?

ಪ್ರತೀ ಮಳೆ ಬಂದಾಗಲೂ ಪ್ರೇ ಫಾರ್‌ ಕೇರಳ, ಪ್ರೇ ಫಾರ್‌ ವಯನಾಡು ಎನ್ನುವ ಸ್ಟೇಟಸ್‌ ಎಲ್ಲರ ಮೊಬೈಲ್‌ ನಲ್ಲೂ ಹರಿದಾಡುತ್ತದೆ. ಮಾನವ ಮಾಡಿದ ತಪ್ಪಿಗೆ ದೇವರಲ್ಲಿ ಕ್ಷಮೆ ಕೋರಿದರೆ ಏನು ಫ‌ಲ? ಅತಿಯಾಸೆ ಗತಿಗೇಡು ಮಾಡುವ ಚಿಂತೆಯನ್ನು ಆತ ಈ ಮೊದಲೇ ಕೈ ಬಿಟ್ಟಿದ್ದರೆ ಈ ಗತಿ ಬರುತ್ತಿತ್ತಾ. ಈ ರೀತಿಯ ಸರಣಿ ಘಟನೆಗಳು ನಡೆಯುತ್ತಿತ್ತಾ? ಖಂಡಿತವಾಗಿಯೂ ಇಲ್ಲ.

ಇನ್ನಾದರೂ ಎಚ್ಚೆತ್ತುಕೋ ಮಾನವ ನಿನ್ನ ಬಳಿ ಇರುವುದು ಇನ್ನು ಕೆಲವೇ ದಿನಗಳು ಮಾತ್ರ. ನಮ್ಮನ್ನು ಸಲಹುವ ಪರಿಸರದ ಒಡಲನ್ನು ಬರಿದು ಮಾಡಬೇಡ. ನಿನ್ನ ಮುಂದಿನ ತಲೆಮಾರು ಬೆಳಕು ಕಾಣಲು ಪರಿಸರ ಬೇಕೆಂಬುದನ್ನು ಮರೆಯಬೇಡ. ನಾನು ಏನೇ ಮಾಡಿದರು ಏನು ಆಗದೆಂದು ಮೆರೆಯಬೇಡ. ಕರ್ಮ ಯಾರನ್ನೂ ಬಿಡುವುದಿಲ್ಲ.

- ಗಿರೀಶ್‌ ಪಿ.ಎಂ.

ಕಾಸರಗೋಡು

ಟಾಪ್ ನ್ಯೂಸ್

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

17-v-somanna

Hubli: ಈ ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

High-Court

High Court Order: ಕೋರ್ಟ್‌ ಕಲಾಪ ವೀಡಿಯೋ ಬಳಕೆಗೆ ನಿಷೇಧ

Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ‌ ಇದ್ದಾರೆ… ಸಚಿವ ಮಧು ಬಂಗಾರಪ್ಪ

Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ‌ ಇದ್ದಾರೆ… ಸಚಿವ ಮಧು ಬಂಗಾರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

7-uv-fusion

Trip: ಕೊನೆಗೂ ಈಡೇರಿತು ತ್ರಿಮೂರ್ತಿಗಳ ಪ್ರವಾಸ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

Kaalapatthar Celebrity Show: ಸೆಲೆಬ್ರೆಟಿ ಶೋನಲ್ಲಿ ಕಾಲಾಪತ್ಥರ್‌

Kaalapatthar Celebrity Show: ಸೆಲೆಬ್ರೆಟಿ ಶೋನಲ್ಲಿ ಕಾಲಾಪತ್ಥರ್‌

15

Container Kannada Movie: ಕಂಟೈನರ್‌ನೊಳಗೆ ಹೊಸಬರ ಕನಸು

14

Life Of Mrudula Kannada Movie: ಮೃದುಲಾಗೆ ಮೆಚ್ಚುಗೆ

Gopilola Trailer: ನೈಸರ್ಗಿಕ ಕೃಷಿಯತ್ತ ಗೋಪಿಲೋಲ

Gopilola Trailer: ನೈಸರ್ಗಿಕ ಕೃಷಿಯತ್ತ ಗೋಪಿಲೋಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.