Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!
Team Udayavani, Sep 25, 2024, 11:38 AM IST
ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ಕೊಲೆಗೀಡಾದ ಮಹಾಲಕ್ಷ್ಮೀ ಮರಣೋತ್ತರ ಪರೀಕ್ಷೆ ನಡೆಸಿರುವ ಬೌರಿಂಗ್ ಆಸ್ಪತ್ರೆ ವೈದ್ಯರು ಪೊಲೀಸರಿಗೆ ಪ್ರಾಥಮಿಕ ಮಾಹಿತಿ/ವರದಿ ಸಲ್ಲಿಸಿದ್ದಾರೆ.
ಮಹಾಲಕ್ಷ್ಮೀ ಮೃತ ದೇಹದ 50ಕ್ಕೂ ಅಧಿಕ ತುಂಡುಗಳನ್ನು ಮರು ಜೋಡಣೆ ಮಾಡಿರುವ ವೈದ್ಯರು ಬಳಿಕ ಮರಣೋ ತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ತನಿಖೆಗೆ ಸಹಕಾರ ಆಗುವ ನಿಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ವೈದ್ಯರು ವೈಯಾಲಿ ಕಾವಲ್ ಪೊಲೀಸರಿಗೆ ಸಲ್ಲಿಸಿದ್ದಾರೆ. ಒಂದೆರಡು ದಿನಗಳಲ್ಲಿ ಡಿಎನ್‌ಎ ಪರೀಕ್ಷೆ ಸೇರಿ ಕೆಲ ಪರೀಕ್ಷೆಗಳು ನಡೆಯಲಿದ್ದು, ಒಂದು ವಾರದೊಳಗೆ ಸಂಪೂರ್ಣ ವರದಿ ನೀಡಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಮಹಾಲಕ್ಷ್ಮೀಯ ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದು ಕೊಂದಿರುವ ಹಂತಕ, ಬಳಿಕ ತಲೆಯನ್ನು ಬೇರ್ಪಡಿಸಿ, ಆ ನಂತರ ದೇಹದ ಇತರೆ ಭಾಗಗಳನ್ನು ಸುಮಾರು 50 ತುಂಡುಗಳನ್ನಾಗಿ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಾಗಿ ಶೋಧ: ಅಕ್ರಮ ಸಂಬಂಧ ಹಿನ್ನೆಲೆಯಲ್ಲೇ ಮಹಾಲಕ್ಷ್ಮೀಯನ್ನು ಭೀಕರವಾಗಿ ಹತ್ಯೆಗೈದಿರುವ ಹಂತಕ ಬಂಧನಕ್ಕಾಗಿ ಪೊಲೀಸರು, ಪಶ್ಚಿಮ ಬಂಗಾಳ, ಒಡಿಶಾ ಸೇರಿ ಈಶಾನ್ಯ ರಾಜಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೊಲೆ ಬಳಿಕ ಆರೋಪಿಯು ಪಶ್ಚಿಮ ಬಂಗಾಳಕ್ಕೆ ತೆರಳಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.
ಪೊಲೀಸರ ಎರಡು ತಂಡಗಳು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಹಂತಕನ ಪತ್ತೆಗೆ ಹುಡುಕಾಟ ತೀವ್ರಗೊಳಿಸಿವೆ. ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವುದರಿಂದ ಆತನ ಲೋಕೇಶನ್ ಪತ್ತೆಯಾಗುತ್ತಿಲ್ಲ. ಈಗಾಗಲೇ ಪೊಲೀಸರು ಒಡಿಶಾದಲ್ಲಿನ ಆರೋಪಿಯ ಸಂಬಂಧಿಕರ ಸಂಪರ್ಕಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಬೇರೆ ಮೊಬೈಲ್ ನಂಬರ್ ಬಳಸಿ ಕುಟುಂಬದ ಸದಸ್ಯರು ಅಥವಾ ಸ್ನೇಹಿತರನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಹೀಗಾಗಿ ಪೊಲೀಸರು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಬರುವ ಮೊಬೈಲ್ ಕರೆಗಳ ಬಗ್ಗೆಯೂ ನಿಗಾವಹಿಸಿದ್ದಾರೆ.
ಪದೇ ಪದೆ ವಾಸ್ತವ್ಯ ಬದಲಿಸುತ್ತಿರುವ ಹಂತಕ:
ಹಂತಕ ಪದೇ ಪದೆ ತನ್ನ ವಾಸ್ತವ್ಯ ಬದಲಿಸುತ್ತಿರುವುದರಿಂದ ಬಂಧನ ಸ್ವಲ್ಪ ತಡವಾಗುತ್ತಿದ್ದು, ಮಹಾಲಕ್ಷ್ಮೀಗೆ ಆರೇಳು ತಿಂಗಳಿಂದ ಪರಿಚಯವಾಗಿರುವ ಹಂತಕ ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇನ್ನು ಮಹಾಲಕ್ಷ್ಮೀ ಮನೆಯ ಗೋಡೆಗಳು ಮತ್ತು ಫ್ರಿಡ್ಜ್ನಲ್ಲಿ ನಾಲ್ಕೈದು ಮಂದಿಯ ಬೆರಳಚ್ಚಿನ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ಒಬ್ಬನೇ ಕೊಲೆ ಮಾಡಿದ್ದಾನೆಯೇ ಅಥವಾ 3-4 ಮಂದಿ ಕೃತ್ಯ ಎಸಗಿದ್ದಾರೆಯೇ? ಎಂಬುದು ಖಚಿತವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.