Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ
Team Udayavani, Sep 25, 2024, 11:42 AM IST
ಬೆಂಗಳೂರು: ಯುವತಿಗಾಗಿ ಬಾಲ್ಯ ಸ್ನೇಹಿತನ ಮೇಲೆ ಹಾಲೋಬ್ರಿಕ್ಸ್ ಎತ್ತಿಹಾಕಿ ಹತ್ಯೆಗೈದಿದ್ದ ಯುವಕನ್ನು ಸಂಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕಿದಿಯೂರು ಮೂಲದ ದಿವೇಶ್ ಹೆಗಡೆ (24) ಬಂಧಿತ. ಆರೋಪಿ ಸೆ.21ರಂದು ಮುಂಜಾನೆ ಬಾಲ್ಯ ಸ್ನೇಹಿತ ವರುಣ್ ಕೋಟ್ಯಾನ್ (24)ನನ್ನು ಹತ್ಯೆಗೈದು ಪರಾರಿಯಾಗಿದ್ದ. ಈ ಸಂಬಂಧ ಆರೋಪಿಯನ್ನು ಸಂಜಯ ನಗರದ ಸೌಂದರ್ಯ ಪಾರ್ಕ್ ಬಳಿ ಬಂಧಿಸಲಾಗಿದೆ. ಆರೋಪಿ ಪ್ರೀತಿಸು ತ್ತಿದ್ದ ಯುವತಿ ವರುಣ್ ಕೋಟ್ಯಾನ್ ಜತೆ ಹೆಚ್ಚು ಓಡಾಡುತ್ತಿದ್ದರಿಂದ ಕೋಪಗೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಉಡುಪಿ ಮೂಲದ ವರುಣ್ ಮತ್ತು ದಿವೇಶ್ ಹಾಗೂ ಯುವತಿ ಶಾಲಾ ಸ್ನೇಹಿತರಾಗಿದ್ದು, ಬೆಂಗಳೂರಿಗೆ ಬಂದು ಗೆದ್ದಲಹಳ್ಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಮೂವರು ಒಂದು ವರ್ಷದಿಂದ ವಾಸವಾಗಿದ್ದರು. ಯುವತಿ ಹೋಟೆಲ್‌ವೊಂದರಲ್ಲಿ ಸ್ವಾಗತಕಾರಿಣಿಯಾಗಿದ್ದು, ದಿವೇಶ್, ಝೋಮೋಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ವರುಣ್, ಬಾಗಲೂರಿನಲ್ಲಿರುವ ಸಂಸ್ಥೆಯೊಂದರಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೆಲ ತಿಂಗಳ ಹಿಂದೆ ಯುವತಿ ಎಂ.ಜಿ.ರಸ್ತೆ ಸಮೀಪದಲ್ಲಿರುವ ಪಿಜಿಗೆ ಸ್ಥಳಾಂತರವಾಗಿದ್ದರು.
ಬಾಲ್ಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ ಆರೋಪಿ: ಆರೋಪಿ ದಿವೇಶ್, 2 ತಿಂಗಳಿಂದ ಬಾಲ್ಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಬಳಿ ಹೇಳಿಕೊಂಡಿರಲಿಲ್ಲ. ಆದರೆ, ವರುಣ್ ಕೋಟ್ಯಾನ್, ಆಕೆಯ ಜತೆ ಓಡಾಡುತ್ತಿದ್ದು, ತನ್ನ ಭಾವನೆಗಳನ್ನು ಪರೋಕ್ಷವಾಗಿ ಆಕೆಗೆ ತಿಳಿಸುತ್ತಿದ್ದ. ಅದನ್ನು ತಿಳಿದ ಆರೋಪಿ, ವರುಣ್ ಜತೆ ಜಗಳವಾಡಿದ್ದಾನೆ. ಅಲ್ಲದೆ, ಈಗಾಗಲೇ ನೀನು ಒಂದು ಯುವತಿಯನ್ನು ಪ್ರೀತಿಸುತ್ತಿದ್ದು, ಆದರೂ ತನ್ನ ಸ್ನೇಹಿತೆಯ ಜತೆ ತುಂಬಾ ಸಲುಗೆಯಿಂದ ಇರುತ್ತಿಯಾ ಎಂದು ಪ್ರಶ್ನಿಸಿದ್ದಾನೆ. ಆಗ ರೂಮ್‌ನಲ್ಲಿದ್ದ ಇತರೆ ಯುವಕರು ಇಬ್ಬರಿಗೂ ಸಮಾಧಾನ ಮಾಡಿದ್ದರು. ಸೆ.21ರಂದು ಇದೇ ವಿಷಯವಾಗಿ ವರುಣ್ ಜೊತೆಗೆ ದಿವೇಶ್ ಜಗಳ ತೆಗೆದು, ತಲೆ ಮೇಲೆ ಇಟ್ಟಿಗೆ ಎತ್ತಿಹಾಕಿ ಕೊಲೆಗೈದಿದ್ದನು.
ಇನ್ನು ಯುವತಿ ವಿಚಾರಣೆಯಲ್ಲಿ, ವರುಣ್ ಮತ್ತು ದಿವೇಶ್ ತನ್ನನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಿಲ್ಲ. ವರುಣ್ ತನ್ನೊಂದಿಗೆ ಹೆಚ್ಚು ಸಲುಗೆಯಿಂದ ಇದ್ದ. ದಿವೇಶ್, ಹೆಚ್ಚು ಮಾತನಾಡುತ್ತಿರಲಿಲ್ಲ. ಏನನ್ನು ಹೇಳಿಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸ್ನೇಹಿತನ ಬರ್ತ್ ಡೇ ಮರುದಿನವೇ ಕೊಲೆ:
ಸೆ.20ರಂದು ವರುಣ್ ಕೋಟ್ಯಾನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೂವರು ಕೋರಮಂಗಲದಲ್ಲಿರುವ ಪಬ್‌ಗ ಹೋಗಿ ಪಾರ್ಟಿ ಮಾಡಿದ್ದಾರೆ. ರಾತ್ರಿ ಹೊರ ಬಂದಾಗ, ಆರೋಪಿ ದಿವೇಶ್, ತನ್ನ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಆಮೇಲೆ ನೋಡೋಣ ಎಂದಿದ್ದಾಳೆ. ಆದರೆ, ಆ ಯುವತಿ ವರುಣ್ ಜತೆ ಸಲುಗೆಯಿಂದ ವರ್ತಿಸಿದ್ದಾಳೆ. ಅದರಿಂದ ಆರೋಪಿ ಕೋಪಗೊಂಡಿದ್ದ. ಬಳಿಕ ಮೂವರು ಮನೆಗೆ ಕಡೆ ಬಂದಿದ್ದು, ಯುವತಿ ತನ್ನ ಪಿಜಿಗೆ ಹೋಗಿದ್ದಾಳೆ. ಇನ್ನು ಸೆ.21ರಂದು ಮುಂಜಾನೆ 8 ಗಂಟೆ ಸುಮಾರಿಗೆ ವರುಣ್ ಮತ್ತು ದಿವೇಶ್ ನಡುವೆ ಯುವತಿ ವಿಚಾರಕ್ಕೆ ಗಲಾಟೆ ಆಗಿದ್ದು, ಮನೆಯಿಂದ ಹೊರಗಡೆ ಬಂದು ಪಾದಚಾರಿ ಮಾರ್ಗದಲ್ಲಿ ಹೊಡೆದಾಡುತ್ತಿದ್ದರು. ಅದು ವಿಕೋಪಕ್ಕೆ ಹೋದಾಗ, ಆರೋಪಿ ದಿವೇಶ್, ವರುಣ್ ಮೇಲೆ ಹಲ್ಲೆ ನಡೆಸಿ ಕೆಳಗೆ ಬೀಳಿಸಿದ್ದಾನೆ. ಬಳಿಕ ಅಲ್ಲೇ ಇದ್ದ ಹಾಲೋಬ್ರಿಕ್ಸ್ ಅನ್ನು ತಲೆ ಮೇಲೆ ಎತ್ತಿ ಹಾಕಿ ಹತ್ಯೆಗೈದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.