Karkala: ಪಾರ್ಕಿಂಗ್‌ಗೆ ಜಾಗವೇ ಇಲ್ಲ; ಹಾಗಾಗಿ ಕಂಡ ಕಡೆ ಠಿಕಾಣಿ!
ಕಾರ್ಕಳ ಪುರಸಭೆಗೆ ವಾಹನಗಳ ಸವಾಲು
Team Udayavani, Sep 25, 2024, 4:12 PM IST
ಕಾರ್ಕಳ: ತಾಲೂಕು ಕೇಂದ್ರ ಭಾಗವಾಗಿರುವ ಪೇಟೆ ಪರಿಸರ ಅಭಿವೃದ್ಧಿ ಹೊಂದಿ, ವಾಹನ, ಜನದಟ್ಟಣೆ ಹೆಚ್ಚಿದೆ ಜನ ಮತ್ತು ವಾಹನ ಸಾಂದ್ರತೆಗೆ ತಕ್ಕಂತೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಪಾರ್ಕಿಂಗ್ ಗೋಳಾಟಕ್ಕೆ ಮುಕ್ತಿ ಸಿಕ್ಕಿಲ್ಲ.
ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾನೂನು ಜಾರಿಯಾಗದೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಪರಿಣಾಮ ನಡೆದಾಡಲೂ ಸಾಧ್ಯವಿಲ್ಲದ ಸ್ಥಿತಿ ಪೇಟೆಯಲ್ಲಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಭಯದ ನಡುವೆ ಅತ್ತಿತ್ತ ಸಾಗಬೇಕಾದ ಪರಿಸ್ಥಿತಿಯಿಂದ ಜನ ತೊಂದರೆ ಅನುಭವಿ ಸುತ್ತಿದ್ದಾರೆ. ಅಪಘಾತಗಳೂ ಹೆಚ್ಚುತ್ತಿದೆ.ನಗರದಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲದ ಕಾರಣ ಬೈಕ್ ಕಾರುಗಳನ್ನು ಬಸ್ ನಿಲ್ದಾಣ ಪಕ್ಕದಲ್ಲಿ, ಅಂಗಡಿ ಮುಂಗಟ್ಟುಗಳ ಮುಂದೆ, ರಸ್ತೆ ಬದಿ ಖಾಲಿ ಜಾಗದಲ್ಲಿ, ಪುಟ್‌ಪಾತ್‌ನಲ್ಲಿ ಇಟ್ಟು ಹೋಗುವುದು ಕಂಡುಬರುತ್ತಿದೆ. ಕೆಲವು ಅಂಗಡಿಯವರು ಗ್ರಾಹಕರಿಗಷ್ಟೇ ಪಾರ್ಕಿಂಗ್ ಎಂದು ಬೋರ್ಡ್ ಹಾಕಿದ್ದಾರೆ.
ಗ್ರಾಮೀಣ ಭಾಗದಿಂದ ಪ್ರತಿದಿನ ನೂರಾರು ವಾಹನಗಳು ನಗರಕ್ಕೆ ಬರುತ್ತವೆ. ನಗರದೊಳಗೆ ಎಲ್ಲಿ ವಾಹನ ನಿಲ್ಲಿಸಬೇಕು ಎನ್ನುವುದೆ ತಿಳಿಯದೆ ಅಲ್ಲಲ್ಲೆ ಬಿಟ್ಟು ತೆರಳುತ್ತಾರೆ. ದಶಕಗಳಿಂದ ರಸ್ತೆ ವಿಸ್ತರಣೆ ಕೂಗು ಇದೆ. ಖಾಸಗಿ ಜಾಗಕ್ಕೆ ಸಂಬಂಧಿಸಿ ಸಮಸ್ಯೆಯೂ ಇದ್ದು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿದೆ.
ಎಲ್ಲೆಲ್ಲಿ ಸಮಸ್ಯೆ ಗಂಭೀರ?
ಬಸ್ ನಿಲ್ದಾಣದಿಂದ ಶ್ರೀ ವೆಂಕಟರಮಣ ದೇವಸ್ಥಾದ ಪೇಟೆಯುದ್ದಕ್ಕೆ, ಮೂರು ಮಾರ್ಗ, ಪ್ರಕಾಶ್ ಹೊಟೇಲ್ ಮುಂಭಾಗ, ಅನಂತಶಯನ ಸರ್ಕಲ್, ಸ್ಟೇಟ್‌ಬ್ಯಾಂಕ್ ಎದುರು, ಮಾರ್ಕೆಟ್ ರಸ್ತೆ ಹೀಗೆ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ ಗಂಭಿರ ಸ್ವರೂಪದಲ್ಲಿದೆ.
ಪೇ ಪಾರ್ಕಿಂಗ್ ಮಾತಿಗೆ ಸೀಮಿತ
ಕಾರ್ಕಳದಲ್ಲಿ ಪೂರ್ಣ ಪ್ರಮಾಣದ ಸಂಚಾರಿ ಪೊಲೀಸ್ ಠಾಣೆಯೂ ಇಲ್ಲ. ಇದರಿಂದ ನಿಯಂತ್ರಣಕ್ಕೆ ಯಾರೂ ಇಲ್ಲ, ನಗರದಲ್ಲಿ ಶುಲ್ಕ ಸಹಿತ ಪಾರ್ಕಿಂಗ್ ಅವಶ್ಯಕತೆ ಕುರಿತು ಈ ಹಿಂದಿನ ಪುರಸಭೆ ಆಡಳಿತದಲ್ಲಿ ಚರ್ಚೆಯಾಗಿ ಮಾತಿಗೆ ಸೀಮಿತಗೊಂಡಿದೆ.
ಏನು ಮಾಡಬಹುದು?
- ಪೇಟೆಯೊಳಗೆ ಸಾಮಗ್ರಿ ಇಳಿಸಲು ಸಮಯ ನಿಗದಿ
- ದ್ವಿಚಕ್ರ ವಾಹನ ನಿಲ್ಲಿಸಲು ನಿಗದಿತ ಸ್ಥಳ ಸೂಚಿಸಬೇಕು.
- ನಾಮಫಲಕ ಅಳವಡಿಸಿ ಕಠಿನ ನಿಯಮ ಪಾಲನೆ
- ವಾರದ ದಿನಗಳನ್ನು ಗೊತ್ತುಪಡಿಸಿ ಸೂಚಿತ ಸ್ಥಳದಲ್ಲಿ ವಾಹನ ನಿಲ್ಲಿಸಲು ಕ್ರಮ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.