UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

Team Udayavani, Sep 25, 2024, 5:15 PM IST

15-uv-fusion

ನಭದಲ್ಲಿ ಹಾರುವ ವಿಮಾನದ ವೇಗಕ್ಕೂ ಮಂಗಳೂರಿನ ರಸ್ತೆಗಳಲ್ಲಿ ಚಲಿಸುವ ಬೆಳಗ್ಗಿನ ಸಿಟಿ ಬಸ್‌ ಗಳ ವೇಗಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಕಾಲೇಜಿಗೆ ಹೋಗಲು ಈ ಬಸ್‌ ಹತ್ತಿ ನಡು ಭಾಗದಲ್ಲಿ ಹೋಗಿ ನಿಂತು ಬ್ಯಾಗನ್ನು ಬೆನ್ನಿನಿಂದ ಇಳಿಸಿದರೆ ಒಂದು ಕ್ಷಣ ಮನ ನಿರಾಳವೆನಿಸುತ್ತದೆ. ಅಲ್ಲಿಗೆ ಕಂಡಕ್ಟರ್‌ ನ ದುಂಬು ಪೋಲೇ, ಪಿರ ಪೋಲೇ, ಬ್ಯಾಗ್‌ ದೆಪ್ಪುಲೆ ಎಂಬ ಮಾತಿನಿಂದ ಪಾರಾದಂತೆ ಎಂಬುದು ನನ್ನ ಲೆಕ್ಕಾಚಾರ. ನಾವು ಇಳಿಯಬೇಕಾದ ತಾಣ ಬಂದಾಗ ಬ್ಯಾಗ್‌ ಯಾರ ಕೈಯಲ್ಲಿದೆ ಎಂದು ಪತ್ತೆ ಮಾಡಿ ಇಳಿದರೆ ಅಲ್ಲಿಗೆ ಬೆಳಗ್ಗಿನ ಒಂದು ಯುದ್ದವನ್ನು ಜಯಿಸಿದಂತೆ.

ನಮ್ಮ ಮಂಗಳೂರಿನ ಬಸ್ಸುಗಳಲ್ಲಿ ಬೆಳಗ್ಗಿನ ವೇಳೆ ಸೀಟು ಸಿಗುವುದಿಲ್ಲ ಎಂಬ ಬಲವಾದ ನಂಬಿಕೆ ಇರುವುದರಿಂದ ಬಸ್‌ ಹತ್ತುವಾಗಲೇ ದೇವೆರೇ ಉಂತ್ಯೆರೆ ಒಂಜಿ ಜಾಗ ಕೊರ್ಲೆ ಎಂಬ ಪ್ರಾರ್ಥನೆಯೊಂದಿಗೆ ಬಸ್ಸು ಹತ್ತುವುದರಿಂದ ಹಿಡಿದು, ನಿಂತು ಸಾಕಾದಾಗ ನನಗೊಂದು ಸೀಟು ಸಿಗಲಿ, ನಿಲ್ದಾಣ ಬರುವಾಗ ನಾನೊಮ್ಮೆ ಬೇಗ ಇಳಿದರಾಯ್ತು ಎಂಬ ಭಾವದವರೆಗೂ ನಾವೆಲ್ಲರೂ ಸ್ವಾರ್ಥಿಗಳೇ. ಇನ್ನೂ ನಮ್ಮ ಸೌಜನ್ಯತೆಯೂ ಸಂಪೂರ್ಣವಾಗಿ ಮರೆಯಾಗುವುದು ಪ್ರಯಾಣದ ಆರಂಭ ಮತ್ತು ಅಂತ್ಯದಲ್ಲಿ.

ಬಸ್ಸಿನಲ್ಲಿ ಕುಳಿತವರಲ್ಲಿ ನನ್ನ ಬ್ಯಾಗನ್ನು ಹಿಡಿದುಕೊಳ್ಳುತ್ತೀರಾ ಎಂಬ ಸೌಜನ್ಯತೆಯ ಮಾತನ್ನು ಹೇಳದೇ ದಡಕ್ಕನೆ ಅವರ ಮಡಿಲಿಗೆ ಬ್ಯಾಗ್‌ ಇಡುತ್ತೇವೆ. ಎರಡು – ಮೂರು ಬ್ಯಾಗನ್ನು ಹಿಡಿದುಕೊಂಡವರ ಮಡಿಲಿಗೆ ಇನ್ನೊಂದು ಬ್ಯಾಗ್‌ ನೀಡುವಾಗಲಂತೂ ಬ್ಯಾಗಿನ ಭಾರವನ್ನಾದರೂ ಅಂದಾಜಿಗೆ ಹೇಳಬಹುದು. ಆದರೆ ಅವರ ಮನದ ಭಾರ ಹೇಳತೀರದು. ಮತ್ತೂಮ್ಮೆ ಕಟುಕರಂತೆ ವರ್ತಿಸುವುದು ನಮ್ಮ ಪ್ರಯಾಣದಲ್ಲಿ ಬೆನ್ನಿನ ಭಾರವನ್ನಿಳಿಸಿದ ವ್ಯಕ್ತಿಗೆ ಥ್ಯಾಂಕ್ಸ್‌ ಬಿಡಿ ನಗುಮುಖದಲ್ಲೂ ವಂದಿಸದೆ ಬ್ಯಾಗನ್ನು ಎಳೆದುಕೊಂಡು ಬಸ್ಸು ಇಳಿಯುವಾಗ.

ಬ್ಯಾಗ್‌ ಹಿಡಿದುಕೊಂಡ ವ್ಯಕ್ತಿ ನಿಮ್ಮಿಂದ ಥ್ಯಾಂಕ್ಸ್‌ ಅಪೇಕ್ಷಿಸುತ್ತಾನೋ ಇಲ್ಲವೋ ಎರಡನೇ ವಿಷಯ. ಆದರೆ ನಾವು ಸೌಜನ್ಯತೆಯಿಂದ ನಡೆದುಕೊಳ್ಳುವ ಪರಿ ಮಾತ್ರ ಖಂಡಿತವಾಗಿಯೂ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಭಿಸುತ್ತದೆ. ಬೆಳಗ್ಗೆ ಸರಿಯಾದ ಸಮಯಕ್ಕೆ ಕಾಲೇಜು-ಆಫೀಸಿಗೆ ತಲುಪುವ ಅವಸರ, ಇಪ್ಪತ್ತರ ವಯಸ್ಸಲ್ಲೇ ಅಂಟಿಕೊಂಡ ಅರವತ್ತರ ಮರೆವು, ಬ್ಯಾಗನ್ನು ನೀಡುವಾಗ ಬಾರದ ಥ್ಯಾಂಕ್ಸ್‌ ಹೇಳಲು ಬರುವ ಅಪರಿಚಿತ ಭಾವ.

ಇಂತಹ ದಿನನಿತ್ಯದ ಸಣ್ಣ ಪುಟ್ಟ ವಿಚಾರಗಳಲ್ಲಿ ನಾವು ಸೋಲುತ್ತಿರುವುದರಿಂದಲೇ ದಿನದಿಂದ ದಿನಕ್ಕೆ ನಮ್ಮ ಸಮಾಜದಲ್ಲಿ ಮಾನವೀಯ ಸಂಬಂಧಗಳು, ಮಾನವೀಯ ಗುಣಗಳು ಕಣ್ಮರೆಯಾಗಿ ನಾವು ಮನುಷ್ಯ ಪ್ರಪಂಚದಿಂದ ರಾಕ್ಷಸ ಪ್ರಪಂಚಕ್ಕೆ ಪಯಣಿಸುತ್ತಿದ್ದೆವೆಯೇ ಎಂಬ ಭಾವ ಭಾಸವಾಗುತ್ತಿದೆ.

-ವಿಧಿಶ್ರೀ

ಮಂಗಳೂರು ವಿವಿ

ಟಾಪ್ ನ್ಯೂಸ್

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

KPSC-Meet

Competitive Exam: ಯುಪಿಎಸ್‌ಸಿ ಮಾದರಿ ಕೆಪಿಎಸ್‌ಸಿಯಲ್ಲೂ ಸುಧಾರಣೆಯಾಗಲಿ: ಸಿಎಂ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

ಕೃಷಿ ಕಾಯ್ದೆ ಹೇಳಿಕೆ ವಾಪಸ್‌ ಪಡೆದ ಕಂಗನಾ: ಮೋದಿ ಸ್ಪಷ್ಟನೆ ಕೇಳಿದ ರಾಹುಲ್‌

ಕೃಷಿ ಕಾಯ್ದೆ ಹೇಳಿಕೆ ವಾಪಸ್‌ ಪಡೆದ ಕಂಗನಾ: ಮೋದಿ ಸ್ಪಷ್ಟನೆ ಕೇಳಿದ ರಾಹುಲ್‌

BBK11: ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಗೆ ಪ್ರೇಕ್ಷಕರೇ ಪ್ರಭುಗಳು

BBK11: ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಗೆ ಪ್ರೇಕ್ಷಕರೇ ಪ್ರಭುಗಳು

Mahalakshmi Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ… ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ

Mahalakshmi Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ… ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

7-uv-fusion

Trip: ಕೊನೆಗೂ ಈಡೇರಿತು ತ್ರಿಮೂರ್ತಿಗಳ ಪ್ರವಾಸ

5-uv-fusion

Taro: ಕೆಸುವೆಂದು ಕರುಬಬೇಡಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

KPSC-Meet

Competitive Exam: ಯುಪಿಎಸ್‌ಸಿ ಮಾದರಿ ಕೆಪಿಎಸ್‌ಸಿಯಲ್ಲೂ ಸುಧಾರಣೆಯಾಗಲಿ: ಸಿಎಂ

WhatsApp Image 2024-09-25 at 21.00.45

Kollur: ಮರಕ್ಕೆ ಗುದ್ದಿ ಪಿಕಪ್‌ಗೆ ಢಿಕ್ಕಿಯಾದ ಬಸ್‌; ಹಲವರಿಗೆ ಗಾಯ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

WhatsApp Image 2024-09-25 at 20.56.17

Mangaluru: ಆ್ಯಂಬುಲೆನ್ಸ್‌ ಪಲ್ಟಿ; ರೋಗಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.