Panaji: ಇಲೆಕ್ಟ್ರಿಕ್ ಮೀಟರ್ ಕಳ್ಳತನ ಪ್ರಕರಣ; ಆರೋಪಿ ಬಂಧನ
Team Udayavani, Sep 25, 2024, 7:16 PM IST
ಪಣಜಿ: ಗೋವಾದ ಪರ್ವರಿ ಪೋಲಿಸರು ಕಾರ್ಯಾಚರಣೆ ನಡೆಸಿ 7000 ರೂ ಗಳ ಇಲೆಕ್ಟ್ರಿಕ್ ಮೀಟರ್ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬೆಳಗಾವಿಯ ನರೇಂದ್ರ ಗಾವಡೆ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ಮೂಲದ 25 ವರ್ಷದ ಈ ಯುವಕ ಪರ್ವರಿಯ ಇಲೆಕ್ಟ್ರಿಸಿಟಿ ಡಿಪಾರ್ಟಮೆಂಟ್ ನ ಸಬ್ ಡಿವಿಶನ್ ನಲ್ಲಿ ಕಳ್ಳತನ ಎಸಗಿದ್ದ ಎನ್ನಲಾಗಿದೆ. ಈತ ಕೇವಲ ಇಲೆಕ್ಟ್ರಿಕ್ ಮೀಟರ್ ಮಾತ್ರವಲ್ಲದೆಯೇ ಇತರ ಕಳ್ಳತನದಲ್ಲಿಯೂ ಭಾಗಿಯಾಗಿದ್ದ ಎನ್ನಲಾಗಿದೆ. ಬಂಧಿತ ಆರೋಪಿಯಿಂದ ಪೋಲಿಸರು ಒಂದು ದ್ವಿಚಕ್ರವಾಹನವನ್ನೂ ವಶಪಡಿಸಿಕೊಂಡಿದ್ದಾರೆ, ಈ ವಾಹನ ಕೂಡ ಕಳ್ಳತನ ಮಾಡಿದ್ದೇ ಆಗಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗೋವಾ ಪರ್ವರಿ ಇಲೆಕ್ಟ್ರಿಸಿಟಿ ವಿಭಾಗದಿಂದ ಪರ್ವರಿ ಪೋಲಿಸ್ ಠಾಣೆಯಲ್ಲಿ ಸಪ್ಟೆಂಬರ್ 23 ರಂದು ದೂರು ದಾಖಲಿಸಲಾಗಿತ್ತು. ಅಪರಿಚಿತ ವ್ಯಕ್ತಿಯೋರ್ವ ಇಲೆಕ್ಟ್ರಿಸಿಟಿ ವಿಭಾಗದಿಂದ ಡಿಜಿಟಲ್ ಮೀಟರ್ ಕಳ್ಳತನವಾಗಿರುವ ಬಗ್ಗೆ ಪೋಲಿಸ್ ದೂರು ನೀಡಲಾಗಿತ್ತು. ಪರ್ವರಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.