ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
Team Udayavani, Sep 26, 2024, 2:48 PM IST
ಚೆನ್ನೈ: ಕಾಲಿವುಡ್ (Kollywood) ಸಿನಿರಂಗದ ಇಬ್ಬರು ಸೂಪರ್ ಸ್ಟಾರ್‌ಗಳನ್ನು ಇಟ್ಟುಕೊಂಡು ಖ್ಯಾತ ನಿರ್ದೇಶಕ ಶಂಕರ್ (Shankar) ಅವರು ಐತಿಹಾಸಿಕ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕಾಲಿವುಡ್‌ನಲ್ಲಿʼಇಂಡಿಯನ್ʼ, ʼಅಣ್ಣಿಯನ್ʼ, ʼಎಂದಿರನ್ʼ, ʼಐʼ, ʼ2.0ʼ ನಂತಹ ಬಿಗ್ ಬಜೆಟ್ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ದಿಗ್ಗಜ ನಿರ್ದೇಶಕ ಶಂಕರ್ ಇಬ್ಬರು ಸೌತ್ ಸೂಪರ್ ಸ್ಟಾರ್ ಗಳೊಂದಿಗೆ ದೊಡ್ಡ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘Stree 2’ OTT release: ಓಟಿಟಿಗೆ ಬಂತು ಸೂಪರ್ ಹಿಟ್ ʼಸ್ತ್ರೀ-2ʼ; ಎಲ್ಲಿ ನೋಡಬಹುದು?
ಶಂಕರ್ ತನ್ನ ಕಥೆಯನ್ನು ಹೇಳುವ ರೀತಿಯೇ ಭಿನ್ನವಾಗಿರುತ್ತದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡುತ್ತವೆ. ಕಾಲಿವುಡ್ ದಿಗ್ಗಜ ನಟರೊಂದಿಗೆ ಸಿನಿಮಾ ಮಾಡಿರುವ ಶಂಕರ್ ನಟ ಸೂರ್ಯ(Suriya)- ವಿಕ್ರಮ್(Vikram) ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ಕಾಲಿವುಡ್ ವಲಯದಲ್ಲಿ ಸುದ್ದಿ ಹರಿದಾಡಿದೆ.
ಇದೊಂದು ಐತಿಹಾಸಿಕ ಸಿನಿಮಾವಾಗಲಿದ್ದು, ʼವೇಲ್ಪಾರಿʼ (Velpari novel) ಎನ್ನುವ ಕಾದಂಬರಿಯ ಕಥೆಯನ್ನು ಒಳಗೊಳ್ಳಲಿದೆ ಎಂದು ವರದಿಯಾಗಿದೆ. ಇಬ್ಬರು ಸೂಪರ್ ಸ್ಟಾರ್ ಗಳನ್ನು ಜತೆಯಾಗಿಸಿಕೊಂಡು ಐತಿಹಾಸಿಕ ಕಥೆಯನ್ನು ದೃಶ್ಯಗಳ ಮೂಲಕ ಶಂಕರ್ ಕಟ್ಟಿಕೊಡಲಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಾಜೆಕ್ಟ್ ಸೆಟ್ಟೇರಿದರೆ , ʼಅಣ್ಣಿಯನ್ʼ, ʼಐʼ ಬಳಿಕ ವಿಕ್ರಮ್ ಜತೆಗಿನ ಶಂಕರ್ ಅವರ ಮೂರನೇ ಪ್ರಾಜೆಕ್ಟ್ ಇದಾಗಿರಲಿದೆ. ಇನ್ನು ಶಂಕರ್ ಸೂರ್ಯ ಅವರ ಜತೆ ಮಾಡುವ ಮೊದಲ ಪ್ರಾಜೆಕ್ಟ್ ಇದಾಗಿರಲಿದೆ.
ಸೂರ್ಯ ಹಾಗೂ ವಿಕ್ರಮ್ ಈ ಹಿಂದೆ 2003ರಲ್ಲಿ ಬಂದ ಬಾಲ (Director Bala) ನಿರ್ದೇಶನದ ʼಪಿತಾಮಗನ್ʼ (Pithamagan) ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಸದ್ಯ ಶಂಕರ್ ʼಇಂಡಿಯನ್ -2ʼ ಬಳಿಕ ರಾಮ್ ಚರಣ್ ಅವರ ʼಗೇಮ್ ಚೇಂಜರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸೂರ್ಯ ಅವರ ʼಕಂಗುವʼ ರಿಲೀಸ್‌ಗೆ ರೆಡಿಯಾಗಿದೆ. ವಿಕ್ರಮ್ ʼತಂಗಲಾನ್ʼ ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದಾರೆ.
ಇತ್ತೀಚೆಗೆ ನಿರ್ದೇಶಕ ಶಂಕರ್ ʼವೇಲ್ಪಾರಿʼ ಕಾದಂಬರಿಯ ಕಥೆಯ ಹಕ್ಕು ನನ್ನ ಬಳಿಯಿದೆ ಎಂದು ಬೇರೆ ಸಿನಿಮಾ ಅದೇ ರೀತಿಯ ಕಥೆಯನ್ನು ಆಳವಡಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಪರೋಕ್ಷವಾಗಿ ʼದೇವರʼ ಸಿನಿಮಾಕ್ಕೆ ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
ಕೋಮಾದಲ್ಲಿದ್ದ ನನ್ನ ಮಗನ ನೆನಪಿನ ಶಕ್ತಿ ಮರಳಲು ದಳಪತಿ ವಿಜಯ್ ಕಾರಣವೆಂದ ಖ್ಯಾತ ನಟ
Mollywood: 13 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ʼಉಸ್ತಾದ್ ಹೊಟೇಲ್ʼ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.