PM Modi ತುಂಬಾ ಶಕ್ತಿಶಾಲಿ ಆದರೆ ದೇವರಲ್ಲ: ದೆಹಲಿ ಸದನದಲ್ಲಿ ಕೇಜ್ರಿವಾಲ್

ದೆಹಲಿ ವಿಧಾನಸಭೆ ಸಂಖ್ಯಾಬಲ 66ಕ್ಕೆ ಕುಸಿತ..

Team Udayavani, Sep 26, 2024, 4:54 PM IST

1-kkk

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತುಂಬಾ ಶಕ್ತಿಶಾಲಿ ಆದರೆ ಅವರು ದೇವರಲ್ಲ ಎಂದು ಅರವಿಂದ್ ಕೇಜ್ರಿವಾಲ್ ಗುರುವಾರ(ಸೆ26) ಆಕ್ರೋಶ ಹೊರ ಹಾಕಿದ್ದಾರೆ.

ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ನಂತರ ದೆಹಲಿ ವಿಧಾನಸಭೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ, ಬಿಜೆಪಿ  ವಿರುದ್ಧ  ಕೇಜ್ರಿವಾಲ್ ಆಕ್ರೋಶ ಹೊರ ಹಾಕಿದರು.

“ವಿಪಕ್ಷದಲ್ಲಿರುವ ನನ್ನ ಸಹೋದ್ಯೋಗಿಗಳು ಇಲ್ಲಿ ಮನೀಶ್ ಸಿಸೋಡಿಯಾ ಮತ್ತು ನನ್ನನ್ನು ನೋಡಿ ದುಃಖಿತರಾಗಿರಬೇಕು. ನಾನು ಯಾವಾಗಲೂ ಹೇಳುತ್ತೇನೆ ಪ್ರಧಾನಿ ಮೋದಿ ತುಂಬಾ ಶಕ್ತಿಶಾಲಿ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದಾರೆ ಆದರೆ ಅವರು ದೇವರಲ್ಲ. ದೇವರು ನಮ್ಮೊಂದಿಗಿದ್ದಾನೆ” ಎಂದರು.

“ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ, ಇಂದು ನಾನು ಮುಖ್ಯಮಂತ್ರಿ ಆತಿಷಿ ಅವರೊಂದಿಗೆ ರಸ್ತೆಗಳ ತಪಾಸಣೆಗೆ ಹೋಗಿದ್ದೆ. ನಾನು ಜೈಲಿಗೆ ಹೋಗುವ ಮೊದಲು ದೆಹಲಿ ವಿಶ್ವವಿದ್ಯಾಲಯದ ರಸ್ತೆಗಳು ಉತ್ತಮವಾಗಿದ್ದವು.ಅಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಲು ಆದೇಶವನ್ನು ನೀಡುವಂತೆ ನಾನು ಕೇಳಿದೆ. 3-4 ದಿನಗಳ ಹಿಂದೆ ಬಿಜೆಪಿ ನಾಯಕರೊಬ್ಬರನ್ನು ಭೇಟಿ ಮಾಡಿ ನನ್ನನ್ನು ಜೈಲಿಗೆ ಕಳುಹಿಸುವುದರಿಂದ ಏನಾದರೂ ಪ್ರಯೋಜನವಿದೆಯೇ ಎಂದು ಕೇಳಿದ್ದೆವು, ಅದಕ್ಕವರು ನಾವು ಇಡೀ ದೆಹಲಿ ಸರ್ಕಾರವನ್ನು ಹಳಿತಪ್ಪಿಸಿದೆವು ಎಂದು ಉತ್ತರಿಸಿದರು” ಎಂದರು

“ದೆಹಲಿಯಲ್ಲಿ ಯಾರೂ ಕೇಜ್ರಿವಾಲ್ ಅಪ್ರಾಮಾಣಿಕ ಎಂದು ಹೇಳುವುದಿಲ್ಲ ನಕಲಿ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಆಪ್ ನಾಯಕರನ್ನು ಜೈಲಿಗೆ ಹಾಕಿದ್ದಾರೆ ಎಂದು ಜನರು ಹೇಳುತ್ತಾರೆ. ನಾನು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಲು ನಿರ್ಧರಿಸಿದ್ದು” ಎಂದು ದೆಹಲಿ ಮಾಜಿ ಸಿಎಂ ಹೇಳಿದರು.

ದೆಹಲಿ ವಿಧಾನಸಭೆ ಸಂಖ್ಯಾಬಲ 66ಕ್ಕೆ
70 ಸದಸ್ಯರ ದೆಹಲಿ ವಿಧಾನಸಭೆಯ ಹಾಲಿ ಬಲ 66 ಕ್ಕೆ ಇಳಿದಿದೆ. ಆಡಳಿತಾರೂಢ ಎಎಪಿ 59 ಶಾಸಕರನ್ನು ಹೊಂದಿದ್ದು, ಬಿಜೆಪಿ ಏಳು ಶಾಸಕರನ್ನು ಹೊಂದಿದೆ.

ಅಧಿವೇಶನದ ಮೊದಲ ದಿನವಾದ ಗುರುವಾರ ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಆಡಳಿತಾರೂಢ ಎಎಪಿಯ ಮೂವರು ಸೇರಿದಂತೆ ನಾಲ್ವರು ಶಾಸಕರ ರಾಜೀನಾಮೆ ಮತ್ತು ಅನರ್ಹತೆಯನ್ನು ಘೋಷಿಸಿದರು. ಮಾಜಿ ವಿಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಅವರು ದಕ್ಷಿಣ ದೆಹಲಿಯಿಂದ ಲೋಕಸಭೆಯ ಸಂಸದರಾಗಿ ಆಯ್ಕೆಯಾದ ನಂತರ ಜೂನ್ 18 ರಂದು ರಾಜೀನಾಮೆ ನೀಡಿದ್ದರು.

. ಎಎಪಿ ಶಾಸಕ ರಾಜೇಂದ್ರ ಪಾಲ್ ಗೌತಮ್ ಅವರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರು ಆಪ್ ಶಾಸಕರಾದ ರಾಜ್ ಕುಮಾರ್ ಆನಂದ್ ಮತ್ತು ಕರ್ತಾರ್ ಸಿಂಗ್ ಅವರನ್ನು ಸಂವಿಧಾನದ 10 ನೇ ಶೆಡ್ಯೂಲ್‌ನ ನಿಬಂಧನೆಗಳ ಅಡಿಯಲ್ಲಿ ಕ್ರಮವಾಗಿ ಮೇ 6 ಮತ್ತು ಜುಲೈ 10 ರಂದು  ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಟಾಪ್ ನ್ಯೂಸ್

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

CM-vidhna

MUDA Scam: ರಾಜೀನಾಮೆ ಪ್ರಶ್ನೆಯೇ ಇಲ್ಲ: ಮತ್ತೆ ಸಿಎಂ ಸಿದ್ದರಾಮಯ್ಯ ಖಡಕ್‌ ನುಡಿ

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

MUDA Scam: ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹ; ಕಾಂಗ್ರೆಸ್‌ ನಾಯಕರ ಭಿನ್ನರಾಗ

western-Ghat

Cabinet Decision: ನಿರೀಕ್ಷೆಯಂತೆ ಕಸ್ತೂರಿ ರಂಗನ್‌ ವರದಿ ತಿರಸ್ಕಾರ

Puttur: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ

Puttur: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ

1-horoscope

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ, ಮನೋಬಲದಿಂದ ಕಾರ್ಯಸಿದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MONEY (2)

Minimum wages; ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿದ ಕೇಂದ್ರ

online

400 crores ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ವಂಚನೆ ಪತ್ತೆ

robbers

Leopard cage; ಚಿರತೆ ಬೋನಿನಲ್ಲಿಟ್ಟಿದ್ದ ಮೇಕೆ ಕದ್ದೊಯ್ದ ಖದೀಮರು!

1-wqewewq

Dubai; ಪತ್ನಿ ಬಿಕಿನಿ ಧರಿಸಲು 418 ಕೋಟಿ ರೂ.ಗೆ ದ್ವೀಪ ಖರೀದಿ!

supreem

BCCIಗೆ ಬಾಕಿ ಪಾವತಿ ಮಾತ್ರವೇ ಒಪ್ಪಿದ್ದೇಕೆ?: ಬೈಜುಸ್‌ಗೆ ಸುಪ್ರೀಂ ಚಾಟಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

CM-vidhna

MUDA Scam: ರಾಜೀನಾಮೆ ಪ್ರಶ್ನೆಯೇ ಇಲ್ಲ: ಮತ್ತೆ ಸಿಎಂ ಸಿದ್ದರಾಮಯ್ಯ ಖಡಕ್‌ ನುಡಿ

manjunath bhandari

CM ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ:ಮಂಜುನಾಥ ಭಂಡಾರಿ

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

MUDA Scam: ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹ; ಕಾಂಗ್ರೆಸ್‌ ನಾಯಕರ ಭಿನ್ನರಾಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.