Cabinet Decision: ನಿರೀಕ್ಷೆಯಂತೆ ಕಸ್ತೂರಿ ರಂಗನ್‌ ವರದಿ ತಿರಸ್ಕಾರ

ಕೇಂದ್ರಕ್ಕೆ ಶೀಘ್ರ ನಿಲುವು ಸಲ್ಲಿಕೆ 19,252 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಗುರುತು, 16,0356 ಚ.ಕಿ.ಮೀ. ಸಂರಕ್ಷಣೆ ಹಿನ್ನೆಲೆ ವರದಿ ತಿರಸ್ಕಾರ

Team Udayavani, Sep 27, 2024, 7:35 AM IST

western-Ghat

ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ಡಾ| ಕೆ. ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆ ಸಂಪೂರ್ಣವಾಗಿ ತಿರಸ್ಕರಿಸಿದೆ.

ಕಸ್ತೂರಿ ವರದಿ ಅನುಷ್ಠಾನ ಸಂಬಂಧ ಕರಡು ಅಧಿಸೂಚನೆ ಸಿದ್ಧಪಡಿಸಿದ್ದ ಕೇಂದ್ರ ಸರಕಾರವು, ಎಲ್ಲ ರಾಜ್ಯ ಸರಕಾರಗಳಿಂದ ಆಕ್ಷೇಪಗಳನ್ನು ಆಹ್ವಾನಿಸಿತ್ತು. 5 ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಸರಕಾರ, ಇದೀಗ 6ನೇ ಅಧಿಸೂಚನೆಯಲ್ಲಿನ ಅಂಶಗಳಿಗೂ ವಿರೋಧ ವ್ಯಕ್ತಪಡಿಸಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಲು ನಿರ್ಧರಿಸಿದೆ. ಇದನ್ನೇ ಕೇಂದ್ರ ಸರಕಾರಕ್ಕೆ ತನ್ನ ನಿಲುವೆಂದೂ ತಿಳಿಸಲಿದೆ.

ಸಭೆಯ ಬಳಿಕ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮಘಟ್ಟಗಳ ಪ್ರದೇಶವನ್ನು ನಿಗದಿಪಡಿಸಿದೆ. ಕೇಂದ್ರ ಸರಕಾರವು ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು 2024ರ ಜು. 31ರಂದು 6ನೇ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು ಎಂದರು.

ಡಾ| ಕೆ. ಕಸ್ತೂರಿ ರಂಗಬ್‌ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ರಾಜ್ಯದ 20,688 ಚದರ ಕಿಲೋ ಮೀಟರ್‌ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪದೋಷಗಳ ತಿದ್ದುಪಡಿ ಅನಂತರ ಇದರ ಪ್ರಮಾಣವು 19,252.70 ಚ.ಕಿ.ಮೀ.ಗೆ ಇಳಿದಿತ್ತು. ಈಗಾಗಲೇ ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಪರಿಸರ ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16,0356.72 ಚ.ಕಿ.ಮೀ. ಪ್ರದೇಶವನ್ನು ರಾಜ್ಯದಲ್ಲಿ ಸಂರಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹ್ಯಾಟ್‌ ಹಿಲ್‌ ವಸತಿ ಕಟ್ಟಡದ ವಾಲ್‌ ಪುಟ್ಟಿಗೆ 11.70 ಕೋಟಿ ರೂ.
ದಕ್ಷಿಣ ಕನ್ನಡ ಜಿಲ್ಲೆಯ ಹ್ಯಾಟ್‌ ಹಿಲ್‌ನಲ್ಲಿ ನಿರ್ಮಿಸಿರುವ ನ್ಯಾಯಾಂಗ ಅಧಿಕಾರಿಗಳ ವಸತಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ 11.70 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೂ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಕಾಮಗಾರಿಯ ಮೂಲ ಅಂದಾಜು ಪಟ್ಟಿಯಲ್ಲಿ ಕೇವಲ 2 ಫ್ಲ್ಯಾಟ್‌ಗಳಿಗೆ ವಾಲ್‌ ಪುಟ್ಟಿ ಅವಕಾಶ ಕಲ್ಪಿಸಿದ್ದು, ಉಳಿದ 6 ಫ್ಲ್ಯಾಟ್‌ಗಳಿಗೆ ವಾಲ್‌ ಪುಟ್ಟಿ ಆವಶ್ಯಕತೆಯಿದೆ ಎಂದು ಪರಿಷ್ಕೃತ ಅಂದಾಜಿನಲ್ಲಿ ಪರಿಗಣಿಸಲಾಗಿದೆ. ಅನುಮೋದಿತ ಅಂದಾಜಿಗಿಂತ 1.72 ಕೋ.ರೂ.ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ.

ಟಾಪ್ ನ್ಯೂಸ್

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

Kulasekhara: ಬೈಕ್ ಗಳ ನಡುವೆ ಅಪಘಾತ… ಸವಾರ ಮೃತ್ಯು

Kulasekhara: ಬೈಕ್ ಗಳ ನಡುವೆ ಅಪಘಾತ… ಸವಾರ ಮೃತ್ಯು

Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Dwayne Bravo replaces Gautam Gambhir as KKR mentor

IPL 2025: ಗಂಭೀರ್‌ ಜಾಗಕ್ಕೆ ಹೊಸ ಮೆಂಟರ್‌ ಘೋಷಿಸಿದ ಕೋಲ್ಕತ್ತಾ ನೈಟ್‌ ರೈಡರ್ಸ್

1

World Tourism Day 2024: “ಕರ್ನಾಟಕ ಒಂದು ರಾಜ್ಯ…ಇಲ್ಲಿದೆ ವಿಸ್ಮಯದ ಹಲವು ಜಗತ್ತು”


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-araga

Thirthahalli: ಸಿಬಿಐ ಬರಬಾರದು ಎಂದು ಬೇಲಿ ಹಾಕಿದ್ದು ಯಾಕೆ: ಆರಗ ಪ್ರಶ್ನೆ

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Kottigehara: ಮಾವನ ಮನೆಗೆ ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ

Kottigehara: ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

CM-vidhna

MUDA Scam: ರಾಜೀನಾಮೆ ಪ್ರಶ್ನೆಯೇ ಇಲ್ಲ: ಮತ್ತೆ ಸಿಎಂ ಸಿದ್ದರಾಮಯ್ಯ ಖಡಕ್‌ ನುಡಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6-araga

Thirthahalli: ಸಿಬಿಐ ಬರಬಾರದು ಎಂದು ಬೇಲಿ ಹಾಕಿದ್ದು ಯಾಕೆ: ಆರಗ ಪ್ರಶ್ನೆ

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

012

High Court: ಜೈಲಿನಲ್ಲಿ ಆತಿಥ್ಯ; ಕೈದಿ ಕುಳ್ಳ ಸೀನ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ

Fraud Case: ಖಾಸಗಿ ಸುದ್ದಿವಾಹಿನಿ ಎಂಡಿ ಬಂಧನ

Fraud Case: ಖಾಸಗಿ ಸುದ್ದಿವಾಹಿನಿ ಎಂಡಿ ಬಂಧನ

Arrested: ಬೈಕ್‌, ಆಟೋ ಕದಿಯುತ್ತಿದ್ದ ಇಬ್ಬರ ಬಂಧನ

Arrested: ಬೈಕ್‌, ಆಟೋ ಕದಿಯುತ್ತಿದ್ದ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.