PM Modi 3 ಪರಮ್‌ರುದ್ರ ಸೂಪರ್ ಕಂಪ್ಯೂಟರ್‌ಗೆ ಚಾಲನೆ :ವಿಶೇಷತೆಗಳು…
Team Udayavani, Sep 27, 2024, 6:13 AM IST
ಹೊಸದಿಲ್ಲಿ: ಉನ್ನತ ಮಟ್ಟದ ದೂರದೃಷ್ಟಿ ಇದ್ದಾಗ ಮಾತ್ರವೇ ದೇಶವು ಬೃಹತ್ ಸಾಧನೆಯ ಗುರಿಗಳನ್ನು ಹೊಂದಲು ಸಾಧ್ಯ. ಹಾಗೆಯೇ, ಅತ್ಯಾಧುನಿಕ ತಂತ್ರಜ್ಞಾನವು ಬಡವರನ್ನು ಸಶಕ್ತರನ್ನಾಗಿ ಮಾಡುವ ಗುರಿಯನ್ನು ಹೊಂದಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ “ಪರಮ್ ರುದ್ರ’ ಸೂಪರ್ ಕಂಪ್ಯೂಟರ್‌ಗಳನ್ನು ವೀಡಿಯೋ ಲಿಂಕ್ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ, ಮಿತಿಯೇ ಇಲ್ಲದ ಸಾಧ್ಯತೆಗಳ ಆಗಸದಲ್ಲಿ ಭಾರತವು ಇಂದು ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದೆ. ನಮ್ಮ ಸರಕಾರವು ತಂತ್ರಜ್ಞಾನದ ಲಾಭಗಳನ್ನು ಸಾಮಾನ್ಯ ಜನಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
“ನಾವು 2015ರಲ್ಲಿ ಸೂಪರ್ ಕಂಪ್ಯೂಟಿಂಗ್ ಮಿಷನ್ ಆರಂಭಿಸಿದೆವು. ಈಗ ಕ್ವಾಂಟಮ್ ಕಂಪ್ಯೂಂಟಿಂಗ್ ತಂತ್ರಜ್ಞಾನವು ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳು ಮತ್ತು ನವೋದ್ಯಮಗಳ ಸುಧಾರಣೆಯ ಮುಂಚೂಣಿ ಯಲ್ಲಿದೆ’ ಎಂದು ಹೇಳಿದರು.
ಈ ಸೂಪರ್ ಕಂಪ್ಯೂಟರ್‌ಗಳನ್ನು ಪುಣೆ, ಹೊಸದಿಲ್ಲಿ ಮತ್ತು ಕೋಲ್ಕತಾದಲ್ಲಿ ವೈಜ್ಞಾನಿಕ ಸಂಶೋಧನೆಗಳಿಗಾಗಿ ನಿಯೋಜಿಸಲಾಗುವುದು ಪ್ರಧಾನಿ ಮೋದಿ ಅವರು ಇದೇ ವೇಳೆ ಹೇಳಿದರು.
ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸಿಸ್ಟಮ್: ಮೋದಿ ಅವರು ಇದೇ ವೇಳೆ, 850 ಕೋಟಿ ರೂ. ವೆಚ್ಚದ ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸಿಸ್ಟಮ್‌ಗೂ ಚಾಲನೆ ನೀಡಿದರು. ಹವಾಮಾನ ಮತ್ತು ಸಂಶೋಧನೆ ಈ ಸಿಸ್ಟಮ್ ನೆರವು ನೀಡಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಅತೀದೊಡ್ಡ ಸಾಧನೆ ಎಂದು ಬಣ್ಣಿಸಿದ ಮೋದಿ, ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅವಲಂಬಿಸಿದ ಯಾವುದೇ ಕ್ಷೇತ್ರ ಇಂದಿಲ್ಲ ಎಂದು ಹೇಳಿದರು. ಅಲ್ಲದೇ ಭಾರತವು ತನ್ನದೇ ಆದ ಸೆಮಿಕಂಡಕ್ಟರ್ ಚೈನ್ ನಿರ್ಮಿಸುತ್ತಿದೆ ಎಂದು ಹೇಳಿದರು.
ಸೂಪರ್ ಕಂಪ್ಯೂಟರ್ ವಿಶೇಷತೆಗಳು…
ಈ ಕಂಪ್ಯೂಟರ್‌ಗಳು ಅತ್ಯಾಧುನಿಕ ಸಾಫ್ಟ್ವೇರ್ ಮತ್ತು ಹಾರ್ಡ್
ವೇರ್‌ಗಳನ್ನು ಒಳಗೊಂಡಿವೆ.
ಅತೀ ಸಂಕೀರ್ಣ ಲೆಕ್ಕಗಳನ್ನು ಅತ್ಯಂತ ವೇಗದಲ್ಲಿ ಮಾಡುವ ಸಾಮರ್ಥ್ಯ ಈ ಸೂಪರ್ ಕಂಪ್ಯೂಟರ್‌ಗಳಿಗಿವೆ.
ಕಂಪ್ಯೂಟರ್‌ಗಳ ಸವಾಲಿನ ಸಮಸ್ಯೆ ನಿಭಾಯಿಸಲು ನೆರವು ಒದಗಿಸುತ್ತವೆ
ಕಂಪ್ಯೂಟರ್‌ನ ಬಹುತೇಕ ಬಿಡಿ ಭಾಗ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗಿದೆ.
ಗಮನಾರ್ಹ ಆವಿಷ್ಕಾ
ರಕ್ಕೆ ಸಂಸೋಧಕರಿಗೆ ಕಂಪ್ಯೂಟೇಶನಲ್ ಸಾಧನವಾಗಿವೆ.
ವಿದೇಶಕ್ಕೂ ಮಾರಾಟ!
ಭಾರತ ಉತ್ಪಾದಿಸುತ್ತಿರುವ ಪರಮ್ ಸೀರೀಸ್‌ನ ಸೂಪರ್ ಕಂಪ್ಯೂಟರ್‌ಗಳನ್ನು ವಿದೇಶಗಳು ಬಳಸುತ್ತಿವೆ. ತಾಂಜೆನಿಯಾ, ಅರ್ಮೆನಿಯಾ, ಸೌದಿ ಅರೇಬಿಯಾ, ಸಿಂಗಾಪುರ, ಘಾನಾ, ಮ್ಯಾನ್ಮಾರ್, ನೇಪಾಲ, ಕಜಕಿಸ್ಥಾನ, ಉಜ್ಬೇಕಿಸ್ಥಾನ ಮತ್ತು ವಿಯೆಟ್ನಾಂ ರಾಷ್ಟ್ರಗಳ ಪರಮ್ ಸೀರೀಸ್ ಸೂಪರ್ ಕಂಪ್ಯೂಟರ್‌ಗಳನ್ನು ಖರೀದಿಸಿವೆ. ಜತೆ ಈ ಕಂಪ್ಯೂಟರ್‌ಗಳನ್ನು ಖಾಸಗಿ ಕಂಪೆನಿಗಳು ಕೂಡ ಬಳಸುತ್ತಿವೆ.
3 ಸೂಪರ್ ಕಂಪ್ಯೂಟರ್ ನಿರ್ಮಾಣಕ್ಕೆ 130 ಕೋ.ರೂ.
130 ಕೋಟಿ ರೂ. ವೆಚ್ಚದಲ್ಲಿ 3 ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಕಂಪ್ಯೂಟರ್‌ಗಳನ್ನು ವೈಜ್ಞಾನಿಕ ಸಂಶೋಧನೆಗಾಗಿ ಪುಣೆಯ ಜೈಂಟ್ ಮೀಟರ್ ರೇಡಿಯೋ ಟೆಲಿಸ್ಕೋಪ್(ಜಿಎಂಆರ್‌ಟಿ), ದಿಲ್ಲಿಯ ಇಂಟರ್ ಯುನಿರ್ವಸಿಟಿ ಅಕ್ಸೇಲರೇಟರ್ ಸೆಂಟರ್(ಐಯುಎಸಿ) ಮತ್ತು ಕೋಲ್ಕತಾದ ಎಸ್.ಎನ್.ಬೋಸ್ ಸೆಂಟರ್‌ನಲ್ಲಿ ಅಳವಡಿಸಲಾಗುತ್ತದೆ.
ಪರಮ್‌ಗೆ ಬೆಂಗಳೂರಿನ ಐಐಎಸ್‌ಸಿ ಕೊಡುಗೆ
ನ್ಯಾಶನಲ್ ಸೂಪರ್ ಕಂಪ್ಯೂಟಿಂಗ್ ಮಿಷನ್ ಅನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ್(ಡಿಎಸ್‌ಟಿ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರ ಜ್ಞಾನ ಸಚಿವಾಲಯವು ಜಂಟಿಯಾಗಿ ನಿರ್ವಹಣೆ ಮಾಡಿದರೆ, ಪುಣೆಯ ಸೆಂಟರ್ ಫಾರ್ ಡವೆಲಪ್‌ಮೆಂಟ್ ಆಫ್ ಅಡ್ವಾನ್ಸ್$x ಕಂಪ್ಯೂಟಿಂಗ್(ಸಿ-ಡಾಕ್) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಸೂಪರ್ ಕಂಪ್ಯೂಟರ್ ನಿರ್ಮಾಣದಲ್ಲಿ ಕೊಡುಗೆ ನೀಡಿವೆ.
ಎಲ್ಲೆಲ್ಲಿ ಬಳಕೆ?
ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳನ್ನು ವೈಜ್ಞಾನಿಕ ಸಂಶೋಧನ ಕ್ಷೇತ್ರದಲ್ಲಿ ಬಳಸಿಕೊ ಳ್ಳಲಾಗುತ್ತದೆ. ಹವಾಮಾನ, ಮುನ್ಸೂಚನೆ, ಹವಾಮಾನ ಮಾದರಿಗಳು, ಔಷಧ ಸಂಶೋಧನೆ, ಮೆಟಿರಿಯಲ್ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ(ಎಐ), ಆರೋಗ್ಯ ಕ್ಷೇತ್ರದಲ್ಲಿ ಸೂಪರ್ ಕಂಪ್ಯೂಟರ್ ಹೆಚ್ಚು ನೆರವಿಗೆ ಬರಲಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.