Corruption Allegation: ಭೋವಿ ನಿಗಮ ಅಕ್ರಮ: ಲಂಚ ಪಡೆದ ತನಿಖಾಧಿಕಾರಿ ಅಮಾನತು
ಪ್ರಕರಣದ ಗಂಭೀರತೆ ಅರಿತು ಸರಕಾರದಿಂದ ಸಿಐಡಿ ತನಿಖೆಗೆ ಆದೇಶ
Team Udayavani, Sep 27, 2024, 1:36 AM IST
ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅಕ್ರಮ ಪ್ರಕರಣದ ಸಂಬಂಧ ಆರೋಪಿಗಳಿಂದ ಲಂಚ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್ ಹಾಗೂ ತನಿಖಾಧಿಕಾರಿಯಾಗಿದ್ದ ಎ.ಡಿ. ನಾಗರಾಜ್ ಅವರನ್ನು ಸಿಐಡಿ ಡಿಜಿ ಡಾ| ಎಂ.ಎ. ಸಲೀಂ ಅಮಾನತುಗೊಳಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಪ್ರಕರಣದ ಗಂಭೀರತೆ ಅರಿತು ಸರಕಾರವು ಸಿಐಡಿ ತನಿಖೆಗೆ ಆದೇಶಿಸಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ನಿಗಮದ ಕೆಲ ಅಧಿಕಾರಿಗಳು ಹಾಗೂ ಇತರರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ತನಿಖಾಧಿಕಾರಿಯಾಗಿದ್ದ ನಾಗರಾಜ್ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿರಲಿಲ್ಲ. ಜತೆಗೆ ಆರೋಪಿಗಳಿಂದ ಹಣ ಪಡೆದಿರುವ ಆರೋಪ ಕೇಳಿ ಬಂದಿತ್ತು.
ಏನಿದು ಪ್ರಕರಣ?
ಭೋವಿ ಅಭಿವೃದ್ಧಿ ನಿಗಮದಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಸಾರ್ವಜನಿಕ ದಾಖಲೆ ದುರ್ಬಳಕೆ ಮಾಡಿಕೊಂಡು 10 ಕೋಟಿ ರೂ.ಗೂ ಅಧಿಕ ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ. 200ಕ್ಕೂ ಹೆಚ್ಚು ಕಡತಗಳನ್ನು ನಿಗಮದ ಅಧೀಕ್ಷಕರು ಕಳವು ಮಾಡಿದ್ದರು ಎನ್ನಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಕೆಲ ದಿನಗಳಲ್ಲೇ ಸಿಐಡಿ ತನಿಖೆಗೆ ರಾಜ್ಯ ಸರಕಾರ ಆದೇಶಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.