Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು
Team Udayavani, Sep 27, 2024, 12:23 PM IST
ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಶಾಸಕರಾಗಿದ್ದಾಗ ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಭ್ರಷ್ಟಾಚಾರ ನಡೆದಾಗ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಕ್ರಮ ತೆಗೆದುಕೊಳ್ಳಬೇಕು ಎಂದು ಅವರೇ ಹೇಳುತ್ತಾರೆ. ಇದೀಗ ಅವರ ಮೇಲೆ ಭ್ರಷ್ಟಾಚಾರದ ಅರೋಪ ಬಂದಿದೆ. ಹೀಗಾಗಿ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಸಿಕ್ಯೂಷನ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿಯೂ ಸಿದ್ದರಾಮಯ್ಯ ಹಿನ್ನಡೆಯಾಗಿದೆ. ಇದನ್ನರಿತು ರಾಜೀನಾಮೆ ನೀಡಬೇಕು. ಹಿಂದೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಉನ್ನತ ಹುದ್ದೆಯಲ್ಲಿದ್ದವರು ರಾಜೀನಾಮೆ ನೀಡಬೇಕು ಎಂದರು.
ಸಿಎಂ ಹುದ್ದೆಯಲ್ಲಿದ್ದಾಗ ಲೋಕಯುಕ್ತ ಅಧಿಕಾರಿಗಳು ತನಿಖೆ ಮಾಡುವುದು ಕಷ್ಟ. ಅಭಿವೃದ್ಧಿ ಬಗ್ಗೆ ಕನಿಷ್ಠ ಚಿಂತನೆ ಇಲ್ಲದೆ ತಪ್ಪುಗಳನ್ನು ಸಮರ್ಥನೆ ಕೆಲಸವಾಗುತ್ತಿದೆ. ಕಲಬುರಗಿ ಕ್ಯಾಬಿನೆಟ್ ನಡೆಸಿದ್ದು ಖುಷಿಯಾಯ್ತು. ಅದರೆ ಲಾಭ ಏನಾಯಿತು ಎನ್ನುವುದು ಮುಖ್ಯ. ಯಾವುದೇ ಅಭಿವೃದ್ಧಿ ಕೆಲಸ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗುತ್ತಿಲ್ಲ ಎಂದು ಶ್ರೀರಾಮುಲು ಹೇಳಿದರು.
ಅಭಿವೃದ್ಧಿ, ನೇಮಕಾತಿ ವಿಳಂಬದ ವಿಚಾರವಾಗಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಬಳಿ ಹೋಗಿ ಎಂದು ಹೋರಾಟಗಾರರಿಗೆ ಹೇಳಿದ್ದೇನೆ. ಕುರ್ಚಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಹೊರತು ಅಭಿವೃದ್ಧಿ ಮಾಡುತ್ತಿಲ್ಲ ಎಂದರು.
ಬಳ್ಳಾರಿ ಲೋಕಸಭೆ ಸದಸ್ಯ ತುಕಾರಾಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಾಲ್ಮೀಕಿ ಹಣ ದುರ್ಬಳಕೆ ಮಾಡಿಕೊಂಡ ವಿಚಾರ ನಾನು ಹೇಳುತ್ತಿರುವುದಲ್ಲ. ಇಡಿ ಅವರು ಹೇಳಿದ್ದಾರೆ. ಇದೇ ವಿಚಾರಕ್ಕೆ ರಾಜೀನಾಮೆ ನೀಡಿ ಎಂದಿದ್ದೇನೆ. ಸಮುದಾಯದ ಹಣ ಬಳಕೆ ಮಾಡಿಕೊಂಡ ಸಂಸದರಾಗಿದ್ದೀರಾ, ವಾಲ್ಮೀಕಿ ಹಗರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದರು.
ತುಕಾರಾಂ ದೊಡ್ಡ ನಾಯಕ ಎನ್ನುವುದು ಎಲ್ಲರಿಗೂ ಗೊತ್ತು. ಅದರೆ ಸಂತೋಷ ಲಾಡ್ ಬಲದಿಂದಲೇ ಗೆದ್ದಿರುವುದು. ಸ್ವಂತ ಬಲದಿಂದ ಗೆಲ್ಲವ ಶಕ್ತಿಯಿಲ್ಲ. ತುಕಾರಾಂ ಯಾವುದೇ ಚುನಾವಣೆಯಲ್ಲಿ ಗೆಲ್ಲಬೇಕಂದರೆ ಸಂತೋಷ ಲಾಡ್ ಬರಬೇಕು ಇಲ್ಲ, ಸರ್ಕಾರದಿಂದ ಲೂಟಿ ಹೊಡೆದ ಹಣ ಬೇಕು. ತುಕಾರಾಂ ನನಗೆ ಸವಾಲು ಹಾಕುವುದಲ್ಲ ಇಡಿಯವರೇ ನಿಮಗೆ ಪ್ರಶ್ನೆ ಕೇಳುತ್ತಿದ್ದಾರೆ. ಭ್ರಷ್ಟಾಚಾರದ ಹಣದಲ್ಲಿ ಚುನಾವಣೆ ನಡೆಸಿದೆ ಎಂದು ಇಡಿ ಉಲ್ಲೇಖ ಮಾಡಿದೆ ಎಂದರು.
ರಾಜ್ಯಪಾಲರಿಗೆ ಸರ್ಕಾರದ ಯಾವುದೇ ದಾಖಲಾತಿ ಕೊಡಬಾರದು ಎಂದು ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಲಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಿಬಿಐ ಪ್ರಕರಣ ಕಡ್ಡಾಯವಾಗಿ ಕ್ಯಾಬಿನೆಟ್ ಅನುಮತಿ ಬೇಕು ಎನ್ನುವ ನಿರ್ಧಾರ ಸರಿಯಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.