Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಅಬುಧಾಬಿಯಲ್ಲಿ...

Team Udayavani, Sep 27, 2024, 12:30 PM IST

Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

ಯು.ಎ.ಇ.ರಾಜಧಾನಿ ಅಬುಧಾಬಿಯಲ್ಲಿ ಸುಮಾರು ಮೂರುವರೆ ದಶಕಗಳ ಹಿಂದೆ ಹೊಟೇಲು ಉದ್ಯಮ ಪ್ರಾರಂಭಿಸಿ ಯಶಸ್ವಿ ಕಂಡ ಸುಂದರ ಶೆಟ್ಟಿಯವರು ಮೂಲತ: ಕಾರ್ಕಳದ ಮುನಿಯಾಲ್ ಹಾಗೂ ತೀರ್ಥಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಪ್ರಸ್ತುತ ಶೆಟ್ಟಿಯವರ ಅಬುಧಾಬಿಯ ನೇಹಾಲ್ ರೆಸ್ಟೋರೆಂಟ್ ಮತ್ತು ತಂದೂರಿ ಕಾರ್ನರ್ ರೆಸ್ಟೋರೆಂಟ್ ಬಹು ಪ್ರಸಿದ್ಧಿ ಪಡೆದ ಹೋಟೇಲ್ ಅನ್ನುವುದು ಅಬುಧಾಬಿಯ ಗ್ರಾಹಕರ ಮನದಾಳದ ಮಾತು.

ಸದ್ಯಕ್ಕೆ ಯು.ಎ.ಇ. ರಾಜಧಾನಿ ಅಬುಧಾಬಿಯಲ್ಲಿ ನಮ್ಮ ಕರಾವಳಿ ಜಿಲ್ಲೆಯವರ ರೆಸ್ಟೋರೆಂಟ್ ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಂತು ಯಶಸ್ವಿ ಕಾಣುತ್ತಿರುವ ಏಕೈಕ ಹೊಟೇಲ್ ಅನ್ನುವ ಖ್ಯಾತಿ ಸುಂದರ ಶೆಟ್ಟಿಯವರ ನೇಹಾಲ್ ರೆಸ್ಟೋರೆಂಟ್ ಪಾಲಿಗೆ ಇದೆ. ನಮ್ಮೂರಿನಲ್ಲಿ ಹುಟ್ಟಿ ಮುಂಬಯಿಯಲ್ಲಿ ಶಿಕ್ಷಣ ಮತ್ತು ಹೊಟೇಲು ಸೇವೆಯ ಅನುಭವ ಪಡೆದು ಹೊಟೇಲು ಉದ್ಯಮದಲ್ಲಿ ಯಶಸ್ವಿ ಕಂಡ ಸುಂದರ ಶೆಟ್ಟಿಯವರ ಜೀವನಗಾಥೆಯ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಅನುಭವ ಜನ್ಯ ಮಾತುಗಳನ್ನು ತಮ್ಮಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.

|ಹೊಟೇಲು ಉದ್ಯಮಿ ಸುಂದರ ಶೆಟ್ಟಿಯವರ ತಾಯಿ ಮನೆ ಕಾರ್ಕಳದ ಮುನಿಯಾಲ್ ತಂದೆ ಮನೆ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ.ಇವರು ಹೆಚ್ಚಿನ ಶಿಕ್ಷಣಕ್ಕಾಗಿ ಸುಮಾರು ಐವತ್ತು ವರುಷಗಳ ಹಿಂದೇನೆ ಮುಂಬಯಿಗೆ ಹೇೂದವರು.”Earn and learn” ಅನ್ನುವ ಎಳೆಯ ಬದುಕಿನಲ್ಲಿ ಡಿಪ್ಲೊಮ ಶಿಕ್ಷಣ ಮುಗಿಸಿದವರು.ಈ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲಿಯೇ ಮುಂಬಯಿಯ ಅರೆಸರಕಾರಿ ಸ್ವಾಮ್ಯದ ಫೈವ್ ಸ್ಟಾರ್‌ ಹೊಟೇಲಿನಲ್ಲಿ ಜವಾಬ್ದಾರಿಯುತವಾದ ಸ್ಥಾನದಲ್ಲಿ ದುಡಿದ ಅನುಭವ ಇವರಿಗಿದೆ. ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಹೊಟೇಲು ಉದ್ಯಮದ ಕನಸು ಕಂಡವರು.

ಅದೇ ಕನಸನ್ನು ಹೊತ್ತುಕೊಂಡು ಮರು ಭೂಮಿಯಾದ ಅಬುಧಾಬಿಯತ್ತ ಉದ್ಯೋಗಕ್ಕಾಗಿ ಬದುಕಿನ ಪಯಾಣ. ಅದೂ ಕೂಡಾ 1991ರ ಸಮಯ ಕುವೈಟ್ ಇರಾಕ್ ಯುದ್ಧದಿಂದಾಗಿ ಅತಿಯಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಅಬುಧಾಬಿಯಲ್ಲಿ ಹೊಟೇಲು ಉದ್ಯಮಕ್ಕೆ ಕೈ ಹಾಕುವ ಸಾಹಸವನ್ನು ಮಾಡಿದವರು. ಆ ಸಂದರ್ಭದಲ್ಲಿ ಹೆಚ್ಚಿನವರು ಯಾಕೆ ಹುಚ್ಚು ಸಾಹಸಕ್ಕೆ ಇಳಿಯುತ್ತಿದ್ದೀರಿ ಎನ್ನುವ ಭಯದ ಮಾತುಗಳನ್ನು ಹೇಳಿದವರು ಇದ್ದಾರೆ.ಆದರೆ ಶೆಟ್ಟಿಯವರು ಇದಾವುದಕ್ಕೂ ಕಿವಿಕೊಡದೆ ದೃಢವಾದ ಮನಸ್ಸಿನಿಂದ ಹೊಟೇಲು ಉದ್ಯಮಕ್ಕೆ ಧುಮುಕಿಯೆ ಬಿಟ್ಟರು.

ಅದಾಗಲೇ ನೇಹಾಲ್ ಹೊಟೇಲನ್ನು ಖರೀದಿಸಿ ಅದಕ್ಕೊಂದು ಹೊಸ ವಿನ್ಯಾಸದ ಔಟ್ ಲುಕ್ ನೀಡಿ ಅತ್ಯುತ್ತಮವಾದ ಸೇವೆ ರುಚಿಕರ ಸ್ವಾದಿಷ್ಟವಾದ ಆಹಾರವನ್ನು ಅಬುಧಾಬಿ ಮತ್ತು ಪರ ರಾಷ್ಟ್ರಗಳಿಂದ ಬರುವ ಗ್ರಾಹಕರಿಗೆ ಉಣ ಬಡಿಸುವುದರ ಮೂಲಕ ಗ್ರಾಹಕರ ಮನ ಸೂರೆಗೊಂಡ ಹೆಗ್ಗಳಿಕೆಗೆ ಪಾತ್ರರಾದವರು ಸುಂದರ ಶೆಟ್ಟಿಯವರು.

ಇದೇ ಸಂದರ್ಭದಲ್ಲಿ ಅಬುಧಾಬಿಗೆ ಶ್ರೀಲಂಕಾದ ಪ್ರವಾಸಿಗರು ಬರುತ್ತಿದ್ದನ್ನು ಗಮನಿಸಿದ ಇವರು ಶ್ರೀಲಂಕಾ ರೆಸ್ಟೋರೆಂಟ್ ಹುಟ್ಟು ಹಾಕಿ ಅಲ್ಲಿ ಕೂಡಾ ಯಶಸ್ವಿ ಕಂಡ ತೃಪ್ತಿ ಇವರಿಗಿದೆ.ಇವರ ಶ್ರೀಲಂಕಾ ರೆಸ್ಟೋರೆಂಟ್ ಎಷ್ಟು ಜನಮನ್ನಣೆ ಗಳಿಸಿತು ಅಂದರೆ ಶ್ರೀಲಂಕಾದ ರಾಯಭಾರಿಗಳು ಕೂಡಾ ಸಾಮಾನ್ಯರಂತೆ ಬಂದು ಊಟ ಮಾಡಿ ಹೇೂದ ಸಂದರ್ಭವನ್ನು ನೆನಪಿಸುತ್ತಾರೆ.. ಅದೇ ರೀತಿ ಶ್ರೀಲಂಕಾ ಕ್ರಿಕೆಟ್ ಪಟು ಜಯಸೂರ್ಯ ಇವರ ಹೊಟೇಲಿನ ಆತಿಥ್ಯ ಸ್ವೀಕರಿಸಿದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಪ್ರಸ್ತುತ ನೇಹಾಲ್ ಮತ್ತು ತಂದೂರಿ ಕಾರ್ನರ್ ರೆಸ್ಟೋರೆಂಟ್ ಅನ್ನು ನಡೆಸುತ್ತಿರುವ ಇವರು ಅಬುಧಾಬಿಯ ನೈಸರ್ಗಿಕ ಪರಿಸರ ಅವರಿಗೆ ತುಂಬಾ ಹಿಡಿಸಿದೆ. ಅತ್ಯುತ್ತಮ ಗುಣಮಟ್ಟದ ತರಕಾರಿ ಮತ್ಸ್ಯ ಸಂಪತ್ತು ಇಲ್ಲಿರುವ ಕಾರಣ ಗುಣಮಟ್ಟದ ಆಹಾರ ಸಿದ್ಧ ಪಡಿಸಲು ಸಹಾಯಕ ಅನ್ನುವುದರೊಂದಿಗೆ ಅಬುಧಾಬಿಯ ಬೆಳವಣಿಗೆ ಮತ್ತು ಅಭಿವೃದ್ಧಿ ಪರಿಸರ ಪರಿಕರಗಳು ಕೂಡಾ ಇಲ್ಲಿನ ಹೊಟೇಲು ಉದ್ಯಮವನ್ನು ಮತ್ತಷ್ಟು ಬೆಳೆಸಿದೆ ಅನ್ನುವ ಸಂತಸದ ಮಾತು ಸುಂದರ ಶೆಟ್ಟಿಯವರದು. ಇಲ್ಲಿ ಪ್ರವಾಸೋದ್ಯಮ ಕೂಡಾ ಹೊಟೇಲ್ ಉದ್ಯಮಕ್ಕೆ ಪೂರಕವಾಗಿ ನಿಂತಿದೆ ಅನ್ನುವ ಶೆಟ್ಟಿಯವರು ಉದ್ಯಮಕ್ಕೆ ಸ್ವಲ್ಪ ದೊಡ್ಡ ಹೊಡೆತ ಬಿದ್ದಿರುವುದುವಿಶ್ವ ವ್ಯಾಪಿ ಕೇೂವಿಡ್ ಸಂದರ್ಭದಲ್ಲಿ..

ನಮಗೆ ಹೆಚ್ಚಿನ ಗ್ರಾಹಕರು ಬೇರೆ ಬೇರೆ ದೇಶಗಳಿಂದ ಬರುತ್ತಾರೆ. ಭಾರತದಿಂದ ಕೂಡಾ ಗರಿಷ್ಠ ಪ್ರಮಾಣದಲ್ಲಿ ಬರುತ್ತಿರುವ ಕಾರಣಕ್ಕಾಗಿಯೇ ಅವರ ಇಚ್ಛೆ ರುಚಿಗೆ ತಕ್ಕ ರೀತಿಯಲ್ಲಿ ಸ್ಪಂದಿಸಿ ಸತ್ಕಾರ ಮಾಡುವ ಸಿಬ್ಬಂದಿ ವರ್ಗವೇ ನಮ್ಮಗಿರುವ ದೊಡ್ಡ ಸಂಪತ್ತು.

ತಮ್ಮ ಈ ಸುದೀರ್ಘವಾದ ಅನುಭವದಿಂದ ಹೇಳುತ್ತಾರೆ “ನಿಷ್ಠೆ ಪ್ರಾಮಾಣಿಕತೆ ಹಾಗೂ ಸವಾಲುಗಳನ್ನು ಸಮಥ೯ವಾಗಿ ಸ್ವೀಕರಿಸುವ ಮನ ಸ್ಥಿತಿ ಹೊಟೇಲು ಉದ್ಯಮದ ಪ್ರೇರಣಾ ಶಕ್ತಿ “ಅನ್ನುವುದು ಸುಂದರ ಶೆಟ್ಟಿಯವರ ಅನುಭವ ಜನ್ಯ ಮಾತು. ತಾಯಿ ನಾಡಿನಿಂದ ತೆರಳಿ ವಿದೇಶಿ ನೆಲದಲ್ಲಿ ಯಶಸ್ವಿ ಹೊಟೇಲು ಉದ್ಯಮಿ ಅನ್ನಿಸಿಕೊಂಡ ನಮ್ಮೂರ ಸುಂದರ ಶೆಟ್ಟಿಯವರು ಇಂದಿನ ಯುವ ಉದ್ಯಮಿಗಳಿಗೆ ಮಾದರಿಯಾಗಿ ನಿಲ್ಲಬಲ್ಲ ಸರಳ ಸಜ್ಜನಿಕೆಯ ಪರಿಪೂರ್ಣ ವ್ಯಕ್ತಿತ್ವ ಅವರದ್ದು.

*ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ (ಅಬುಧಾಬಿ)

ಟಾಪ್ ನ್ಯೂಸ್

0421472757

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

siddaramaiah

Lokayukta ತನಿಖೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲು:ಕುಟುಂಬಕ್ಕೂ ಸಂಕಷ್ಟ!

1-dddd

Forest; ನೆರೆ ರಾಜ್ಯಗಳ ನಡುವೆ ಸಹಕಾರವಿದ್ದರೆ ಎಲ್ಲ ಸಮಸ್ಯೆ ಪರಿಹಾರ: ಖಂಡ್ರೆ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

1-aane

Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

1-asasa

KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

0421472757

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

siddaramaiah

Lokayukta ತನಿಖೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲು:ಕುಟುಂಬಕ್ಕೂ ಸಂಕಷ್ಟ!

1-dddd

Forest; ನೆರೆ ರಾಜ್ಯಗಳ ನಡುವೆ ಸಹಕಾರವಿದ್ದರೆ ಎಲ್ಲ ಸಮಸ್ಯೆ ಪರಿಹಾರ: ಖಂಡ್ರೆ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

crime (2)

Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.