Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್‌ ಅರವಿಂದ್‌


Team Udayavani, Sep 27, 2024, 6:19 PM IST

Ramesh Aravind spoke about bhairadevi movie

“ಟ್ರೇಲರ್‌ ನೋಡಿದಾಗ ನನಗೆ ಆಪ್ತಮಿತ್ರ ಚಿತ್ರ ಮತ್ತೆ ನೆನಪಾ ಯಿತು…’ – ಹೀಗೆ ಹೇಳಿದರು ನಟ ರಮೇಶ್‌ ಅರವಿಂದ್‌. ಅವರು ಹೇಳಿದ್ದು “ಭೈರಾದೇವಿ’ ಚಿತ್ರದ ಬಗ್ಗೆ.

ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆ ಯಲ್ಲಿ ನಟಿಸಿರುವ ಈ ಚಿತ್ರ ಅಕ್ಟೋಬರ್‌ 3ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಟ್ರೇಲರ್‌ ರಿಲೀಸ್‌ ವೇಳೆ ರಮೇಶ್‌ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

“ಭೈರಾದೇವಿ ಟ್ರೇಲರ್‌ ನೋಡಿದಾಗ ನನಗೆ “ಆಪ್ತಮಿತ್ರ’ ಚಿತ್ರ ಮತ್ತೆ ಮತ್ತೆ ಕಾಡಿತು. ಮುಖ್ಯವಾಗಿ ರಾಧಿಕಾ ಅವರನ್ನು ಕಾಳಿ ಮೇಕಪ್‌ ನಲ್ಲಿ ನೋಡಿದಾಗ, “ಮೇಡಂ ಪ್ಲೀಸ್‌ ಮೇಕಪ್‌ ತೆಗೆದು ಬನ್ನಿ’ ಎಂದು ಹೇಳಿದೆ. “ಆಪ್ತಮಿತ್ರ’ ಚಿತ್ರದಲ್ಲೂ ಸೌಂದರ್ಯ ಅವರಿಗೂ ಹೀಗೆ ಹೇಳಿದ್ದೆ. ಕ್ಲೈಮ್ಯಾಕ್ಸ್‌ನಲ್ಲಿ ನಾಗವಲ್ಲಿ ಭಾಗದ ಚಿತ್ರೀಕರಣ ಮುಗಿಸಿ ಬಂದಾಗ, ಸೌಂದರ್ಯ ಅವರನ್ನು ನೋಡೋಕೆ ಭಯವಾಗುತ್ತಿತ್ತು. ಮೇಕಪ್‌ ತೆಗೆದು ಬನ್ನಿ ಆಮೇಲೆ ಮಾತಾಡೋಣ ಎಂದು ಹೇಳಿದ್ದೆ. ಆ ತರಹದ ಒಂದು ಶಕ್ತಿ ಕೆಲವು ಪಾತ್ರಗಳಿಗೆ ಇರುತ್ತದೆ. ಪೋಸ್ಟರ್‌ನಲ್ಲಿ ರಾಧಿಕಾ ಅವರ ಕಣ್ಣುಗಳನ್ನು ನೋಡಿ, ಈಗಿರುವುದಕ್ಕಿಂತ ಡಬ್ಬಲ್‌ ಆಗಿದೆ. ಈ ಚಿತ್ರದಲ್ಲಿ ಅವರು ನಾಯಕಿ ಹಾಗೂ ನಿರ್ಮಾಪಕಿ. ನಾಯಕಿಯಾಗಿ ಅವರ ನೃತ್ಯ, ನಟನೆ ಮೆಚ್ಚಿದ್ದೇವೆ. ನಿರ್ಮಾಪಕಿಯಾಗಿ ಅವರು ಬಹಳ ಚೆನ್ನಾಗಿ ಚಿತ್ರ ನಿರ್ಮಿಸಿದ್ದಾರೆ’ ಎನ್ನುತ್ತಾರೆ ರಮೇಶ್‌.

ತಮ್ಮ ಪಾತ್ರದ ಬಗ್ಗೆ ಮಾತನಾಡುವ ರಮೇಶ್‌, “ನಾನು ಈ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ರೌಡಿ, ಡಾನ್‌ ಯಾರನ್ನು ಬೇಕಾದರೂ ಹಿಡಿದು ಒಳಗೆ ಹಾಕುತ್ತಿರುತ್ತಾನೆ. ಯಾವ ವೈರಿಯನ್ನಾದರೂ ನಿಯಂತ್ರಣಕ್ಕೆ ತೆಗೆದು ಕೊಳ್ಳುತ್ತಾನೆ. ಆದರೆ, ಈ ಚಿತ್ರದಲ್ಲಿರುವ ವೈರಿ ಈ ಲೋಕದಲ್ಲಿ ರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಆಗ ಆ ಪೊಲೀಸ್‌ ಅಧಿಕಾರಿ ಏನು ಮಾಡುತ್ತಾನೆ ಎನ್ನುವುದು ಕಥೆ. ಈ ಟ್ರೇಲರ್‌ ನೋಡಿದಾಗ, ನಾನೇ ಮಾಡಿದ ಇನ್ನೊಂದು ಚಿತ್ರ ನೆನಪಿಗೆ ಬರುತ್ತಿದೆ. “ಆಪ್ತಮಿತ್ರ’ ಚಿತ್ರದಲ್ಲಿ ನಮ್ಮ ಮನೆಯಲ್ಲೊಂದು ಸಮಸ್ಯೆ ಇರುತ್ತದೆ. ಆಗ ಅವಿನಾಶ್‌ ಅವರು ಬಂದು ಇಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಅದೇ ರೀತಿ, ಈ ಚಿತ್ರದಲ್ಲಿ ಇನ್ನೊಂದು ಸಮಸ್ಯೆ ಎದುರಿಸತ್ತಾ ಇರುತ್ತೀನಿ. ಅದನ್ನು ಪರಿಹರಿಸೋಕೆ “ಭೈರಾದೇವಿ’ ಬರುತ್ತಾರಾ, ಇಲ್ಲವೋ ಎಂಬುದನ್ನು ಚಿತ್ರದಲಿ ನೋಡಬೇಕು’ ಎನ್ನುವುದು ರಮೇಶ್‌ ಅರವಿಂದ್‌ ಮಾತು.

ಟಾಪ್ ನ್ಯೂಸ್

KSRTC: ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಸಮಸ್ಯೆ ಪರಿಹರಿಸಲು ಮನವಿ

KSRTC: ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಸಮಸ್ಯೆ ಪರಿಹರಿಸಲು ಮನವಿ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

HDK (3)

Lokayukta ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಎಚ್ ಡಿಕೆ

1-cantar

Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು

1-male

India vs Bangladesh 2 ನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಅಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

upendra

Upendra Movie: ರೀ ರಿಲೀಸ್‌ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ

night road kannada movie

Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್‌ ರೋಡ್‌ʼ

Sanju Movie

Sanju Movie; ಯತಿ ಕಣ್ಣಲ್ಲಿ ಸಂಜು ಕನಸು: ಹರೆಯದ ಪ್ರೀತಿಯ ಏರಿಳಿತದ ಪಯಣ

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

KSRTC: ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಸಮಸ್ಯೆ ಪರಿಹರಿಸಲು ಮನವಿ

KSRTC: ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಸಮಸ್ಯೆ ಪರಿಹರಿಸಲು ಮನವಿ

Rain: ದಕ್ಷಿಣ ಕನ್ನಡ, ಉಡುಪಿ: ಮಳೆ ಇಳಿಮುಖ

Rain: ದಕ್ಷಿಣ ಕನ್ನಡ, ಉಡುಪಿ: ಮಳೆ ಇಳಿಮುಖ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

Aranthodu: ಕಾಡಾನೆ ಹಾವಳಿ; ಕೃಷಿಗೆ ಹಾನಿ

Aranthodu: ಕಾಡಾನೆ ಹಾವಳಿ; ಕೃಷಿಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.