BJP ಬಂಡಾಯ; ರಾಜುಗೌಡ ಕಥೆ ಕಟ್ಟಿ ಹೇಳಿದ್ದಾನೆ..: ರಮೇಶ್ ಜಾರಕಿಹೊಳಿ ಕಿಡಿ
ಈಶ್ವರಪ್ಪ ಅವರನ್ನು ಬಿಜೆಪಿ ಗೆ ಕರೆ ತರುವ ಶಕ್ತಿ ನನ್ನಲಿಲ್ಲ... ಸಭೆ ಸೇರಿದ್ದವರ ನಡುವೆಯೇ ರಾಜಕೀಯ ಕಚ್ಚಾಟ
Team Udayavani, Sep 27, 2024, 6:35 PM IST
ಬೆಳಗಾವಿ : ರಾಜ್ಯ ಬಿಜೆಪಿಯಲ್ಲಿ ಬಂಡಾಯ ಮುಂದುವರಿದಿದ್ದು ಮಾಜಿ ಡಿಸಿಎಂ, ಬಿಜೆಪಿಯಿಂದ ಉಚ್ಛಾಟನೆಯಾಗಿರುವ ಕೆ.ಎಸ್. ಈಶ್ವರಪ್ಪ ಅವರ ಮನೆಯಲ್ಲಿ ಬಿಜೆಪಿ ಶಾಸಕರಾದ ಬಸನ ಗೌಡ ಪಾಟೀಲ್ ಯತ್ನಾಳ್ , ಶಾಸಕ ರಮೇಶ್ ಜಾರಕಿಹೊಳಿ , ಮಾಜಿ ಶಾಸಕ ರಾಜು ಗೌಡ ಅವರು ಸಭೆ ನಡೆಸಿದ್ದು, ಸಭೆ ಸೇರಿದ್ದವರ ನಡುವೆಯೇ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ”ಈಶ್ವರಪ್ಪ ಅವರನ್ನು ಬಿಜೆಪಿ ಗೆ ಕರೆ ತರುವ ಶಕ್ತಿ ನನ್ನಲಿಲ್ಲ, ಅವರನ್ನು ರಾಷ್ಟ್ರೀಯ ನಾಯಕರು ಉಚ್ಚಾಟನೆ ಮಾಡಿದ್ದಾರೆ. ಈಗ ಅವರೇ ಮರಳಿ ಕರೆತರಬೇಕು” ಎಂದರು.
ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ವಿಶೇಷತೆ ಎನೂ ಇಲ್ಲ. ಮುಂಬೈನಿಂದ ಬೆಂಗಳೂರಿಗೆ ಬಂದಿದ್ದೆ. ಯತ್ನಾಳ್ ಕರೆ ಮಾಡಿದ್ದರು. ಅದರಂತೆ ಅಲ್ಲಿಗೆ ಹೋದೆ. ಅಲ್ಲಿ ರಾಜುಗೌಡ ಬಂದಿದ್ದು ಗೊತ್ತಿರಲಿಲ್ಲ. ಗೊತ್ತಿದ್ದರೆ ನಾನು ಹೋಗುತ್ತಿರಲಿಲ್ಲ. ರಾಜು ಗೌಡ ಸಭೆಯಲ್ಲಿ ಚರ್ಚೆಯಾಗಿರುವ ವಿಚಾರಗಳನ್ನು ಮಾಧ್ಯಮಗಳ ಎದುರು ಹೇಳಿಲ್ಲ. ಕಥೆ ಕಟ್ಟಿ ಹೇಳಿದ್ದಾನೆ. ಚರ್ಚೆಯಾಗಿದ್ದ ವಿಷಯ ಹೇಳಿದ್ದರೆ, ವಿಜಯೇಂದ್ರ ಅವನಿಗೆ ಹೊಡೆಯುತ್ತಿದ್ದ’ ಎಂದರು.
” ಸಭೆಯಲ್ಲಿ ಮೀಸಲಾತಿ ಕುರಿತು ಯತ್ನಾಳ್ ಅವರು ಚರ್ಚೆ ಮಾಡಿದ್ದರು.ನಾವು ಭಿನ್ನಮತೀಯು ಅನ್ನುವ ಟ್ಯಾಗ್ ತೆಗೆಯಿರಿ.ಪಕ್ಷ ಶುದ್ಧೀಕರಣ ಸಲುವಾಗಿ ಹೋರಾಡುತ್ತಿದ್ದೇವೆ. ಈಶ್ವರಪ್ಪ ಇವತ್ತಿಗೂ ಹಿಂದುಳಿದ ವರ್ಗದ ನಾಯಕ.ಈಶ್ವರಪ್ಪ ಅವರ ಬಗ್ಗೆ ಇವತ್ತಿಗೂ ಗೌರವ ಇದೆ.ನಾವು ಏನೇ ಮಾಡಿದರೂ ಪಕ್ಷದ ಚೌಕಟ್ಟಿನಲ್ಲಿ ಇರುತ್ತೇವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.