Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
Team Udayavani, Sep 28, 2024, 8:50 PM IST
ಹುಣಸೂರು: ಕ್ಲುಲ್ಲಕ ಕಾರಣಕ್ಕೆ ಹಂದಿಫಾರ್ಮ್ ಕಾರ್ಮಿಕನೊಬ್ಬ ಕೇರಳ ಮೂಲದ ಮ್ಯಾನೇಜರ್‌ನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ (ಸೆ27) ತಾಲೂಕಿನ ಹನಗೋಡಿಗೆ ಸಮೀಪದ ಹೆಬ್ಬಳ್ಳ ಗ್ರಾಮದಲ್ಲಿ ನಡೆದಿದೆ.
ಕೇರಳದ ವಯನಾಡ್ ಜಿಲ್ಲೆಯ ಗಿರೀಶ್ ಅಬ್ರಹಂ(38)ಕೊಲೆಯಾದ ವ್ಯಕ್ತಿ. ಕೇರಳದವನೇ ಆದ ಶಂಸುದ್ದೀನ್ ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಗಿರೀಶ್ ಅಬ್ರಹಂ ಮತ್ತು ಆರೋಪಿ ಶಂಸುದ್ದೀನ್ ಕೇರಳ ಮೂಲದ ಹನೀಫ್ ರಿಗೆ ಸೇರಿದ ಹುಣಸೂರು ತಾಲೂಕಿನ ಹೆಬ್ಬಳ್ಳದ ಹಂದಿಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಶಂಸುದ್ದೀನ್ ತನಗೆ ಹೆಚ್ಚಿನ ಕೆಲಸ ಹೇಳುವುದು, ತನ್ನ ವಿರುದ್ದ ಮಾಲಕರಿಗೆ ಚಾಡಿ ಹೇಳುತ್ತಾನೆಂಬ ಕಾರಣಕ್ಕೆ ಶುಕ್ರವಾರ ರಾತ್ರಿ ಶೆಡ್‌ನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಂಸುದ್ದೀನ್ ಚಾಕುವಿನಿಂದ ಗಿರೀಶ್ ಬೆನ್ನಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಸಹಕಾರ್ಮಿಕರು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಗಿರಿಶ್ ಅಬ್ರಹಂ ಕೊಲೆ ಸಂಬಂಧ ಸಹೋದರ ವಿನೋದ್ ಅಬ್ರಹಂ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಎಸ್.ಪಿ.ವಿಷ್ಣುವರ್ಧನ್, ಅಡಿಷನಲ್ ಎಸ್‌ಪಿ ನಾಗೇಶ್, ಡಿವೈಎಸ್‌ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ಮುನಿಯಪ್ಪ ಭೇಟಿ ನೀಡಿದ್ದಾರೆ.. ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಶನಿವಾರ(ಸೆ28) ನೇರಳಕುಪ್ಪೆಯ ಬಾರ್ ಬಳಿ ಪೊಲೀಸ್ ಸಿಬಂದಿಗಳಾದ ರವಿ,ಇಮ್ರಾನ್ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Australia vs Pakistan T20: ಪಾಕ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.