Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ
ರಾಜ್ಯ ಕಾರ್ಮಿಕ ಇಲಾಖೆ ಅಧಿಸೂಚನೆ ಹಲವು ಷರತ್ತು
Team Udayavani, Sep 29, 2024, 6:45 AM IST
ಬೆಂಗಳೂರು: ಹತ್ತು ಅಥವಾ ಹೆಚ್ಚು ಸಿಬಂದಿ ಹೊಂದಿರುವ ಅಂಗಡಿಗಳು, ವಾಣಿಜ್ಯ ಮುಂಗಟ್ಟುಗಳು ವರ್ಷದ 365 ದಿನವೂ ದಿನದ 24 ಗಂಟೆ ತೆರೆದು ವ್ಯಾಪಾರ ವಹಿವಾಟು ನಡೆಸಬಹುದು ಎಂದು ಸರಕಾರ ಪ್ರಕಟಿಸಿದೆ.
ಸಿಬಂದಿ ಗರಿಷ್ಠ ಕೆಲಸದ ಅವಧಿ ದಿನಕ್ಕೆ 8 ಗಂಟೆ ಇರಲಿದ್ದು, ವಾರಕ್ಕೆ 48 ಗಂಟೆ ನಿಗದಿ ಪಡಿಸಲಾಗಿದೆ. ಹೆಚ್ಚುವರಿ ಸಮಯ ಕೆಲಸ ಮಾಡಲು ಅವಕಾಶವಿದ್ದು, ದಿನಕ್ಕೆ 10 ಗಂಟೆ ಮತ್ತು ವಾರಕ್ಕೆ ಗರಿಷ್ಠ 50 ಗಂಟೆ ಕೆಲಸ ಮಾಡಬಹುದು. ಒಂದು ವೇಳೆ ನಿಗದಿತ ರಜಾ ದಿನದಂದು ಕೆಲಸ ಮಾಡಿಸುವುದು ಮತ್ತು ನಿಗದಿತ ಕೆಲಸದ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೆ ಮಾಲಕರಿಗೆ ದಂಡ ವಿಧಿಸಲಾಗುತ್ತದೆ.
ವಾರದಲ್ಲಿ 1 ದಿನ ರಜೆ (ವೀಕ್ ಆಫ್) ಕೊಡಬೇಕು. ಕೆಲಸದ ಜಾಗದಲ್ಲಿ ಪ್ರತೀ ಉದ್ಯೋಗಿಯ ಮಾಹಿತಿ ಪ್ರಕಟಿಸುವುದರ ಜತೆಗೆ ರಜೆ ತೆಗೆದುಕೊಂಡ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.
ಪಾಳಿಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸುವುದು ಕಡ್ಡಾಯ. ಮಹಿಳಾ ಸಿಬಂದಿ ಲಿಖೀತವಾಗಿ ಅನುಮತಿ ನೀಡಿದರೆ ಮಾತ್ರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಅಂತಹ ಸಂದರ್ಭದಲ್ಲಿ ಅವರ ಘನತೆ ಕಾಪಾಡುವ, ಭದ್ರತೆ ನೀಡುವ ಹೊಣೆಯನ್ನು ಸಂಸ್ಥೆ ನಿರ್ವಹಿಸಬೇಕು. ಜತೆಗೆ ರೆಸ್ಟ್‌ರೂಮ್, ಶೌಚಾಲಯ, ಸೇಫ್ಟಿ ಲಾಕರ್ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು ಎಂದು ಸೂಚಿಸಲಾಗಿದೆ.
ಷರತ್ತುಗಳೇನು?
ದಿನಕ್ಕೆ ಗರಿಷ್ಠ 10 ಗಂಟೆ, ವಾರಕ್ಕೆ ಗರಿಷ್ಠ 50 ಗಂಟೆ ಕೆಲಸ ಮಾಡಿಸಬಹುದು
ನಿಗದಿತ ಕೆಲಸದ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೆ ಮಾಲಕರಿಗೆ ದಂಡ
ಕೆಲಸದ ಜಾಗದಲ್ಲಿ ಉದ್ಯೋಗಿಯ ಮಾಹಿತಿ ಪ್ರಕಟಿಸಬೇಕು
ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆ ಯರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು
ಮಹಿಳಾ ಸಿಬಂದಿಗೆ ರೆಸ್ಟ್‌ರೂಮ್, ಶೌಚಾಲಯ, ಸೇಫ್ಟಿ ಲಾಕರ್ ಕಲ್ಪಿಸಬೇಕು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.