Retro Style; ಸೋಶಿಯಲ್‌ ಮೀಡಿಯಾದಲ್ಲೊಂದು ರೆಟ್ರೋ ಸ್ಟೈಲ್‌


Team Udayavani, Oct 4, 2024, 3:53 PM IST

Retro style trends in social media

ಅದೊಂದು ಕಾಲವಿತ್ತು, ಬೈತಲೆ ತೆಗೆದು ಉದ್ದಕ್ಕೆ ನೇಯ್ದ ಜಡೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವುಗಳಿಂದ ಸಿಂಗರಿಸಿದ ನೀಳವಾದ ಕಪ್ಪನೆಯ ಮಿರಿ ಮಿರಿ ಹೊಳೆಯುವ ಕೇಶ, ಪ್ರಿಂಟೆಡ್‌ ಜರಿ ಸೀರೆ, ಗಾಜಿನ ಬಳೆಗಳು, ಬುಗ್ಗೆ, ಅಥವಾ ಉದ್ದ ತೊಳಿನ ಕುಪ್ಪಸ, ಎದ್ದು ಕಾಣುವ ಚಂದ್ರಾಕಾರದ ಬೊಟ್ಟು, ಹೊಳೆವ ಮೂಗುತ್ತಿ ಇವುಗಳೆಲ್ಲಾ ಸುಮಾರು 80 ಮತ್ತು 90ರ ದಶಕದ ನಡುವಿನ ಕನ್ನಡ ಮತ್ತು ಬೇರೆ ಬೇರೆ ಚಿತ್ರ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೀದಾ ಸಾದ ನಾಯಕಿ ಪಾತ್ರಧಾರಿಗಳ ಉಡುಗೆ ತೊಡುಗೆಗಳು. ಸಾಮಾನ್ಯವಾಗಿ ಸಿನಿಮಾ ನಾಟಕ, ಅಥವಾ ಇನ್ಯಾವುದೇ ರಂಗ ಚಟುವಟಿಕೆಗಳಲ್ಲಿ ನಾಯಕಿ, ನಾಯಕ ಅಥವಾ ಇನ್ನುಳಿದ ಪಾತ್ರಧಾರಿಗಳ ಉಡುಪು ಅವರು ಯಾವ ಬಗೆಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎನ್ನವುದರ ಮೇಲೆ ನಿರ್ಧಾರವಾಗುತ್ತಿತ್ತು. ಮೇಲೆ ಹೇಳಿದಂತೆ ಒಂದೊಮ್ಮೆ ಸಿನಿಮಾದ ನಾಯಕಿ ಅಮಾಯಕಿ ಅಥವಾ ಸಂಸ್ಕಾರವಂತ ಕುಟುಂಬದಿಂದ ಬಂದ ಪಾತ್ರವನ್ನು ನಿಭಾಯಿಸುತ್ತಿದ್ದರೆ ಆಕೆಯ ಉಡುಪು ಇಷ್ಟೇ ಸರಳ ರೀತಿಯಲ್ಲಿರುವುದು ಆ ಕಾಲದ ಟ್ರೆಂಡ್‌. ಇದು ಬರಿ ಸಿನಿಮಾಗಳಿಗೆ ಮಾತ್ರ ಸೀಮಿತವಾದುದ್ದಲ್ಲ ಆ ಕಾಲದಲ್ಲಿನ ಸ್ತ್ರೀಯರು ಧರಿಸುತ್ತಿದ್ದ ಉಡುಪುಗಳು ಸಾಮಾನ್ಯವಾಗಿ ಇದೇ ಆಗಿರುತ್ತಿತ್ತು.

ಸುಮಾರು 2000 ಇಸವಿಯ ಇಚೇಗೆ ಬೇರೆ ಬೇರೆ ಪಾಶ್ಚಿಮಾತ್ಯ ಉಡುಗೆಗಳಿಂದ ಪ್ರೇರಿತಗೊಂಡು ಸಿನಿಮಾಗಳಲ್ಲೂ ಪಾತ್ರಧಾರಿಗಳ ಉಡುಗೆ ತೊಡುಗೆಗಳಲ್ಲಿ ಬದಲಾವಣೆಗಳು ಬರಲಾರಂಭವಾದವು. ಕ್ರಮೇಣ ತಮ್ಮ ನೆಚ್ಚಿನ ನಾಯಕ, ನಾಯಕಿಯರ ಪ್ಯಾಷನ್‌ ಗಳನ್ನು ಹಿಂಬಾಲಿಸುವ ಅಭಿಮಾನಿಗಳ ಉಡುಪುಗಳಲ್ಲೂ ಬದಲಾವಣೆಗಳು ಬಂದು ಆಗಿನ ರೆಟ್ರೋ ನೀರ ಮೇಲಿನ ಗುಳ್ಳೆಯಂತೆ ಕಣ್ಮರೆಯಾಯಿತು.

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಇದೀಗ ಮತ್ತೆ ರೆಟ್ರೋ ಸ್ಟೈಲ್‌ ಚಾಲ್ತಿಗೆ ಬಂದಿದೆ. ಇದೀಗ ನವ ಮಾಧ್ಯಮಗಳ ಉಗಮದ ನಂತರ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ವಿಷಯಗಳು ಟ್ರೆಂಡಿಂಗ್‌ ನಲ್ಲಿರುವುದು ಸಾಮಾನ್ಯ.

ಇದೀಗ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರುವುದು ರೆಟ್ರೋ ಉಡುಪು ಮತ್ತು ಹಾಡುಗಳು. ಸದ್ಯಕ್ಕೆ ರೀಲ್ಸ್‌ ಪೋಟೋ ಶೂಟ್‌ಗಳಲ್ಲಿ ಅದರಲ್ಲೂ ಹೆಚ್ಚಾಗಿ ಯುವತಿಯರು ರೆಟ್ರೋ ಕಾಲದ ಉಡುಪು ಧರಿಸಿ, ರೆಟ್ರೋ ಸಾಂಗ್‌ಗಳಿಗೆ ರೀಲ್ಸ್‌ ಮಾಡುತ್ತಿದ್ದಾರೆ. ಇದರ ಜತೆಗೆ ಪ್ರಿವೆಡಿಂಗ್‌ ಶೂಟ್‌, ಕಿರುತೆರೆಯ ರಿಯಾಲಿಟಿ ಶೋ, ಶಾಲಾ ಕಾಲೇಜುಗಳ ಕಾರ್ಯಕ್ರಮದಲ್ಲೂ ರೆಟ್ರೋ ಗಾಳಿ ಬೀಸುತ್ತಿದೆ.

ಎಸ್‌ ಜಾನಕಿ ಹಾಡಿರುವ ‘ನಗು ಎಂದಿದೆ ಮಂಜಿನ ಬಿಂದು’, ಎಸ್‌.ಪಿ ಬಾಲಸುಬ್ರಹ್ಮಣ್ಯ ಅವರು ಹಾಡಿರುವ ‘ನಗುವ ನಯನ ಮಧುರಾ ಮೌನಾ’ ಹಾಡುಗಳು ಅಂದಿಂಗೂ ಇಂದಿಗೂ, ಎಂದೆಂದಿಗೂ ಜನಮಾನಸದಲ್ಲಿ, ಸಂಗೀತ ಪ್ರಿಯರ ಮಸ್ತಕದಲ್ಲಿ ಅಚ್ಚೊತ್ತಿರುವ ಹಾಡುಗಳು. ಈ ಹಾಡುಗಳು ಇಗ ಮತ್ತೆ ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಗುನುಗುತ್ತಿವೆ. ದಶಕಗಳಿಂದ ಸಿನಿಮಾ ರಂಗದಿಂದ ಈ ರೀತಿಯ ಮೆಲೋಡಿಯಸ್‌ ಸಾಂಗ್‌ ಮತ್ತು ಉಡುಪುಗಳು ಮರೆಯಾಗಿದ್ದರು ಕೂಡ ಇದೀಗ ಅವು ಮತ್ತೆ ನವ ಮಾಧ್ಯಮ ಮೂಲಕ ಬೆಳಕಿಗೆ ಬಂದಿದೆ.

-ದಿವ್ಯಾ ದೇವಾಡಿಗ

ಟಾಪ್ ನ್ಯೂಸ್

Kharge (2)

Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

udupi1

Udupi: ಜಿಲ್ಲಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ತಬ್ಧ, ಕಚೇರಿಗಳು ಬಂದ್… ನೌಕರರ ಮುಷ್ಕರ

ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ: ಅಶೋಕ

R. Ashok: ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

CT-Ravi

MUDA Case: ಸಿದ್ದರಾಮಯ್ಯ ಕಳಂಕ ರಹಿತರೆಂದು ತನಿಖೆಯಲ್ಲಿ ಸಾಬೀತಾಗಲಿ: ಎಂಎಲ್‌ಸಿ ಸಿ.ಟಿ.ರವಿ

15-uv-fusion

UV Fusion: ಮೃಗಗಳ ಜಗತ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

WhatsApp Image 2024-10-01 at 9.22.19 PM

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ

T-20-Captains

Womens T20 World Cup: ಪುರುಷರು ಆಯ್ತು ಈಗ ವನಿತಾ ಕ್ರಿಕೆಟ್‌ ಸಮರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3

Hiriydaka: ಅಕ್ರಮ ಮರಳುಗಾರಿಕೆ ಟಿಪ್ಪರ್‌ ಸಹಿತ ಇಬ್ಬರು ಆರೋಪಿಗಳು ವಶಕ್ಕೆ

Kharge (2)

Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ

1-reasad

Pune; ಘಾಟ್ ಪ್ರದೇಶದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇ*ಪ್:ಸ್ನೇಹಿತನಿಗೆ ಹಲ್ಲೆ

7

Kollegala: ದೇವಾಲಯದ ಹಿಂಭಾಗದ ಕಾವೇರಿ ನದಿಯಲ್ಲಿ ಯುವಕನ ಶವ ಪತ್ತೆ

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.