Rahul Gandhi ಗ್ಯಾರಂಟಿಗಳು ಕರ್ನಾಟಕ, ಹಿಮಾಚಲದಲ್ಲಿ ಫಸಲು ನೀಡಿವೆ: ಅಮಿತ್ ಶಾ
ಬಿಜೆಪಿ ಈಡೇರಿಸಲು ಸಾಧ್ಯವಾಗದ ಯಾವುದೇ ಗ್ಯಾರಂಟಿ ನೀಡುವುದಿಲ್ಲ
Team Udayavani, Sep 29, 2024, 5:24 PM IST
ಚಂಡೀಗಢ: ಚುನಾವಣ ಕಾವೇರಿರುವ ಹರಿಯಾಣದಲ್ಲಿ ಭಾನುವಾರ(ಸೆ29) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ”ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರ ಚುನಾವಣ ಗ್ಯಾರಂಟಿಗಳು ಫಸಲು ಪಡೆದಿವೆ ಎಂದಿದ್ದಾರೆ.
ಗುರುಗ್ರಾಮ್‌ನ ಬಾದಶಹಪುರದಲ್ಲಿ ಚುನಾವಣ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿ, ಚುನಾವಣ ಸಮಯದಲ್ಲಿ ಕಾಂಗ್ರೆಸ್ ದೊಡ್ಡ ಭರವಸೆಗಳನ್ನು ನೀಡುತ್ತದೆ. ಹಿಮಾಚಲ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ರಾಹುಲ್ ಗಾಂಧಿಯವರ ಗ್ಯಾರಂಟಿಗಳು ಫಲ ನೀಡಿದವು. ಆದರೆ ಅವರಿಗೆ ಈಗ ತಮ್ಮ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ” ಎಂದು ಕಿಡಿ ಕಾರಿದರು.
ಬಿಜೆಪಿ ಈಡೇರಿಸಲು ಸಾಧ್ಯವಾಗದ ಯಾವುದೇ ಭರವಸೆ ನೀಡುವುದಿಲ್ಲ. ರಾಹುಲ್ ಬಾಬಾ ಮತ್ತು ಕಂಪನಿ ಅಭಿವೃದ್ಧಿಯನ್ನು ಕೈಗೊಳ್ಳಲು ಸಾಧ್ಯವಿಲ್ಲ.ಹರ್ಯಾಣದ ಅಭಿವೃದ್ಧಿಯನ್ನು ಖಚಿತಪಡಿಸುವುದು ಡಬಲ್ ಇಂಜಿನ್ ಸರಕಾರ. ನಾವು ದೇಶದ ಗಡಿಯನ್ನು ಭದ್ರಪಡಿಸುತ್ತೇವೆ, ನಾವು ಮೀಸಲಾತಿಯನ್ನು ರಕ್ಷಿಸುತ್ತೇವೆ ಮತ್ತು 370 ನೇ ವಿಧಿಯನ್ನು ಹಿಂತಿರುಗಿಸಲು ಎಂದಿಗೂ ಅನುಮತಿಸುವುದಿಲ್ಲ” ಎಂದರು.
”ವಕ್ಫ್ ಮಂಡಳಿಯಲ್ಲಿನ ಪ್ರಸ್ತುತ ಶಾಸನದಲ್ಲಿ ಸಮಸ್ಯೆ ಇದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನಾವು ಅದನ್ನು ತಿದ್ದುಪಡಿ ಮಾಡುತ್ತೇವೆ” ಎಂದು ಘೋಷಿಸಿದರು.
ಇಂದಿರಾ ಗಾಂಧಿಯಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಕಾಂಗ್ರೆಸ್ ಒನ್ ರ‍್ಯಾಂಕ್ ಒನ್ ಪೆನ್ಷನ್ ಬೇಡಿಕೆಯನ್ನು ಈಡೇರಿಸಲಿಲ್ಲ. 2015ರಲ್ಲಿ ನರೇಂದ್ರ ಮೋದಿ ಸರಕಾರ ಅದನ್ನು ಈಡೇರಿಸಿ ಸೈನಿಕರಿಗೆ ಸೂಕ್ತ ಗೌರವ ನೀಡಿತು ಎಂದರು.
ಅಗ್ನಿಪಥ್ ಯೋಜನೆ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, ”ತುಷ್ಟೀಕರಣದಿಂದ ಕಾಂಗ್ರೆಸ್ ಕುರುಡಾಗಿದೆ. ರಾಹುಲ್ ಗಾಂಧಿ ಸುಳ್ಳು ಹೇಳುವ ಯಂತ್ರ. ಅಗ್ನಿವೀರ್‌ಗಳಿಗೆ ಉದ್ಯೋಗ ಸಿಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಸಶಸ್ತ್ರ ಪಡೆಗಳ ಯುವ ಮುಖಗಳನ್ನು ಖಚಿತಪಡಿಸಿಕೊಳ್ಳಲು ಅಗ್ನಿವೀರ್ ಯೋಜನೆಯನ್ನು ಪರಿಚಯಿಸಲಾಗಿದೆ. ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಲು ಹಿಂಜರಿಯಬೇಡಿ. ಹರಿಯಾಣ ಮತ್ತು ಕೇಂದ್ರ ಸರಕಾರವು ಪ್ರತಿಯೊಬ್ಬ ಅಗ್ನಿವೀರ್‌ಗೆ ಪಿಂಚಣಿ, ಉದ್ಯೋಗಗಳನ್ನು ನೀಡಲಿದೆ” ಎಂದು ಕೇಂದ್ರ ಗೃಹ ಸಚಿವರು ಭರವಸೆ ನೀಡಿದರು.
ಅಕ್ಟೋಬರ್ 3 ರಂದು ನವರಾತ್ರಿ ಪ್ರಾರಂಭವಾಗುತ್ತದೆ. ಅಕ್ಟೋಬರ್ 5 ರಂದು, ನಿಮ್ಮ ಮತ ಚಲಾಯಿಸುವಾಗ, ಶಕ್ತಿ ದೇವತೆ ಅನ್ನು ಯಾರು ಅವಮಾನಿಸುತ್ತಾರೆ ಎನ್ನುವುದನ್ನು ಅರಿತು ರಾಹುಲ್ ಬಾಬಾ ಮತ್ತು ಅವರ ಕಾಂಗ್ರೆಸ್ ಪಕ್ಷಕ್ಕೆ ಉತ್ತರವನ್ನು ನೀಡಬೇಕು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.