BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು
Team Udayavani, Sep 29, 2024, 9:23 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ -11(Bigg Boss Kannada-11) ಒಟ್ಟು ಒಂಬತ್ತು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇದರಲ್ಲಿ ಇಬ್ಬರು ನರಕದ ಮನೆಗೆ ಹೋಗಿದ್ದಾರೆ. ಉಳಿದವರು ಸ್ವರ್ಗದ ಮನೆಯಲ್ಲಿದ್ದಾರೆ.
ವಿಭಿನ್ನ ವ್ಯಕ್ತಿತ್ವಗಳ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಹತ್ತನೇ ಸ್ಪರ್ಧಿ ದೊಡ್ಮನೆ ಆಟಕ್ಕೆ ಪ್ರವೇಶಿಸಿದ್ದಾರೆ.
ನಟಿ ಹಂಸಾ:
ಕಳೆದ 25 ವರ್ಷದಿಂದ ಸಿನಿಮಾ ಇಂಡಸ್ಟ್ತಿ ಹಾಗೂ ಕಿರುತೆರೆ ಲೋಕದಲ್ಲಿರುವ ಅವರು ಹಂಸಾ ಅವರು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗಿನ ವರ್ಷದಲ್ಲಿ ಹಂಸಾ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ವಿಲನ್ ‘ರಾಜೇಶ್ವರಿ’ ಪಾತ್ರದಲ್ಲಿ ನಟಿಸಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ
‘ರಾಜಾ ರಾಣಿ’ ಶೋನಲ್ಲಿ ಅವರು ಪತಿ ಕಾಣಿಸಿಕೊಂಡಿದ್ದರು. ಪತಿಯೊಂದಿಗೆ ಜಗಳವಾಗಿ ಅವರು ಮನೆ ಬಿಟ್ಟು ಹೋದ ವಿಚಾರ ದೊಡ್ಡ ಸುದ್ದಿಯಾಗಿತ್ತು.
ಧ್ರುವ, ಅಮ್ಮ, ರಾಜಾಹುಲಿ, ಸಖತ್, ಜೇಮ್ಸ್, ಉಂಡೆನಾಮ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಾನಸಾ ಸಂತು: ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ತುಕಾಲಿ ಸಂತು ಅವರ ಪತ್ನಿ ಮಾನಸಾ ಅವರು ಕೂಡ ಹಂಸಾ ಅವರ ಜತೆ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದಾರೆ.
ಮಾನಸಾ ಕಳೆದ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಬಂದು ಸಖತ್ ಮನರಂಜನೆ ನೀಡಿದ್ದರು.
ಹಂಸಾ ಅವರು ಸ್ವರ್ಗದ ಮನೆಗೆ, ಮಾನಸಾ ಅವರು ನರಕದ ಮನೆಗೆ ಹೋಗಿದ್ದಾರೆ
ಐಶ್ವರ್ಯಾ ಸಿಂಧೋಗಿ:
ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿರುವ ಅವರು ‘ನಮ್ಮ ಲಚ್ಚಿ’ ಎನ್ನುವ ಧಾರಾವಾಹಿಯಿಂದ ಹೆಚ್ಚು ಚಿರಪರಿಚಿತರು.
ಈ ಹಿಂದೆ ಅವರು ‘ಮಂಗಳ ಗೌರಿ ಮದುವೆ’ ಯಲ್ಲಿ ಕಾಣಿಸಿಕೊಂಡಿದ್ದರು.
ಸೃಜನ್ ಲೋಕೇಶ್ ಅವರ ನಟನೆಯ ಸಿನಿಮಾ ಸಪ್ನೋಂಕಿ ರಾಣಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಸಿಂಹಾದ್ರಿ’, ಮಟಾಷ್’, ಸಂಯುಕ್ತ 2′, ಡಾರ್ಕ್, ವಾವ್, ಯಾರು ಯಾರು ನೀ ಯಾರು, ಸೈತಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಅಪ್ಪ – ಅಮ್ಮನನ್ನು ಕಳೆದುಕೊಂಡ ದುಃಖದ ವಿಚಾರ ಅವರು ಹಂಚಕೊಂಡು ವೇದಿಕೆಯಲ್ಲಿ ಭಾವುಕರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.