BBK11: ಬಿಗ್ ಬಾಸ್ ಸೀಸನ್ 10 ಜೈಲಲ್ಲಿ ವೀಕ್ಷಿಸಿ, 11ರ ಸ್ಪರ್ಧಿಯಾದ ಚೈತ್ರಾ
ಸತ್ಯ ಹೇಳಿ ವಿವಾದ ಆದರೆ ಅದರ ಮೇಲೆ ನನಗೆ ಪ್ರೀತಿ: ಚೈತ್ರಾ ಕುಂದಾಪುರ
Team Udayavani, Sep 29, 2024, 10:32 PM IST
ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ (Bigg Boss Kannada -11) ದ ಈ ಸೀಸನ್ ನಲ್ಲಿ ಇದುವರೆಗೆ ಕಲರ್ ಫುಲ್ ವ್ಯಕ್ತಿತ್ವದ ಸ್ಪರ್ಧಿಗಳು ದೊಡ್ಮನೆಯ ಬಿಗ್ ಬಾಸ್ ಆಟಕ್ಕೆ ಸಿದ್ದರಾಗಿದ್ದಾರೆ.
‘ಸ್ವರ್ಗ – ನರಕ’ದ ಮನೆಯೊಳಗೆ ಸ್ಪರ್ಧಿಗಳು ದಿನ ಕಳೆಯಲಿದ್ದಾರೆ. ಕಿರುತೆರೆ ನಟ, ನಟಿಯರು, ವಕೀಲ ಸೇರಿದಂತೆ ನಾನಾ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.
ವಿವಾದದಿಂದಲೇ ಸುದ್ದಿಯಾಗಿರುವ ಕರಾವಳಿ ಮೂಲದ ಚೈತ್ರಾ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ನಿನ್ನೆಯೇ ಅವರ ಹೆಸರನ್ನು ರಿವೀಲ್ ಆಗಿತ್ತು.
ಯಾರು ಈ ಫೈರ್ ಬ್ರ್ಯಾಂಡ್..?: ಕುಂದಾಪುರ ಮೂಲದ ಚೈತ್ರಾ ಆ ಭಾಗದಲ್ಲಿ ವಾದ – ವಿವಾದದಿಂದಲೇ ಸುದ್ದಿ ಆಗಿದ್ದವರು.
ಕಳೆದ ಕೆಲ ಸಮಯದ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿಯಾಗಿದ್ದ ಕುಂದಾಪುರ ಮೂಲದ ಚೈತ್ರಾ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಕೆಲ ಸಮಯದ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಅವರು ಬಿಡುಗಡೆ ಆಗಿದ್ದಾರೆ.
ಚೈತ್ರಾ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರು. ತೆಕ್ಕಟ್ಟೆ ಎಂಬಲ್ಲಿ ಶಾಲೆ ಹಾಗೂ ಪಿಯುಸಿ ಶಿಕ್ಷಣ ಪಡೆದ ಚೈತ್ರಾ ಕುಂದಾಪುರ ಪದವೀಧರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೈತ್ರಾ ಕುಂದಾಪುರ ಖ್ಯಾತ ಸುದ್ದಿ ವಾಹಿನಿಗಳಲ್ಲಿ ಆಂಕರ್ ಆಗಿ, ಜನಪ್ರಿಯ ದಿನಪತ್ರಿಕೆಗಳಲ್ಲಿ ಉಪ ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಯುವ ಮಾಧ್ಯಮ ಪ್ರಶಸ್ತಿಯೂ ಲಭಿಸಿತ್ತು.
ವಿದ್ಯಾರ್ಥಿ ಸಂಘಟನೆ ಸೇರಿದಂತೆ ಹಿಂದೂಪರ ಸಂಘಟನೆಯಲ್ಲೂ ಅವರು ಕಾರ್ಯಕರ್ತೆ ಆಗಿದ್ದರು. ಲವ್ ಜಿಹಾದ್ ಪ್ರಕರಣಗಳ ವಿರುದ್ಧ ಚೈತ್ರಾ ಕುಂದಾಪುರ ಹೋರಾಡಿದ್ದರು. ಚೈತ್ರಾ ಕುಂದಾಪುರ ಬರೆದ ‘ಪ್ರೇಮಪಾಶ’ ಕೃತಿ ವಿವಾದ ಸೃಷ್ಟಿಸಿತ್ತು.
ಅವರಿಗೆ ಪ್ರೇಕ್ಷಕರಿಂದ 15 ನಿಮಿಷದಲ್ಲಿ 2.80 ಲಕ್ಷ ವೋಟಿಂಗ್ ಬಂದಿದೆ. ಆದರೆ ಅವರು ನರಕಕ್ಕೆ ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.