Kanpur Test: ಪಂದ್ಯ ಡ್ರಾ ಹಾದಿಯತ್ತ
Team Udayavani, Sep 29, 2024, 11:51 PM IST
ಕಾನ್ಪುರ: ಕಾನ್ಪುರ ಟೆಸ್ಟ್ ಪಂದ್ಯದ ಸತತ ಎರಡನೇ ದಿನದಾಟವೂ ಪ್ರತಿಕೂಲ ಸ್ಥಿತಿಯಿಂದಾಗಿ ರದ್ದುಗೊಳ್ಳುವುದರೊಂದಿಗೆ ಕ್ರಿಕೆಟ್ ಅಭಿಮಾನಿಗಳು ನಿರಾಸೆಗೊಂಡರು.
ರವಿವಾರದ ಆಟ ಒದ್ದೆ ಅಂಗಳದಿಂದಾಗಿ ಸಾಧ್ಯವಾಗಲಿಲ್ಲ. ಹೀಗಾಗಿ ಗ್ರೀನ್‌ಪಾರ್ಕ್ ಅಂಗಳದ ಡ್ರೈನೇಜ್ ವ್ಯವಸ್ಥೆ ಬಗ್ಗೆ ಪ್ರಶ್ನೆಗಳೆದ್ದಿವೆ.
ಶುಕ್ರವಾರದ ಪ್ರಥಮ ದಿನ ನಡೆದ 35 ಓವರ್‌ಗಳ ಆಟ ಹೊರತುಪಡಿಸಿದರೆ, ಅನಂತರದ ಎರಡು ದಿನ ಒಂದೇ ಒಂದು ಎಸೆತವೂ ಸಾಧ್ಯವಾಗಿಲ್ಲ. ಶನಿವಾರದ ಆಟ ಕೂಡ ವಾಶೌಟ್ ಆಗಿತ್ತು. ಬಾಂಗ್ಲಾದೇಶ 3 ವಿಕೆಟಿಗೆ 107 ರನ್ ಮಾಡಿದೆ.
ರವಿವಾರ ಕಾನ್ಪುರದಲ್ಲಿ ಸೂರ್ಯ ದರ್ಶನ ವಾಗಲಿಲ್ಲವಾದರೂ ಮಳೆ ಇರಲಿಲ್ಲ. ಆದರೆ ಒದ್ದೆ ಔಟ್‌ಫೀಲ್ಡ್‌ನಿಂದಾಗಿ ಅಂಗಳವನ್ನು ಆಟಕ್ಕೆ ಸಜ್ಜುಗೊಳಿಸುವುದು ಅಸಾಧ್ಯವಾಗಿತ್ತು. ಅಂತಿಮವಾಗಿ ಅಪರಾಹ್ನ 2 ಗಂಟೆಗೆ ದಿನದಾಟವನ್ನು ರದ್ದುಗೊಳಿಸಲಾಯಿತು.
ಸೋಮವಾರ ಮತ್ತು ಮಂಗಳವಾರ ವಾತಾ ವರಣ ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ ಈಗಾಗಲೇ 8 ಅವಧಿಗಳ ಆಟ ನಷ್ಟ ವಾಗಿರುವುದರಿಂದ ಈ ಪಂದ್ಯ ಡ್ರಾ ಹಾದಿ ಹಿಡಿದಿರುವುದು ಸ್ಪಷ್ಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.