ಬಂಟರ ಸಂಘದಿಂದ ಡಾ| ಪ್ರಕಾಶ್ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ
Team Udayavani, Sep 30, 2024, 12:56 AM IST
ಪಡುಬಿದ್ರಿ: ಪಡುಬಿದ್ರಿಯ ಅಭಿಮಾನಿ ಬಳಗದ ಪ್ರೀತಿ ಅಮೋಘ. ಗ್ರಾಮ ದೇಗುಲದ ಜೀರ್ಣೋದ್ಧಾರಕ್ಕೆ ನಾವೆಲ್ಲ ಒಗ್ಗಟ್ಟಾಗೋಣ. ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರವೂ ಬೇಕು. ಬಂಟ ಸಮುದಾಯದ ಅಭ್ಯುತ್ಥಾನಕ್ಕಾಗಿ ಜೀವನ ಪರ್ಯಂತ ಸೇವೆ ಸಲ್ಲಿಸುವೆ ಎಂದು ಬೆಂಗಳೂರಿನ ಎಂಆರ್‌ಜಿ ಗ್ರೂಪ್‌ನ ಚೇರ್ಮನ್ ಮತ್ತು ಆಡಳಿತ ನಿರ್ದೇಶಕ ಡಾ| ಪ್ರಕಾಶ್ ಕೆ. ಶೆಟ್ಟಿ ಹೇಳಿದರು.
ಅವರು ರವಿವಾರ ಇಲ್ಲಿನ ಬಂಟರ ಭವನದಲ್ಲಿ ಪಡುಬಿದ್ರಿ ಬಂಟರ ಸಂಘ, ಸಿರಿಮುಡಿ ದತ್ತಿ ನಿಧಿ ಹಾಗೂ ಬಂಟ್ಸ್ ವೆಲ್ಫೆàರ್ ಟ್ರಸ್ಟ್‌ಗಳ ಸಹಭಾಗಿತ್ವದಲ್ಲಿ ನಡೆದ ಸೋಶಿಯಲ್ ವೆಲ್ಫೆರ್ ಪ್ರೋಗ್ರಾಂ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ತಮಗೆ ನೀಡಿದ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಬಂಟ್ಸ್ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಮಾತನಾಡಿ, ಸಮಾಜದ ಉನ್ನತಿಗೆ ನಮ್ಮ ಪ್ರಯತ್ನ ನಿರಂತರವಾಗಿರಬೇಕು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ವಿಧಾನಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ ಮಾತನಾಡಿ, ನಾವು ಸಮಾಜದ ಋಣ ತೀರಿಸಬೇಕು. ವಿದ್ಯಾರ್ಥಿವೇತನ ಪಡೆದುಕೊಂಡವರು ಮುಂದೆ ತಾವೂ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆಯಬಾರದು ಎಂದರು.
ವಿದ್ಯಾರ್ಥಿವೇತನ, ವಿಧವಾ ವೇತನ, ವಿಶೇಷ ಚೇತನರಿಗೆ ನೆರವಿನ ರೂಪದಲ್ಲಿ 15 ಲಕ್ಷ ರೂ. ವಿತರಿಸಲಾಯಿತು.
ಬಂಟಾಶ್ರಯ ಯೋಜನೆಗಾಗಿ ಇರಂದಾಡಿಯಲ್ಲಿ 6.83 ಎಕ್ರೆ ಸ್ಥಳವನ್ನಿತ್ತ ಮಾಜಿ ಯೋಧ ಮಾರ್ಕ್ಸ್ ಡಿ’ಸೋಜಾ ಅವರಿಗೆ, ಖರೀದಿಯ 1.70 ಕೋಟಿ ರೂ. ಮೊತ್ತವನ್ನು ಭರಿಸಲಿರುವ ಮುಂಬಯಿ ಬಂಟರ ಸಂಘದ ಅಧ್ಯಕ್ಷ, ಎಲ್ಲೂರು ಮಲ್ಲೆಟ್ಟು ಪರಾರಿ ಪ್ರವೀಣ್ ಭೋಜ ಶೆಟ್ಟಿ ಅವರ ಪರವಾಗಿ ಹಸ್ತಾಂತರಿಸಲಾಯಿತು.
ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಹಾಗೂ ಅಂತಾರಾಜ್ಯ ಬಂಟ ಕ್ರೀಡೋತ್ಸವದ ಕರಪತ್ರಗಳನ್ನು ಬಿಡುಗಡೆ, ಇಬ್ಬರಿಗೆ ಪ್ರಥಮ ಠೇವಣಿ ಪತ್ರ ವಿತರಣೆ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆಯಿತು.
ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿದ್ದರು. ಮುಂಬಯಿಯ ಹೊಟೇಲ್ ಉದ್ಯಮಿ ಕರುಣಾಕರ ಅರ್. ಶೆಟ್ಟಿ, ಪಿಂಪ್ರಿ ಚಿಂಚ್‌ವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ಎರ್ಮಾಳು ಪುಚ್ಚೊಟ್ಟು ಸೀತಾರಾಮ ಶೆಟ್ಟಿ, ಬಂಟ್ಸ್ ವೆಲ್ಫೆàರ್ ಟ್ರಸ್ಟ್‌ನ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ, ಸಂಘದ ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಬಂಟರ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು ಉಪಸ್ಥಿತರಿದ್ದರು.
ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಜಯ ಶೆಟ್ಟಿ ಪದ್ರ ಹಾಗೂ ಡಾ| ಮನೋಜ್ ಕುಮಾರ್ ಶೆಟ್ಟಿ ನಿರ್ವಹಿಸಿದರು. ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.