Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ
385 ಕೋಟಿ ವರ್ಷ ಹಳೆ ಕುಳಿಯಲ್ಲಿ ಅಧ್ಯಯನ
Team Udayavani, Sep 30, 2024, 6:50 AM IST
ಹೊಸದಿಲ್ಲಿ: ಚಂದ್ರನ ಅತ್ಯಂತ ಪ್ರಾಚೀನ ಭಾಗ ಎಂದು ಕರೆಸಿಕೊಳ್ಳುವ ಪ್ರದೇಶ ದಲ್ಲಿ ಭಾರತದ ಚಂದ್ರಯಾನ-3ರ ರೋವರ್ ಪ್ರಜ್ಞಾನ್ ಇಳಿದಿದೆ ಎಂದು ವಿಜ್ಞಾನಿಗಳು ರವಿವಾರ ಹೇಳಿದ್ದಾರೆ.
ಸುಮಾರು 385 ಕೋಟಿ ವರ್ಷಗಳ ಹಿಂದೆ ಚಂದ್ರನ ಮೇಲೆ ನಿರ್ಮಾಣವಾದ ಕುಳಿಯಲ್ಲಿ “ಪ್ರಜ್ಞಾನ್’ ಇಳಿದಿದ್ದು, ಇದು ಚಂದ್ರನ ಉಗಮದ ಬಗ್ಗೆ ಮಹತ್ವಪೂರ್ಣ ಮಾಹಿತಿಯನ್ನು ಜಗತ್ತಿಗೆ ದೊರಕಿಸಿಕೊಡಲಿದೆ ಎಂದು ಅವರು ಹೇಳಿದ್ದಾರೆ.
ಸುಮಾರು 300 ಕಿ.ಮೀ. ವ್ಯಾಸ ಹೊಂದಿ ರುವ ಆಕಾಶಕಾಯವೊಂದು ಚಂದ್ರನಿಗೆ ಅಪ್ಪಳಿಸಿದ ಸಮಯದಲ್ಲಿ ಈ ಕುಳಿ ನಿರ್ಮಾಣವಾಗಿದೆ. ಈ ಕುಳಿಯಲ್ಲಿನ ಅರ್ಧಭಾಗ ಚಂದ್ರನ ಒಳಭಾಗದಿಂದ ಚಿಮ್ಮಿದ ವಸ್ತುಗಳೇ ತುಂಬಿವೆ. ಹೀಗಾಗಿ ಚಂದ್ರನ ಮೂಲ ರಚನೆಯ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಇಸ್ರೋದ ಅಹ್ಮದಾಬಾದ್ ಸಂಶೋಧನ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.
ಪ್ರಜ್ಞಾನ್ ಮಾತ್ರ ಇಲ್ಲಿ ಲ್ಯಾಂಡ್: ಭಾರತ ಕೈಗೊಂಡ ಚಂದ್ರಯಾನ-3 ಯೋಜನೆಯ ರೋವರ್ ಪ್ರಜ್ಞಾನ್ ಮಾತ್ರ ಈ ಪ್ರದೇಶದಲ್ಲಿ ಇಳಿದಿದೆ. ಬೇರಾವ ದೇಶಗಳ ಲ್ಯಾಂಡರ್‌ಗಳು ಈ ಪ್ರದೇಶದಲ್ಲಿ ಇಳಿದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.