Health; ಜೀವರಕ್ಷಕ ವ್ಯವಸ್ಥೆ ತೆಗೆಯಲು ಕುಟುಂಬದ ಒಪ್ಪಿಗೆ ಕಡ್ಡಾಯ
ವೈದ್ಯರು, ಕುಟುಂಬಸ್ಥರ ಅನುಮತಿ ಕಡ್ಡಾಯ
Team Udayavani, Sep 30, 2024, 6:30 AM IST
ಹೊಸದಿಲ್ಲಿ: ಸಾವು ಖಚಿತವಾದ ಕಾಯಿ ಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆಯಲು ಅನುಮತಿ ನೀಡುವ ಕಾನೂನಿಗೆ ಕರ ಡನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ಅವರ ಕುಟುಂಬ ಸ್ಥರ ಅನುಮತಿ ಕಡ್ಡಾಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ತೀವ್ರ ನಿಗಾ ಘಟಕದಲ್ಲಿರುವ ಬಹಳಷ್ಟು ರೋಗಿಗಳು ಸಾವು ಖಚಿತವಾದ ಕಾಯಿ ಲೆ ಗಳಿಂದ ಬಳಲುತ್ತಿದ್ದಾರೆ. ಇವರಿಗೆ ಜೀವ ರಕ್ಷಕ ವ್ಯವಸ್ಥೆಯ ಮೂಲಕ ಯಾವುದೇ ಉಪಯೋಗಗಳು ಆಗುವು ದಿಲ್ಲ. ಇಂತಹ ಸಮಯದಲ್ಲಿ ಜೀವರಕ್ಷಕ ವ್ಯವಸ್ಥೆ ಅವರಿಗೆ ಹೊರೆಯಾಗಿ ಪರಿಣಮಿ ಸಲಿದೆ. ಅಲ್ಲದೆ ಅವರ ಕುಟುಂಬಕ್ಕೆ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚಿನ ಸಮಸ್ಯೆ ಉಂಟುಮಾಡಲಿದೆ ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ.
ವಾಸಿಯಾಗದ ಕಾಯಿಲೆ, ಮೆದುಳು ನಿಷ್ಕ್ರಿಯ ವಾದಂತಹ ರೋಗಿಗಳಿಗೆ ಜೀವ ರಕ್ಷಕ ವ್ಯವಸ್ಥೆ ತೆಗೆಯಲು ಈ ಕಾನೂನು ಅನುಮತಿ ನೀಡುತ್ತದೆ. ಇದನ್ನು ವೈದ್ಯರು ದೃಡಪಡಿಸಬೇಕಿದೆ ಎಂದು ಹೇಳಲಾ ಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಗಳನ್ನು ಸಲ್ಲಿಕೆ ಮಾಡಲು ಅ.20 ಕೊನೆ ದಿನವಾಗಿದ್ದು, ಬಳಿಕ ಸಚಿವಾಲಯದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ
Navy Day; ನೌಕಾಪಡೆಯ ಬದ್ಧತೆಯಿಂದ ದೇಶದ ಸುರಕ್ಷತೆ, ಸಮೃದ್ಧಿ ಖಾತ್ರಿ: ಪ್ರಧಾನಿ ಮೋದಿ
Kerala; ಅಯ್ಯಪ್ಪ ಭಕ್ತರ ಬಸ್ ಅಪಘಾ*ತ: ಓರ್ವ ಮೃ*ತ್ಯು, 19 ಮಂದಿಗೆ ಗಾಯ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.