Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Team Udayavani, Sep 30, 2024, 3:30 PM IST

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Case) ಜೈಲಿನಲ್ಲಿರುವ ನಟ ದರ್ಶನ್‌(Actor Darshan) ಅವರ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ(ಸೆ.30ರಂದು) ನಡೆದಿದೆ.

ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿ 100 ದಿನ ಕಳೆದಿದೆ. ಮೊದಲು ಪರಪ್ಪನ ಅಗ್ರಹಾರ ಆ ಬಳಿಕ ಈಗ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.

57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ. ದರ್ಶನ್‌ ಪರ ವಕೀಲರಾದ ಸುನೀಲ್ ವಾದ ಮಂಡನೆಗೆ ಇನ್ನಷ್ಟು ಕಾಲಾವಕಾಶಬೇಕೆಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.

ಇದನ್ನೂ ಓದಿ: Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

ಅದರಂತೆ 57ನೇ ಸಿಟಿ ಸಿವಿಲ್ ಕೋರ್ಟ್‌ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿದೆ.

ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ದರ್ಶನ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ದರ್ಶನ್‌ ಅವರಿಗೆ ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿ ಅನೇಕರಿದ್ದರು. ಆದರೆ ಅವರಿಗೆಲ್ಲ ಮತ್ತೆ ನಿರಾಸೆಯಾಗಿದೆ. ಪವಿತ್ರಾ ಗೌಡ , ರವಿಶಂಕರ್‌  ಜಾಮೀನು ಅರ್ಜಿ ವಿಚಾರಣೆ  ಅ.4ಕ್ಕೆ ಮುಂದೂಡಿಕೆಯಾಗಿದೆ.

ಇದೇ ತಿಂಗಳ 21ರಂದು ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ತಕರಾರು ಸಲ್ಲಿಸಲು ಎಸ್​ಪಿಪಿ ಅವರು ತಡ ಮಾಡಿದ್ದ ಕಾರಣ ಎರಡು ಬಾರಿ ವಿಚಾರಣೆ ಮುಂದೂಡಿ ಸೆಪ್ಟೆಂಬರ್ 27ಕ್ಕೆ ವಿಚಾರಣೆ ನಿಗದಿಯಾಗಿತ್ತು. ಇದೀಗ ಮತ್ತೊಮ್ಮೆ ವಾದಮಂಡನೆಗೆ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.

ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ15 ಆರೋಪಿ ಕಾರ್ತಿಕ್‌, ಎ17 ಆರೋಪಿ ನಿಖಿಲ್‌ಗೆ 57ನೇ ಸಿಸಿಎಚ್‌ ಕೋರ್ಟ್‌ ಜಾಮೀನು ನೀಡಿದ್ದು, ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.‌

ಟಾಪ್ ನ್ಯೂಸ್

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Bantwala1

Bantwala: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಮೂವರಿಗೆ ಗಾಯ

siddanna-2

MUDA ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇಡಿ

1-tt

1984 Anti Sikh Roits; ದೆಹಲಿ ಹೈಕೋರ್ಟ್ ಮೊರೆ ಹೋದ ಜಗದೀಶ್ ಟೈಟ್ಲರ್

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

siddanna-2

MUDA ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇಡಿ

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Bangaluru: ಜಿಗಣಿಯಲ್ಲಿ ನೆಲೆಸಿದ್ದ ಪಾಕ್‌ ಕುಟುಂಬ ಸದಸ್ಯರ ಬಂಧನ, ಮಕ್ಕಳೊಂದಿಗೆ ವಾಸ!

Bangaluru: ಜಿಗಣಿಯಲ್ಲಿ ನೆಲೆಸಿದ್ದ ಪಾಕ್‌ ಕುಟುಂಬ ಸದಸ್ಯರ ಬಂಧನ, ಮಕ್ಕಳೊಂದಿಗೆ ವಾಸ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Brahmavar

Mangaluru: ಅಪರಿಚಿತ ವ್ಯಕ್ತಿ ಸಾವು

man-a

Kundapura: ಬೈಕ್‌-ಬುಲೆಟ್‌ ಢಿಕ್ಕಿ: ಮತ್ತೋರ್ವ ಸಾವು

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

ban

Bailhongal: ಕ್ಷುಲ್ಲಕ ಕಾರಣ; ಕೊಲೆಯಲ್ಲಿ ಅಂತ್ಯ; ಪ್ರಕರಣ ದಾಖಲು

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.