Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ
Team Udayavani, Sep 30, 2024, 6:17 PM IST
![Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ](https://www.udayavani.com/wp-content/uploads/2024/09/koneri-620x351.jpg)
![Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ](https://www.udayavani.com/wp-content/uploads/2024/09/koneri-620x351.jpg)
ಗದಗ: ಜನ್ಮದಿನದ ಸಂಭ್ರಮದಲ್ಲಿರಬೇಕಿದ್ದ ಒಂಬತ್ತು ವರ್ಷದ ಬಾಲಕ ಸೋಮವಾರ (ಸೆ.30) ಶವವಾಗಿ ಪತ್ತೆಯಾಗಿದ್ದಾನೆ.
ನಗರದ ಕೊನೇರಿ ಹೊಂಡದಲ್ಲಿ ರವಿವಾರ ಕಾಲು ಜಾರಿ ಬಿದ್ದು ಕಣ್ಮರೆಯಾಗಿದ್ದ ಬಾಲಕ ಪ್ರಥಮ್ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಹೊರತೆಗೆದರು.
ಗಂಗಾಪುರ ಪೇಟೆಯ ನಿವಾಸಿಯಾದ ಪ್ರಥಮ್ ಅಶೋಕ ಮಾಡೋಳ್ಳಿ ರವಿವಾರ ಮಧ್ಯಾಹ್ನ ಕೊನೇರಿ ಹೊಂಡದ ಮೆಟ್ಟಿಲುಗಳ ಮೇಲೆ ಸ್ನೇಹಿತರ ಜತೆಗೆ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದ. ಇನ್ನಿಬ್ಬರು ಬಾಲಕರು ಕಿರುಚುತ್ತ ಹೊರ ಬಂದು ಜನರಿಗೆ ವಿಷಯ ತಿಳಿಸಿದ್ದರು.
ತಕ್ಷಣವೇ ಯುವಕರ ತಂಡ ಹೊಂಡಕ್ಕೆ ಜಿಗಿದು ಬಾಲಕನ ರಕ್ಷಣೆಗೆ ಪ್ರಯತ್ನಿಸಿತು. ಇವರ ಜತೆಗೆ ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಜತೆಯಾದರು. ಆದರೆ, ಈ ಹೊಂಡದಲ್ಲಿ ಗಣಪತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಸರ್ಜನೆ ಮಾಡಿದ್ದರಿಂದ ಕೆಸರು ತುಂಬಿತ್ತು. ಜತೆಗೆ ರವಿವಾರ ಸಂಜೆ ವೇಳೆಗೆ ಮಳೆ ಆರಂಭಗೊಂಡಿದ್ದರಿಂದ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಸೋಮವಾರ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಮೃತದೇಹವನ್ನು ಪತ್ತೆಹಚ್ಚಿದರು.
ತಂದೆ-ತಾಯಿ ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಬಾಲಕ ಅಕಾಲಿಕವಾಗಿ ಸಾವನ್ನಪ್ಪಿದ್ದು ಕಂಡು ಸ್ಥಳೀಯರು ಮರುಗಿದರು. ಪ್ರಥಮ್ ಸೆ.30ರಂದು ಜನಿಸಿದ್ದು, ಆತನ ಜನ್ಮದಿನ ಆಚರಿಸಲು ಅಜ್ಜಿ ಎರಡು ದಿನ ಹಿಂದಿನಿಂದಿಲೇ ಸಂಭ್ರಮದ ಸಿದ್ಧತೆ ಆರಂಭಿಸಿದ್ದರು. ಆದರೆ, ಜನ್ಮದಿನದಂದೇ ಶವವಾಗಿ ಪತ್ತೆಯಾದ ಮೊಮ್ಮಗನನ್ನು ಕಂಡು ಅಜ್ಜಿ ಎದೆಬಡಿದುಕೊಂಡು ಅಳುತ್ತಿದ್ದ ದೃಶ್ಯ ನೋಡಿ ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು](https://www.udayavani.com/wp-content/uploads/2025/02/gadaga-1-150x99.jpg)
![ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು](https://www.udayavani.com/wp-content/uploads/2025/02/gadaga-1-150x99.jpg)
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
![gadag-police](https://www.udayavani.com/wp-content/uploads/2025/02/gadag-police-150x90.jpg)
![gadag-police](https://www.udayavani.com/wp-content/uploads/2025/02/gadag-police-150x90.jpg)
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
![Gove-Patil](https://www.udayavani.com/wp-content/uploads/2025/02/Gove-Patil-150x90.jpg)
![Gove-Patil](https://www.udayavani.com/wp-content/uploads/2025/02/Gove-Patil-150x90.jpg)
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
![Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ](https://www.udayavani.com/wp-content/uploads/2025/02/gadag-150x100.jpg)
![Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ](https://www.udayavani.com/wp-content/uploads/2025/02/gadag-150x100.jpg)
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
![18-gadaga](https://www.udayavani.com/wp-content/uploads/2025/02/18-gadaga-150x90.jpg)
![18-gadaga](https://www.udayavani.com/wp-content/uploads/2025/02/18-gadaga-150x90.jpg)
ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ! ನಸುಕಿನ ವೇಳೆ ಡಿಸಿ ಹಾಗೂ ಎಸಿ ದಿಢೀರ್ ದಾಳಿ!