Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ
Team Udayavani, Oct 1, 2024, 12:33 AM IST
ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ದ.ಕ. ಜಿಲ್ಲಾ ಘಟಕದ ವತಿಯಿಂದ ನಗರದ ಮಿನಿ ವಿಧಾನ ಸೌಧದ ಬಳಿಕ ಸೋಮವಾರ ಪ್ರತಿಭಟನೆ ನಡೆಯಿತು.
ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ವಿವಿಧ ಮೊಬೈಲ್, ವೆಬ್ ತಂತ್ರಾಂಶ ಗಳ ಮೂಲಕ ಕರ್ತವ್ಯ ನಿರ್ವಹಿಸು ತ್ತಿರುವುದರಿಂದ ಹಾಗೂ ಸಿ ವೃಂದದ ನೌಕರರ 10 ಪಟ್ಟು ಹೆಚ್ಚು ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವಂತೆ ಆಗ್ರಹಿಸಿದರು.
ಕೆಲಸದ ಅವಧಿಯ ಬಳಿಕ ನಡೆಸುವ ಎಲ್ಲ ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು. ಪ್ರಯಾಣ ಭತ್ತೆಯನ್ನು 500 ರೂ.ಗಳಿಂದ 3 ಸಾವಿರ ರೂ.ಗಳಿಗೆ ಏರಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಜಾಬ್ ಚಾರ್ಟ್ ನಿಗದಿಪಡಿಸಬೇಕು. ಕಂದಾಯ ಇಲಾಖೆಯ ಮೂರು ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸಬೇಕು. ಜತೆಗೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಟೇಬಲ್, ಕುರ್ಚಿ, ಆಲ್ಮೇರಾ, ಪ್ರಿಂಟರ್-ಸ್ಕ್ಯಾನರ್ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ಕೆ., ಪ್ರಧಾನ ಕಾರ್ಯದರ್ಶಿ ಅನಿಲ್ ಕೆ.ಪೂಜಾರಿ, ಪ್ರದೀಪ್ ಕುಮಾರ್ ಕೆ., ಗೌರವಾಧ್ಯಕ್ಷ ಉಮೇಶ್ ಕಾವಡಿ, ಪ್ರಮುಖರಾದ ಪ್ರದೀಪ್ ಶೆಣೈ, ಶೇಷಾದ್ರಿ, ಅವಿನಾಶ್ ಬಿಲ್ಲವ, ಧರ್ಮ ಸಾಮ್ರಾಜ್ಯ, ಸುಜಾತಾ, ತಿಪ್ಪೇಶ್, ಚಂದ್ರ ಕುಮಾರ್ ಕೆ.ಎನ್., ಆಶ್ರಿತಾ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂಗೆ ರಾಜೀನಾಮೆಯ ಅನಿವಾರ್ಯತೆ ಸೃಷ್ಟಿಯಾಗಿದೆ: ಬಿ.ವೈ.ವಿಜಯೇಂದ್ರ
IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್
MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್ ಖರ್ಬೀಕರ್ ನೇಮಕ
Yeah, Yes; ಕೋರ್ಟ್ನಲ್ಲಿ ಯಾ.. ಅನ್ನಬೇಡಿ, ಎಸ್ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್!
BJP Leader: ಯತ್ನಾಳ್ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.