Mangaluru: ಅ.3ರಿಂದ ಮಂಗಳೂರು ದಸರಾ: ಪೂಜಾರಿ

Team Udayavani, Oct 1, 2024, 6:36 AM IST

Mangaluru: ಅ.3ರಿಂದ ಮಂಗಳೂರು ದಸರಾ: ಪೂಜಾರಿ

ಮಂಗಳೂರು: “ಮಂಗಳೂರು ದಸರಾ’ ಎಂದೇ ಜನಜನಿತವಾಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ ಅ.3ರಿಂದ ಅ. 14ರ ವರೆಗೆ ವಿಜೃಂಭಣೆಯಿಂದ ನೆರವೇರಲಿದೆ ಎಂದು ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.

ಕುದ್ರೋಳಿ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಮಾತನಾಡಿ, ದಸರಾ ಮಹೋತ್ಸವವನ್ನು ಜನಾರ್ದನ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ. ಅ.3ರಂದು ಬೆಳಗ್ಗೆ 8.30ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ಮೂಲಕ ದಸರಾ ಉದ್ಘಾಟನೆ ನಡೆಯಲಿದೆ. ದಸರಾ ಸಂದರ್ಭ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ದಸರಾ ಪ್ರಯುಕ್ತ ಕಳೆದ ವರ್ಷ ವಾಕಥಾನ್‌ ನಡೆಸಲಾಗಿದ್ದು, ಈ ಬಾರಿ ಅ. 6ರಂದು ಬೆಳಗ್ಗೆ 5.30ಕ್ಕೆ ಕ್ಷೇತ್ರದಿಂದ 21 ಕಿ.ಮೀ.ಗಳ ಹಾಫ್ ಮ್ಯಾರಥಾನ್‌ ಆಯೋಜಿಸಲಾಗಿದೆ. ಇದರಲ್ಲಿ ದೇಶದ ವಿವಿಧ ಭಾಗಗಳಿಂದ 2,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪದ್ಮರಾಜ್‌ ವಿವರಿಸಿದರು.

ದೇವಳ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್‌ ಮಾತನಾಡಿ, ಮಂಗಳೂರು ದಸರಾ ಮಹೋತ್ಸವ ಹಾದು ಹೋಗುವ ರಸ್ತೆ ಸಹಿತ ನಗರದ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಮಹೋತ್ಸವಕ್ಕೆ ಮತ್ತಷ್ಟು ವೈಭವ ನೀಡುವಂತೆ ಕೋರಿದರು.

ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್‌ ಮಿಜಾರು, ಎಂ. ಶೇಖರ್‌ ಪೂಜಾರಿ, ಜಗದೀಪ್‌ ಡಿ.ಸುವರ್ಣ, ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಉಪಾಧ್ಯಕ್ಷೆ ಡಾ| ಅನಸೂಯಾ ಬಿ.ಟಿ.ಸಾಲ್ಯಾನ್‌, ಉಪಾಧ್ಯಕ್ಷ ಡಾ| ಬಿ.ಜಿ. ಸುವರ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ಕಿಶೋರ್‌ ದಂಡೆಕೇರಿ, ವಾಸುದೇವ ಕೋಟ್ಯಾನ್‌, ಎಚ್‌.ಎಸ್‌. ಜೈರಾಜ್‌, ಲತೀಶ್‌ ಎಂ.ಸುವರ್ಣ, ರಾಧಾಕೃಷ್ಣ, ಲೀಲಾಕ್ಷ ಕರ್ಕೇರ, ಚಂದನ್‌ದಾಸ್‌, ಗೌರವಿ ರಾಜಶೇಖರ್‌, ಕೃತಿನ್‌ ಧೀರಜ್‌ ಅಮೀನ್‌ ಉಪಸ್ಥಿತರಿದ್ದರು.

ಅ.13: ಶೋಭಾಯಾತ್ರೆ
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ಮಾತನಾಡಿ, ವೈಭವದ ದಸರಾ ಸಂಭ್ರಮಕ್ಕೆ ಸರ್ವ ಸಿದ್ಧತೆ ನಡೆಸಲಾಗಿದೆ. ಅ.13ರಂದು ಸಂಜೆ 4ಕ್ಕೆ ಕುದ್ರೋಳಿ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್‌ ಶೋಭಾಯಾತ್ರೆ ಆರಂಭವಾಗಲಿದೆ. ಕೇರಳದ ಚೆಂಡೆ ವಾದ್ಯ ಸಹಿತ ರಾಜ್ಯದ ವಿವಿಧ ಕಡೆಯಿಂದ ಆಗಮಿಸುವ ಜಾನಪದ, ಸಾಂಸ್ಕೃತಿಕ ಹಿನ್ನೆಲೆಯ ನೃತ್ಯ ತಂಡಗಳು, ವಿವಿಧ ಜಿಲ್ಲೆ, ರಾಜ್ಯಗಳ ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಶೋಭಾಯತ್ರೆಗೆ ಮೆರುಗು ನೀಡಲಿವೆ ಎಂದರು.

ಟಾಪ್ ನ್ಯೂಸ್

3

GOAT OTT Release: ದಳಪತಿ ವಿಜಯ್‌ ʼಗೂಟ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಇಬ್ಬರು ಮಹಿಳೆಯರ ಬಂಧನ

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಮಹಿಳೆಯರಿಬ್ಬರ ಬಂಧನ

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ

ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ

Kolkata Case: ಕರ್ತವ್ಯ ಬಹಿಷ್ಕರಿಸಿ ಮತ್ತೆ ಮುಷ್ಕರ ಆರಂಭಿಸಿದ ಕಿರಿಯ ವೈದ್ಯರು

Kolkata Case: ಕರ್ತವ್ಯ ಬಹಿಷ್ಕರಿಸಿ ಮತ್ತೆ ಮುಷ್ಕರ ಆರಂಭಿಸಿದ ಕಿರಿಯ ವೈದ್ಯರು

ಸುರತ್ಕಲ್‌ನಲ್ಲಿ ಪವಿತ್ರಾ ಗೌಡ ಹೋಲುವ ಕೇಸ್: ಯುವತಿಗೆ ಅಶ್ಲೀಲ ಫೋಟೋ- ಸಂದೇಶ ಕಳಿಸಿ ಕಿರುಕುಳ

ಸುರತ್ಕಲ್‌ನಲ್ಲಿ ಪವಿತ್ರಾ ಗೌಡ ಹೋಲುವ ಕೇಸ್: ಯುವತಿಗೆ ಅಶ್ಲೀಲ ಫೋಟೋ- ಸಂದೇಶ ಕಳಿಸಿ ಕಿರುಕುಳ

Lacknow: 1.5 ಲಕ್ಷ ರೂ. ಮೌಲ್ಯದ iPhone ಡೆಲಿವರಿ ಮಾಡಲು ಹೋದ ಯುವಕನ ಹ*ತ್ಯೆ!

Lucknow: 1.5 ಲಕ್ಷ ರೂ. ಮೌಲ್ಯದ iPhone ಡೆಲಿವರಿ ಮಾಡಲು ಹೋದ ಯುವಕನ ಹ*ತ್ಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

malpe

Bajpe: ನೀರುಪಾಲಾಗಿದ್ದ ಒಬ್ಬನ ಶವ ಪತ್ತೆ

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3

GOAT OTT Release: ದಳಪತಿ ವಿಜಯ್‌ ʼಗೂಟ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಇಬ್ಬರು ಮಹಿಳೆಯರ ಬಂಧನ

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಮಹಿಳೆಯರಿಬ್ಬರ ಬಂಧನ

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ

ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು… ತಪ್ಪಿದ ಅನಾಹುತ

1(1)

Bantwal: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.