Covid; ಭೂಮಿಯಲ್ಲಿ ಲಾಕ್‌ಡೌನ್,ಚಂದ್ರನಲ್ಲಿ ಕೂಲ್ ಕೂಲ್!
Team Udayavani, Oct 1, 2024, 6:45 AM IST
ಹೊಸದಿಲ್ಲಿ: 2020ರ ಕೋವಿಡ್-19 ಲಾಕ್‌ಡೌನ್ ಕೇವಲ ಮನುಕುಲದ ಮೇಲೆ ಮಾತ್ರವಲ್ಲ, ದೂರದ ಚಂದಿರನ ಮೇಲೂ ಪರಿಣಾಮ ಬೀರಿತ್ತು ಎಂದರೆ ನಂಬುತ್ತೀರಾ? ನಂಬಲೇಬೇಕು. 2020ರ ಎಪ್ರಿಲ್-ಮೇ ಅವಧಿಯಲ್ಲಿ ರಾತ್ರಿ ಹೊತ್ತು ಚಂದ್ರನ ಮೇಲ್ಮೆ„ ತಾಪಮಾನ ಗಣನೀಯವಾಗಿ ಇಳಿಕೆಯಾಗಿತ್ತು ಎಂಬ ವಿಚಾರವನ್ನು ಭಾರತೀಯ ಸಂಶೋಧಕರು ಕಂಡುಕೊಂಡಿದ್ದಾರೆ.
2017ರಿಂದ 2023ರ ಅವಧಿಯಲ್ಲಿ ಸಂಶೋಧಕರ ತಂಡವು ಚಂದ್ರನ 6 ವಿಭಿನ್ನ ಪ್ರದೇಶಗಳ ರಾತ್ರಿ ಹೊತ್ತಿನ ತಾಪಮಾನವನ್ನು ವಿಶ್ಲೇಷಿಸಿತ್ತು. ಆಗ ಲಾಕ್‌ಡೌನ್ ಅವಧಿಯಲ್ಲಿ(ಇತರ ವರ್ಷಗಳ ಇದೇ ಅವಧಿಗೆ ಹೋಲಿಸಿದಾಗ) ಚಂದ್ರನ ತಾಪಮಾನದಲ್ಲಿ 8-10 ಕೆಲ್ವಿನ್(ಮೈನಸ್ 265 ಡಿ.ಸೆ.ನಿಂದ ಮೈನಸ್ 173ಡಿ.ಸೆ.ನಷ್ಟು) ಇಳಿಕೆ ಕಂಡುಬಂತು ಎಂದು ಲ್ಯಾಬೊರೇಟರಿಯ ನಿರ್ದೇಶಕ ಪ್ರೊ| ಅನಿಲ್ ಭಾರದ್ವಾಜ್ ತಿಳಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಜಗತ್ತಿನಾದ್ಯಂತ ಮಾನವ ಚಟುವಟಿಕೆಗಳು ಇಳಿಕೆಯಾಗಿತ್ತು. ಪರಿಣಾಮವೆಂಬಂತೆ ಹಸುರುಮನೆ ಅನಿಲದ ಹೊರಸೂಸು ವಿಕೆ ತಗ್ಗಿತ್ತು. ಭೂಮಿಯಿಂದ ಹೊರಸೂಸುವ ವಿಕಿರಣಗಳ ಪ್ರಮಾಣ ತಗ್ಗಿದ್ದೇ ಇದಕ್ಕೆ ಕಾರಣವಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.