ಕೆರೂರ: “ಏಕೀಕರಣ ಹೋರಾಟಕ್ಕೆ ಬಲ ತಂದುಕೊಟ್ಟ ಧೀಮಂತ ಸಾಹಿತಿ ಅನಕೃ’
ಕನ್ನಡವನ್ನು ಕನ್ನಡಕವನ್ನಾಗಿ ಮಾಡಿಕೊಳ್ಳುವ ಬದಲು ಕಣ್ಣಾಗಿ ಕಾಪಾಡಿಕೊಳ್ಳಬೇಕು
Team Udayavani, Oct 1, 2024, 2:29 PM IST
■ ಉದಯವಾಣಿ ಸಮಾಚಾರ
ಕೆರೂರ: ಕನ್ನಡ ಕಾದಂಬರಿ ಸಾಹಿತ್ಯದ ಸಾರ್ವಭೌಮ ಏಕೀಕರಣ ಹೋರಾಟದ ಜಾಗೃತಿಯನ್ನು ಮೊಟ್ಟ ಮೊದಲು
ಕಾದಂಬರಿಯಲ್ಲಿ ಬರೆದ ಕೀರ್ತಿ ಅ.ನ. ಕೃಷ್ಣರಾಯರಿಗೆ ಸಲ್ಲುತ್ತದೆ. ಕಾದಂಬರಿಯಲ್ಲಿ ಏಕೀಕರಣ ಜಾಗೃತಿಯನ್ನು ಮೂಡಿಸುವ ಮೂಲಕ ಏಕೀಕರಣ ಹೋರಾಟಕ್ಕೆ ಬಲ ತಂದು ಕೊಟ್ಟ ಧೀಮಂತ ಸಾಹಿತಿ ಎಂದು ಪ್ರಾಚಾರ್ಯ ಡಾ| ವೈ.ಎಂ. ಯಾಕೊಳ್ಳಿ ಹೇಳಿದರು.
ಪಟ್ಟಣದ ಎಂ.ಎಚ್. ಮೆಣಸಗಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-24 ಕಾರ್ಯಕ್ರಮದಲ್ಲಿ ಅ.ನ. ಕೃಷ್ಣರಾಯರ ಬದುಕು ಮತ್ತು ಹೋರಾಟದ ಕುರಿತು ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಅ.ನ. ಕೃಷ್ಣರಾಯರು ಬೃಹತ್ ಹೋರಾಟ ಮಾಡಿದ್ದನ್ನು ಸ್ಮರಿಸಿದರು. ಬಹುತೇಕ ಕನ್ನಡ ವಾಹಿನಿಯ ನಿರೂಪಕರು ಕನ್ನಡದ ಬದಲಾಗಿ ಹೆಚ್ಚಾಗಿ ಇಂಗ್ಲಿಷ್ ಪದ ಬಳಸುವ
ಮೂಲಕ ನಮ್ಮವರೆ ಕನ್ನಡ ಕಡೆಗಣಿಸುತ್ತಿರುವುದು ವಿಷಾದನೀಯ. ಕನ್ನಡವನ್ನು ಕನ್ನಡಕವನ್ನಾಗಿ ಮಾಡಿಕೊಳ್ಳುವ
ಬದಲು ಕಣ್ಣಾಗಿ ಕಾಪಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀ ಮಾತನಾಡಿ, ಅ.ನ. ಕೃಷ್ಣರಾಯರು ಕಾದಂಬರಿ ಸಾಹಿತ್ಯದ ಮೂಲಕ ಕನ್ನಡವನ್ನು ಜಾಗೃತಿಗೊಳಿಸಿದ ಏಕೈಕ ಸಾಹಿತಿ. ಸ್ವಾತಂತ್ರ್ಯ ಹಾಗೂ ಏಕೀಕರಣ ಚಳುವಳಿಯಲ್ಲಿ ಅದ್ವಿತೀಯ ಪಾತ್ರ ವಹಿಸಿದ್ದಾರೆ. ಕನ್ನಡವನ್ನು ಕನ್ನಡಿಗರೆ ಕಗ್ಗೊಲೆ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು.
ಪ್ರಾಚಾರ್ಯ ಎಸ್.ಎನ್. ನೀಲಪ್ಪನವರ, ಪ್ರೊ| ಆರ್.ಬಿ. ಚಿನಿವಾಲರ, ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಸ್. ನಾಗನೂರ, ರೂಪಾ ಪಾಟೀಲ ಎಸ್.ಬಿ. ಮೇಟಿ, ಬಿ.ವೈ. ವಾಲಿಕರ, ಪ್ರಮುಖರು ಉಪಸ್ಥಿತರಿದ್ದರು. ಸಂಜನಾ ಕೆಂದೂಳಿ ಸುಕನ್ಯಾ ಮೇಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.