ಹೊಳೆಯುವ, ಆರೋಗ್ಯಕರ ತ್ವಚೆಗೆ 10 ಅತ್ಯುತ್ತಮ ನೈಸರ್ಗಿಕ ಪಾನೀಯಗಳು


ಕಾವ್ಯಶ್ರೀ, Oct 1, 2024, 6:07 PM IST

web

ನೈಸರ್ಗಿಕ ಪಾನೀಯಗಳು ನಮ್ಮ ಚರ್ಮವನ್ನು ಒಳಗಿನಿಂದ ಪೋಷಿಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಈ ಕೆಲ ಪಾನೀಯಗಳನ್ನು ನಮ್ಮ ದೈನಂದಿನ ದಿನಚರಿಯಲ್ಲಿ ಸೇವಿಸುವುದರಿಂದ ನಮ್ಮ ಚರ್ಮದ ನೈಸರ್ಗಿಕ ಹೊಳಪನ್ನು ಹೆಚ್ಚಿಸಲು, ದೇಹದಲ್ಲಿ ಹೈಡ್ರೇಶನ್ ಹೆಚ್ಚಿಸಲು ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ದಾಳಿಂಬೆ ಜ್ಯೂಸ್

ದಾಳಿಂಬೆ ಹಣ್ಣಿನಲ್ಲಿ ಪಾಲಿಫಿನಾಲ್‌ಗಳಂತಹ ರೋಗ ನಿರೋಧಕ ಅಂಶ ಒಳಗೊಂಡಿರುತ್ತದೆ. ಇದು ಸೂರ್ಯನ ಕಿರಣಗಳಿಂದಾಗುವ ಹಾನಿ ಮತ್ತು ಅಕಾಲಿಕ ವಯಸ್ಸಾಗುವಿಕೆಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಕೊಲೊಜನ್ ಉತ್ಪಾದನೆ ಹೆಚ್ಚಿಸುತ್ತದೆ.

ಪಪ್ಪಾಯ ಹಣ್ಣಿನ ಸ್ಮೂಥಿ

ಪಪ್ಪಾಯ ಹಣ್ಣುಗಳು ವಿಟಮಿನ್ ಎ, ಸಿ ಮತ್ತು ಇ ಗಳಿಂದ ಸಮೃದ್ಧವಾಗಿದೆ. ಇದು ಚರ್ಮದ ಪುನರುಜ್ಜೀವನಕ್ಕೆ ಅತ್ಯುತ್ತಮವಾಗಿದೆ. ಪಪ್ಪಾಯ ಹಣ್ಣಿನ ಸ್ಮೂಥಿ ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಪಪ್ಪಾಯ ಹಣ್ಣಿನ ಸ್ಮೂಥಿ ಅಥವಾ ಜ್ಯೂಸ್‌ ಕುಡಿಯುವುದರಿಂದ ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಉಪಕಾರಿಯಾಗಿದೆ ಮತ್ತು ಸ್ಪಷ್ಟವಾದ ಮೈಬಣ್ಣ ನೀಡುತ್ತದೆ.

ಅರಿಶಿನ ಹಾಲು

ಅರಿಶಿನ ಉರಿಯೂತದ ಮತ್ತು ರೋಗ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹಾಲಿಗೆ ಅರಶಿನ ಹಾಕಿ ಕುಡಿಯುವುದರಿಂದ ಮೊಡವೆ, ಕೆಂಪು ಮತ್ತು ಕಪ್ಪು ಕಲೆಗಳಂತಹ ಚರ್ಮದಲ್ಲಿರುವ ಕಲೆಗಳನ್ನು ನಾಶಗೊಳಿಸಲು ಸಹಾಯ ಮಾಡುತ್ತದೆ. ಅರಿಶಿನದ ಹಾಲಿನ ನಿಯಮಿತ ಸೇವನೆ ತ್ವಚೆಯ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲದೇ ಮೈಬಣ್ಣ ಬದಲಾಗದಂತೆ ಸಹಾಯ ಮಾಡುತ್ತದೆ.

ಪಾಲಕ್ ಜ್ಯೂಸ್

ಪಾಲಕ್ ಮತ್ತು ಎಲೆಕೋಸುಗಳಂತಹ ಹಸಿರೆಲೆ ಸೊಪ್ಪುಗಳಲ್ಲಿ ವಿಟಮಿನ್ ಎ, ಸಿ, ಇ ಮತ್ತು ಕೆ ಅಂಶ ಹೆಚ್ಚಿರುತ್ತದೆ. ಇವೆಲ್ಲವೂ ಆರೋಗ್ಯಕರ ಚರ್ಮಕ್ಕೆ ಅವಶ್ಯಕವಾಗಿದೆ. ಈ ಹಸಿರೆಲೆ ತರಕಾರಿಗಳು ಉರಿಯೂತದ ವಿರುದ್ಧ ಹೋರಾಡಲು ಮತ್ತು ಕೊಲೊಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಹೊಳೆಯುವ ತ್ವಚೆ ನಮ್ಮದಾಗುತ್ತದೆ.

ಕ್ಯಾರೆಟ್ ಮತ್ತು ಬೀಟ್ರೂಟ್ ಜ್ಯೂಸ್

ಕ್ಯಾರೆಟ್ ಮತ್ತು ಬೀಟ್ರೂಟ್ ಜ್ಯೂಸ್ ಗಳು ನಮ್ಮ ತ್ವಚೆಗೆ ಪೋಷಕಾಂಶಗಳ ಶಕ್ತಿ ಕೇಂದ್ರ ಎನ್ನಬಹುದು. ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದು ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮದ ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ನಲ್ಲಿ ಕಬ್ಬಿಣ ಮತ್ತು ರೋಗ-ನಿರೋಧಕಗಳು ಅಧಿಕವಾಗಿದ್ದು, ರಕ್ತ ಪರಿಚಲನೆ ಸುಧಾರಿಸುತ್ತದೆ. ತ್ವಚೆಯನ್ನು ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ.

ಸೌತೆಕಾಯಿ ಮತ್ತು ಪುದೀನ ಜ್ಯೂಸ್

ಸೌತೆಕಾಯಿಗಳು ತ್ವಚೆ ಹೈಡ್ರೇಟಿಂಗ್ ಆಗಿ ಇಡಲು ಸಹಾಯ ಮಾಡುತ್ತದೆ. ಪುದೀನವನ್ನು ಆಹಾರದಲ್ಲಿ ಸೇರಿಸುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಹೊಳೆಯುವ ಚರ್ಮ ಪಡೆಯಲು ಸಹಕಾರಿಯಾಗಿದೆ.

ಅಲೋವೆರಾ ಜ್ಯೂಸ್

ಅಲೋವೆರಾ ವಿಟಮಿನ್ ಸಿ ಮತ್ತು ಇ ಅಂಶಗಳಿಂದ ಸಮೃದ್ಧವಾಗಿದೆ. ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಹಾನಿಗೊಳಗಾದ ಚರ್ಮ ಅಥವಾ ಗಾಯಗಳಾದ ಚರ್ಮವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ. ಚರ್ಮ ಹೈಡ್ರೇಶನ್‌ ನಲ್ಲಿರಿಸಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ

ಗ್ರೀನ್‌ ಟೀಯಲ್ಲಿ ರೋಗ ನಿರೋಧಕಗಳಿವೆ. ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಚರ್ಮ ಕೆಂಪಾಗುವುದು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮ ಸ್ಪಷ್ಟವಾಗಿರುವಂತೆ ಮಾಡುತ್ತದೆ.

ತೆಂಗಿನ ನೀರು

ತೆಂಗಿನ ನೀರು ಪೊಟ್ಯಾಶಿಯಂ ನಂತಹ ವಿಟಮಿನ್‌ಗಳು ಮತ್ತು ಖನಿಜಗಳಿಂದ ತುಂಬಿದ ಹೃಡ್ರೇಟೆಡ್‌ ಪಾನೀಯ. ತೆಂಗಿನ ನೀರು ಕುಡಿಯುವುದರಿಂದ ದೇಹ, ಚರ್ಮ ಹೈಡ್ರೇಶನ್‌ ನಲ್ಲಿರಿಸಲು ಸಹಾಯ ಮಾಡುತ್ತದೆ.

ನಿಂಬೆ ನೀರು

ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ನಮ್ಮ ದಿನ ಪ್ರಾರಂಭಿಸುವುದು ನಮ್ಮ ಚರ್ಮದಲ್ಲಿ ಹಲವು ಬದಲಾವಣೆಗಳು ಆಗಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಇದು ತ್ವಚೆಯನ್ನು ಹೊಳಪುಗೊಳಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

*ಕಾವ್ಯಶ್ರೀ

ಟಾಪ್ ನ್ಯೂಸ್

pratap-Simha

MUDA: ಎರಡುವರೆ ತಿಂಗಳ ಹಿಂದೆ ನಿವೇಶನ ವಾಪಸ್‌ ಕೊಟ್ಟಿದ್ರೆ ಇಷ್ಟೆಲ್ಲ ಆಗ್ತಿತ್ತಾ: ಪ್ರತಾಪ್

Mangaluru: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 5 ಮಂದಿಯ ಸೆರೆ

Mangaluru: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 5 ಮಂದಿಯ ಸೆರೆ

Irani cup: ರಹಾನೆ, ಅಯ್ಯರ್‌, ಸರ್ಫರಾಜ್‌ ಅರ್ಧ ಶತಕ; ಚೇತರಿಸಿಕೊಂಡ ಮುಂಬಯಿ

Irani cup: ರಹಾನೆ, ಅಯ್ಯರ್‌, ಸರ್ಫರಾಜ್‌ ಅರ್ಧ ಶತಕ; ಚೇತರಿಸಿಕೊಂಡ ಮುಂಬಯಿ

1

Ajekar: ವಿದ್ಯುತ್‌ ಕಂಬಕ್ಕೆ ಬಡಿದ ಸಿಡಿಲು; ತಪ್ಪಿದ ಅನಾಹುತ

7-kulai

Mangaluru: ಸಹಾಯಕ ಆಯುಕ್ತರ ಆದೇಶದಂತೆ ಜೆಸಿಬಿಯಿಂದ ಅಗೆದು ಬಳಿಕ ಮುಚ್ಚಿದ ಬೀಚ್ ರಸ್ತೆ

vijayaendra

MUDA Scam: ನಿವೇಶನಗಳ ವಾಪಸ್ ಕೊಡುವ ನಿರ್ಧಾರ ರಾಜಕೀಯ ಡ್ರಾಮಾವಷ್ಟೇ: ಬಿ.ವೈ.ವಿಜಯೇಂದ್ರ

ವಾರಾಣಸಿ ದೇವಸ್ಥಾನದಿಂದ ಸಾಯಿ ಬಾಬಾ ಪ್ರತಿಮೆ ತೆಗೆಸಿದ ರಾಷ್ಟ್ರೀಯವಾದಿ ಸಂಘಟನೆ

Sai Baba: ವಾರಾಣಸಿ ದೇವಸ್ಥಾನದಿಂದ ಸಾಯಿ ಬಾಬಾ ಪ್ರತಿಮೆ ತೆಗೆಸಿದ ರಾಷ್ಟ್ರೀಯವಾದಿ ಸಂಘಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anjura-roll

Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

6

World Heart Day: ನಿಮ್ಮ ಹೃದಯ ಜೀವಕ್ಕೆ ಕುತ್ತಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

dharmendra kumar arenahalli

Exclusive: ಇತಿಹಾಸ ಕೇವಲ ರಾಜರ ಕಥೆಯಲ್ಲ, ಅದು ನಮ್ಮ ಜೀವನಶೈಲಿ: ಧರ್ಮೇಂದ್ರ ಕುಮಾರ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

sand

Kaup: ಟಿಪ್ಪರ್‌ನಲ್ಲಿ ಅಕ್ರಮ ಮರಳು ಸಾಗಾಟ ಪತ್ತೆ

pratap-Simha

MUDA: ಎರಡುವರೆ ತಿಂಗಳ ಹಿಂದೆ ನಿವೇಶನ ವಾಪಸ್‌ ಕೊಟ್ಟಿದ್ರೆ ಇಷ್ಟೆಲ್ಲ ಆಗ್ತಿತ್ತಾ: ಪ್ರತಾಪ್

Me Too: ಕೇರಳದಲ್ಲಿ ಮತ್ತೊಬ್ಬ ನಟನ ವಿರುದ್ಧ ಮೀ ಟೂ ಪ್ರಕರಣ!

Me Too: ಕೇರಳದಲ್ಲಿ ಮತ್ತೊಬ್ಬ ನಟನ ವಿರುದ್ಧ ಮೀ ಟೂ ಪ್ರಕರಣ!

Viral Video: ವಿದ್ಯಾರ್ಥಿಯನ್ನು ಗೋಡೆಗೆ ಗುದ್ದಿಸಿ, ಥಳಿಸಿದ ಶಿಕ್ಷಕ!

Viral Video: ವಿದ್ಯಾರ್ಥಿಯನ್ನು ಗೋಡೆಗೆ ಗುದ್ದಿಸಿ, ಥಳಿಸಿದ ಶಿಕ್ಷಕ!

11-

Mudhol: ಪ್ರಕರಣ ಹಿಂಪಡೆಯದಿದ್ದರೆ ಹಿಂದೂ ಪರ‌ ಸಂಘಟನೆಯಿಂದ ಜಿಲ್ಲಾದ್ಯಂತ ಹೋರಾಟದ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.