Mangaluru: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 5 ಮಂದಿಯ ಸೆರೆ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ

Team Udayavani, Oct 1, 2024, 9:39 PM IST

Mangaluru: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 5 ಮಂದಿಯ ಸೆರೆ

ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಸಾಗಾಟ/ಮಾರಾಟ ಮಾಡುತ್ತಿದ್ದ 5 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದು, 70 ಗ್ರಾಂ ಎಂಡಿಎಂಎ ವಶ ಪಡಿಸಿಕೊಂಡಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆಯ ಬಂಗ್ರೆ ಮಂಜೇಶ್ವರ, ಕರ್ಪಡತ್‌ ಹೌಸ್‌ ನಿವಾಸಿ, ಶಿವಮೊಗ್ಗ ಜಿಲ್ಲೆ ಟಿಪ್ಪು ನಗರ ನಿವಾಸಿ ಅಬ್ದುಲ್‌ ಶಾಕೀರ್‌ (24), ಮಂಜೇಶ್ವರದ ಉದ್ಯಾವರ ಕುಂಜತ್ತೂರು ಬಿ.ಎಸ್‌.ನಗರ ನಿವಾಸಿ ಹಸನ್‌ ಆಶೀರ್‌(34), ಕೇರಳದ ಕಣ್ಣೂರು ಜಿಲ್ಲೆ ಪಯ್ಯನೂರು, ಪೆರಿಂಗಾಂವ್‌ನ ರಿಯಾಜ್‌ ಎ.ಕೆ(31), ಕಾಸರಗೋಡು ಜಿಲ್ಲೆ ವರ್ಕಾಡಿ ಪಾವೂರು ಕೆದಂಬಾಡಿ ಹೌಸ್‌ನ ಮೊಹಮ್ಮದ್‌ ನೌಷಾದ್‌(22), ಕಾಸರಗೋಡು ಜಿಲ್ಲೆ ಮಂಜೇಶ್ವರ ಕುಂಜತ್ತೂರು ಜಿ.ಹೆಚ್‌.ಎಸ್‌.ರೋಡ್‌ನ‌ ಯಾಸೀನ್‌ ಇಮ್ರಾಜ್‌ ಯಾನೇ ಇಂಬು(35) ಬಂಧಿತ ಆರೋಪಿಗಳು.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಎಂಡಿಎಂಎ ಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮಂಗಳೂರು ಸಿಸಿಬಿ ಪೊಲೀಸರು ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ನೆತ್ತಿಲಪದವು ಬಳಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

3,50,000 ರೂ. ಮೌಲ್ಯದ 70 ಗ್ರಾಂ ಎಂಡಿಎಂಎ, 5 ಮೊಬೈಲ್‌ ಫೋನ್‌, 1,460 ರೂ. ನಗದು, ಡಿಜಿಟಲ್‌ ತೂಕ ಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 4,25,500 ರೂ. ಆರೋಪಿಗಳ ವಿರುದ್ಧ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಹಸನ್‌ ಅಶೀರ್‌ ಎಂಬಾತನ ವಿರುದ್ಧ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣ ದಾಖಲಾದೆ. ಯಾಸೀನ್‌ ಇಮ್ರಾಜ್‌ ಎಂಬಾತನ ವಿರುದ್ಧ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಪೊಲೀಸ್‌ ಸ್ಟೇಷನ್‌ನಲ್ಲಿ ಹಾಗೂ ಬೆಂಗಳೂರಿನ ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ಒಟ್ಟು 2 ಪ್ರಕರಣ ದಾಖಲಾಗಿದೆ.

ಸಿಸಿಬಿ ಘಟಕದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ ಅವರ ನೇತೃತ್ವದಲ್ಲಿ ಪೊಲೀಸ್‌ ನಿರೀಕ್ಷಕರಾದ ಶ್ಯಾಮ್‌ ಸುಂದರ್‌ ಎಚ್‌.ಎಂ., ಪಿಎಸ್‌ಐಯವರಾದ ಶರಣಪ್ಪ ಭಂಡಾರಿ ಮತ್ತು ಸಿಬಂದಿಯವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

R.Ashok

MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ: ಅಶೋಕ್‌

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕಾರು ಢಿಕ್ಕಿ; ವಿದ್ಯಾರ್ಥಿ ಸಾವು

Uppinangady: ಕಾರು ಢಿಕ್ಕಿ; ವಿದ್ಯಾರ್ಥಿ ಸಾವು

Road Mishap: ಬೈಕ್‌ ಸವಾರನ ಕೈ ಮೇಲೆ ಹರಿದ ಬಸ್ಸಿನ ಚಕ್ರ; ಗಂಭೀರ ಗಾಯ

Road Mishap: ಬೈಕ್‌ ಸವಾರನ ಕೈ ಮೇಲೆ ಹರಿದ ಬಸ್ಸಿನ ಚಕ್ರ; ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

D.K.,ಜಿಲ್ಲಾ ನಿ.ಸ.ನೌಕರರ ವೇದಿಕೆಯಿಂದ ಪ್ರತಿಭಟನೆ: ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

D.K.,ಜಿಲ್ಲಾ ನಿ.ಸ.ನೌಕರರ ವೇದಿಕೆಯಿಂದ ಪ್ರತಿಭಟನೆ: ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆMoodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Mangaluru: ಹೈಕೋರ್ಟ್‌ ಪೀಠ: ಹೋರಾಟಕ್ಕೆ ಸಿದ್ಧತೆ

Mangaluru: ಹೈಕೋರ್ಟ್‌ ಪೀಠ: ಹೋರಾಟಕ್ಕೆ ಸಿದ್ಧತೆ

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

R.Ashok

MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ: ಅಶೋಕ್‌

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.