Everest: ನದಿ ಸಂಗಮದಿಂದ ಎವರೆಸ್ಟ್ ಎತ್ತರದಲ್ಲಿ ದಿಢೀರ್ ಹೆಚ್ಚಳ?
ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್ ವರದಿ
Team Udayavani, Oct 2, 2024, 6:46 AM IST
ಲಂಡನ್: ಹಿಮಾಲಯದ ತಪ್ಪಲಿನ 2 ನದಿಗಳ ಸಂಗಮದಿಂದ ಮೌಂಟ್ ಎವರೆಸ್ಟ್ ನ ಎತ್ತರ ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈ ನದಿಗಳ ಸಂಗಮದಿಂದ ಎವರೆಸ್ಟ್ ಎತ್ತರ ನಿರೀಕ್ಷೆಗಿಂತ 15-50 ಮೀ. ಎತ್ತರವಾಗಿದೆ ಎನ್ನಲಾಗಿದೆ.
ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಈ ವರದಿಯನ್ನು ಸಿದ್ಧಪಡಿಸಿದೆ. ಕೋಸಿ ಹಾಗೂ ಅರುಣಾ ನದಿ ಗಳು 89000 ವರ್ಷಗಳ ಹಿಂದೆ ಸಂಗಮವಾಗುವ ಮೂಲಕ 75 ಕಿ.ಮೀ. ನಷ್ಟು ನದಿ ಪಾತ್ರ ನಾಶವಾಯಿತು. ಹೀಗಾಗಿ ಭೂಫಲಕದ ಮೇಲಿನ ತೂಕ ಕಡಿಮೆಯಾಗಿ ಭೂ ಫಲಕ ಮೇಲೇರಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಹಿಮಾಲಯ ಪರ್ವತ ರಚನೆಯಾದಾಗಿನಿಂದ ಇಲ್ಲಿಯವರೆಗೆ ಆಗಬೇಕಾಗಿದ್ದ ಎತ್ತರಕ್ಕಿಂತ 15ರಿಂದ 50 ಮೀ.ನಷ್ಟು ಎತ್ತರ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ನದಿಗಳ ಸಂಗಮವಾಗಿರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಭೂಫಲಕಗಳ ಒತ್ತಡದಿಂದ 5 ಕೋಟಿ ವರ್ಷಗಳ ಹಿಂದೆ ರಚನೆಯಾಗಿರುವ ಹಿಮಾಲಯ ಪರ್ವತ ಪ್ರತಿವರ್ಷ 2 ಮಿ.ಮೀ.ನಷ್ಟು ಎತ್ತರವಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.