ISRO: ನಮ್ಮ ‘ಶುಕ್ರಯಾನ’ಕ್ಕೆ ಮುಹೂರ್ತ ನಿಗದಿ
ಶುಕ್ರನ ಮೇಲ್ಪದರ, ವಾತಾವರಣ, ಮೇಲ್ಮೈ ರಚನೆಯ ಅಧ್ಯಯನ: ಇಸ್ರೋ ಘೋಷಣೆ
Team Udayavani, Oct 2, 2024, 7:20 AM IST
ಹೊಸದಿಲ್ಲಿ: ಚಂದ್ರ, ಮಂಗಳ ಮತ್ತು ಸೂರ್ಯರ ಅಧ್ಯಯನದ ಬಳಿಕ ಭೂಮಿಯ ಅವಳಿ ಗ್ರಹ ಎಂದೇ ಖ್ಯಾತವಾದ ಶುಕ್ರನ ಅಧ್ಯಯನಕ್ಕೆ ಭಾರತ ಮುಂದಾಗಿದೆ.
ಇದಕ್ಕಾಗಿ ಆರ್ಬಿಟರ್ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದ್ದು, 2028ರ ಮಾ. 29ರಂದು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮಂಗಳವಾರ ಘೋಷಿಸಿದೆ.
ಈ ಯೋಜನೆಗೆ “ಶುಕ್ರಯಾನ-1′ ಎಂದು ಹೆಸರಿಡಲಾಗಿದೆ. ಶುಕ್ರ ಗ್ರಹದ ವಾತಾವರಣ, ಮೇಲ್ಪದರ, ಭೌಗೋಳಿಕ ರಚನೆ, ಸೂರ್ಯನೊಂದಿಗೆ ಶುಕ್ರ ಹೊಂದಿ ರುವ ಸಂಬಂಧವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.
ಉಡಾವಣೆ ಹೇಗೆ?: ಇಸ್ರೋದ ಶಕ್ತಿಶಾಲಿ ರಾಕೆಟ್ ಎಂದು ಕರೆಸಿಕೊಳ್ಳುವ ಎಲ್ಎಂವಿ ಮಾರ್ಕ್-3 ಮೂಲಕ ಉಡಾವಣೆ ಮಾಡ ಲಾಗುತ್ತದೆ. ನಿಗದಿತ ಕಕ್ಷೆಗೆ ನೌಕೆಯನ್ನು ಮಾರ್ಕ್-3 ತಲುಪಿಸ ಲಿದೆ. ಬಳಿಕ ಭೂಮಿಯನ್ನು ಸುತ್ತುತ್ತ ನೂಕುಬಲವನ್ನು ಪಡೆಯುವ ನೌಕೆಯು ಅನಂತರ ಶುಕ್ರನತ್ತ ಯಾನವನ್ನು ಮುಂದುವರಿಸಲಿದೆ. ಅದು 2028ರ ಜು. 19ರಂದು ಕಕ್ಷೆಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
5ನೇ ದೇಶ ಎಂಬ ಖ್ಯಾತಿ: ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ಈಗಾಗಲೇ ಶುಕ್ರಯಾನವನ್ನು ಯಶಸ್ವಿಯಾಗಿ ಕೈಗೊಂಡಿವೆ. ಭಾರತ ಯಶಸ್ವಿಯಾದರೆ 5ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune; ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನ: 3 ಮಂದಿ ಮೃ*ತ್ಯು
Gandhi, Shastri ಜನ್ಮದಿನ : ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಪುಷ್ಪ ನಮನ
Maharashtra: ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಲ್ಲಿ ಮತ ಜಿಹಾದ್: ಬಿಜೆಪಿ
Swachh Bharat : “ಸ್ವಚ್ಛ ಭಾರತ್ ಮಿಷನ್’ಗೆ ದಶಕ: ಇಂದು ಹಲವು ಯೋಜನೆಗಳಿಗೆ ಚಾಲನೆ
AN-12 aircraft: 56 ವರ್ಷ ಹಿಂದೆ ಪತನವಾದ ವಿಮಾನ: ಈಗ 4 ಶವ ಪತ್ತೆ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.