Agriculture School: ಮೊದಲ ಕೃಷಿ ಶಾಲೆ ಜಾಗದಲ್ಲಿ ಪಾನೀಯ ನಿಗಮ

Team Udayavani, Oct 2, 2024, 11:43 AM IST

Agriculture School: ಮೊದಲ ಕೃಷಿ ಶಾಲೆ ಜಾಗದಲ್ಲಿ ಪಾನೀಯ ನಿಗಮ

ಬೆಂಗಳೂರು: ರಾಜ್ಯದ ಮೊದಲ ಕೃಷಿ ಪಾಠಶಾಲೆ ಆರಂಭಗೊಂಡ ಜಾಗದಲ್ಲಿ ಈಗ ಸರ್ಕಾರ ಪಾನೀಯ ನಿಗಮದ ಕಟ್ಟಡ ಸ್ಥಾಪಿಸಲು ಮುಂದಾಗಿದೆ.

ಈ ಮೂಲಕ ಅಲ್ಲಿರುವ ಪಾರಂಪರಿಕ ಕಟ್ಟಡಗಳ ಪಾವಿತ್ರ್ಯತೆಗೆ ಧಕ್ಕೆ ಎದುರಾಗಿದೆ. ನೂರಾರು ವರ್ಷಗಳ ಹಿಂದಿನ ಮಾತು- ವೈಜ್ಞಾನಿಕವಾಗಿ ಕೃಷಿ ಮಾಡುವ ತಿಳಿವಳಿಕೆ ಒತ್ತಟ್ಟಿಗಿರಲಿ, ಅದರ ಪರಿಕಲ್ಪನೆಯೂ ನಮ್ಮ ರೈತರಿಗೆ ಇರಲಿಲ್ಲ. ಆಗಲೇ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿದೇಶಿ ಕೃಷಿ ತಜ್ಞರ ಸಲಹೆ ಮೇರೆಗೆ 1913ರಲ್ಲಿ ನಗರದ ಹೆಬ್ಟಾಳದಲ್ಲಿ ರಾಜ್ಯದ ಮೊದಲ ಕೃಷಿ ಪಾಠಶಾಲೆಗೆ ಅನುಮತಿ ನೀಡಿದರು.

ಶತಮಾನ ಕಂಡ ಕೃಷಿ ಸಂಶೋಧನಾ ಕಟ್ಟಡಗಳು ಇದಕ್ಕೆ ಸಾಕ್ಷಿಯಾಗಿ ಈಗಲೂ ಅಲ್ಲಿವೆ. ಪಾರಂಪರಿಕ ತಾಣ ಆಗಬೇಕಾದ ಆ ಆವರಣದಲ್ಲಿ ಈಗ ಸರ್ಕಾರ ಪಾನೀಯ ನಿಗಮದ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಿದೆ. ವಿಚಿತ್ರವೆಂದರೆ ಈ ಪಾನೀಯ ನಿಗಮವನ್ನು ಕೃಷಿ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

ಬೆಂಗಳೂರಿನ ಹೆಬ್ಟಾಳದ ಬಳಿ ಸರ್ವೇ ನಂಬರ್‌ 2ರಲ್ಲಿ ಒಟ್ಟು 256.41 ಎಕರೆ ಪೈಕಿ 2 ಎಕರೆ ಭೂಮಿ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 43,560 ಚದರಡಿ ಅಂದರೆ ಹೆಚ್ಚು-ಕಡಿಮೆ ಒಂದು ಎಕರೆ ಜಾಗದಲ್ಲಿ ಅಂದಾಜು 56.63 ಕೋಟಿ ವೆಚ್ಚದಲ್ಲಿ ಪಾನೀಯ ನಿಗಮ ಮತ್ತು ಕೃಷಿ ಇಲಾಖೆಯ ಅವಳಿ ಗೋಪುರಗಳ ನಿರ್ಮಾಣ ಮಾಡಲು ಈಚೆಗೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಬ್ಟಾಳದಲ್ಲಿ ಸುಮಾರು 256.41 ಎಕರೆ ಜಾಗದಲ್ಲಿ ಇದುವರೆಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಹೀಗಾಗಿ, ಪಶುಸಂಗೋಪನೆ, ರಾಜ್ಯ ಬೀಜ ನಿಗಮ, ಹೈನೋದ್ಯಮ ಸೇರಿದಂತೆ 20ಕ್ಕೂ ಪೂರಕ ಚಟುವಟಿಕೆಗಳು ಅಲ್ಲಿ ನಡೆಯುತ್ತಿವೆ. ಆದರೆ, ಇದಕ್ಕೆ ಭಿನ್ನವಾಗಿ ಕೃಷಿಗೆ ಸಂಬಂಧವೇ ಇಲ್ಲದ ಅದರಲ್ಲೂ ಪಾನೀಯ ನಿಗಮದ ಕಚೇರಿ ಕಟ್ಟಡ ತಲೆಯೆತ್ತಲು ಅವಕಾಶ ಮಾಡಿಕೊಡಲಾಗಿದೆ.

ರಾಜ್ಯದ ಕೃಷಿ ಶಿಕ್ಷಣ ಕೇಂದ್ರವಾಗಿತ್ತು ಹೆಬ್ಬಾಳ: ಇದೇ ಹೆಬ್ಟಾಳ ಕೃಷಿ ಶಿಕ್ಷಣದ ಕೇಂದ್ರವಾಗಿತ್ತು. ಜರ್ಮನ್‌ನ ಕೃಷಿ ರಸಾಯನಶಾಸ್ತ್ರಜ್ಞ ಡಾ.ಲೆಹಮನ್‌ ಇಲ್ಲಿ ಕೃಷಿ ಪ್ರಯೋಗಾಲಯ ಮತ್ತು ಪ್ರಾತ್ಯಕ್ಷಿಕೆಗಳನ್ನು ಮಾಡಿದ್ದರು. ಮೊದಲ ಮಿಶ್ರತಳಿ ಕುರಿಗಳ ಪ್ರದರ್ಶನದ ಮೂಲಕ ಕೃಷಿ ಮೇಳ ನಡೆದಿದ್ದು ಇದೇ ಜಾಗದಲ್ಲಿ. ನಂತರ ಡಾ.ಲೆಸ್ಸಿ ಕೋಲ್‌ವುನ್‌ ಕೃಷಿ ಪಾಠಶಾಲೆಯ ಪರಿಕಲ್ಪನೆಯನ್ನು ಮಹಾರಾಜರ ಮುಂದಿಡುತ್ತಾರೆ. ಅವರ ಮಾರ್ಗದರ್ಶನದಲ್ಲೇ ಮುಂದೆ 1913ರಲ್ಲಿ ಕೃಷಿ ಶಾಲೆ ಅಸ್ತಿತ್ವಕ್ಕೆ ಬರುತ್ತದೆ. ಅದರ ಪ್ರಾಂಶುಪಾಲರೂ ಸ್ವತಃ ಡಾ.ಕೋಲ್‌ವುನ್‌ ಆಗುತ್ತಾರೆ. ಮೊದಲಿಗೆ ಇಲ್ಲಿ 2 ವರ್ಷಗಳ ಕೃಷಿಯಲ್ಲಿ ಪೋಸ್ಟ್‌ ಸೆಕೆಂಡರಿ ಸರ್ಟಿಫಿಕೇಟ್‌ ಟ್ರೈನಿಂಗ್‌ ಕೋರ್ಸ್‌ ಆರಂಭಿಸಲಾಯಿತು.

ನಂತರದಲ್ಲಿ ಅದನ್ನು 3 ವರ್ಷಗಳ ಕೃಷಿ ಡಿಪ್ಲೊಮಾ ಕೋರ್ಸ್‌ ಆಗಿ ಪರಿವರ್ತಿಸಲಾಯಿತು. ಮುಂದೆ ಇದು ಕೃಷಿ ಕಾಲೇಜು ಆಗಿ ಮೇಲ್ದರ್ಜೆ ಗೇರಿತು. ಮೊದಲೇ ಇದ್ದ ಕಟ್ಟಡಗಳಲ್ಲೇ 1946ರಲ್ಲಿ 3 ವರ್ಷಗಳ ಕೃಷಿ ಪದವಿ ಕೋರ್ಸ್‌ ಅನ್ನು ಪರಿಚಯಿ ಸಲಾಯಿತು. ನಂತರದ ದಿನಗಳಲ್ಲಿ ಪ್ರಸ್ತುತ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸೇರಿದಂತೆ ಅನೇಕರು ಇದೇ ಹೆಬ್ಟಾಳ ಕ್ಯಾಂಪಸ್‌ನಲ್ಲಿ ಕೃಷಿ ಪದವಿ ಪೂರೈಸಿದರು. 1913ರಲ್ಲಿ ಆರಂಭಗೊಂಡ ಕೃಷಿ ಶಾಲೆಯ ಶತಮಾನೋತ್ಸವ ದಶಕದ ಹಿಂದಷ್ಟೇ ನಡೆಯಿತು. ಇಂದು ಆ ಕಟ್ಟಡಗಳೇ ಮುಖ್ಯ ಸಂಶೋಧನಾ ಕೇಂದ್ರ ಎಂದೇ ಪರಿಚಿತವಾಗಿವೆ. ಈ ಜಾಗವನ್ನು ಪಾರಂಪರಿಕ ತಾಣವಾಗಿ ಘೋಷಿಸುವ ಮೂಲಕ ರಕ್ಷಣೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ನಡುವೆಯೇ ಇದಕ್ಕೆ ಹೊಂದಿಕೊಂಡ ಜಾಗದಲ್ಲಿ ಪಾನೀಯ ನಿಗಮ ಸ್ಥಾಪನೆಗೆ ಅನುಮೋದನೆ ದೊರಕಿದೆ.

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-bbb

ICC Test rankings; ಬುಮ್ರಾಗೆ ಮತ್ತೆ ಅಗ್ರಸ್ಥಾನ:ನಂ.3ಕ್ಕೆ ಜಿಗಿದ ಜೈಸ್ವಾಲ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Thalapathy 69: ದಳಪತಿ ವಿಜಯ್‌ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

Udupi-ಮಣಿಪಾಲ: 9ತಿಂಗಳಲ್ಲಿ 25 ಮನೆ, ಅಂಗಡಿ ಲೂಟಿ; ಪೊಲೀಸ್‌ ವ್ಯವಸ್ಥೆಗೇ ಸವಾಲಾದ ಕಳ್ಳರು

1-pawan-kalyana

Andhra DCM 11 ದಿನಗಳ ವ್ರತ; ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಪವನ್ ಕಲ್ಯಾಣ್

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆ ಕಿಚ್ಚು: ದರ್ಶನಾಪುರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Theft Case: ಕೆಲಸಕ್ಕಿದ್ದ ಕಚೇರಿಯಲ್ಲೇ 11 ಲಕ್ಷ ಕದ್ದ ಸೆಕ್ಯುರಿಟಿ

Theft: ಓಎಲ್‌ಎಕ್ಸ್ ನಲ್ಸಿ ಕದ್ದ ಬೈಕ್‌ ಮಾರಾಟ!

Theft: ಓಎಲ್‌ಎಕ್ಸ್ ನಲ್ಸಿ ಕದ್ದ ಬೈಕ್‌ ಮಾರಾಟ!

Theft: ಮಂತ್ರಾಲಯಕ್ಕೆ ಹೋಗಿದ್ದಾಗ 1 ಕೋಟಿ ಚಿನ್ನ ಕನ್ನ !

Theft: ಮಂತ್ರಾಲಯಕ್ಕೆ ಹೋಗಿದ್ದಾಗ 1 ಕೋಟಿ ಚಿನ್ನ ಕನ್ನ !

Crime: ಪತ್ನಿಗೆ 22 ಕಡೆ ತಿವಿದು, ಕತ್ತು ಕೊಯ್ದು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

Crime: ಪತ್ನಿಗೆ 22 ಕಡೆ ತಿವಿದು, ಕತ್ತು ಕೊಯ್ದು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

crime

BMTC ವೋಲ್ವೋ ಬಸ್‌ ಕಂಡಕ್ಟರ್‌ ಹೊಟ್ಟೆಗೆ ಚಾಕು ಇ*ರಿದ ಪ್ರಯಾಣಿಕ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-bbb

ICC Test rankings; ಬುಮ್ರಾಗೆ ಮತ್ತೆ ಅಗ್ರಸ್ಥಾನ:ನಂ.3ಕ್ಕೆ ಜಿಗಿದ ಜೈಸ್ವಾಲ್

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

Koppal: ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಕೂಸು ಮೃತಪಟ್ಟಾಗ ಗಂಡಾಯಿತು!

10-shirva

Shirva: ಬಂಟಕಲ್ಲು ರಕ್ತದಾನ ಶಿಬಿರ- ರಕ್ತದಾನದಿಂದ ಜೀವ ಉಳಿಸುವ ಕಾರ್ಯ: ಕಾಪು ತಹಶೀಲ್ದಾರ್‌

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯಲ್ಲಿತ್ತು ಡೆತ್ ನೋಟ್

ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ… ಮನೆಯೊಳಗಿತ್ತು ಡೆತ್ ನೋಟ್

1-a-souti

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.