![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 2, 2024, 1:26 PM IST
ಮಂಗಳೂರು: ಬದುಕುಳಿಯುವ ಕೊನೆಯ ಯತ್ನವಾಗಿ ಸಿಎಂ ಸಿದ್ದರಾಮಯ್ಯ 14 ಸೈಟ್ ವಾಪಾಸ್ ಕೊಟ್ಟಿರುವುದು ಅವರಿಗೆ ಬುದ್ಧಿ ಬಂದ ಹಾಗೆ ಕಾಣುತ್ತದೆ. ತನ್ನ ತಪ್ಪಿನ ಅರಿವಾದಂತೆ ಇದೆ, ಇನ್ನಾದರೂ ರಾಜಿನಾಮೆ ಕೊಡಲಿ ಎಂದು ಸಂಸದ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ರಾಜಿನಾಮೆ ಕೊಟ್ಟು ಸಂವಿಧಾನದ ಆಶಯಗಳಿಗೆ ಗೌರವ ಕೊಡಲಿ. ಕೇವಲ ಕುರ್ಚಿಗೆ ಅಂಟಿಕೊಳ್ಳುವುದೊಂದೇ ಸಿಎಂ ಆಶಯವಿದ್ದಂತೆ ಕಾಣುತ್ತಿದೆ ಎಂದು ಹೇಳಿದರು.
ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ. ಒಂದಿಂಚು ಅಭಿವೃದ್ಧಿ ಇಲ್ಲದೆ ಜನ ಕಂಗೆಟ್ಟಿದ್ದಾರೆ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ. ದಲಿತರ ಜಾಗವನ್ನು ಕಬಳಿಸಿ, ಪತ್ನಿ ಹೆಸರಿಗೆ ಸೈಟ್ ಮಾಡಿಕೊಂಡಿದ್ದಾರೆ ಎಂದರು.
ಬಿಜೆಪಿ ತನ್ನ ಹೋರಾಟದಲ್ಲಿ ಯಶಸ್ವಿಯಾಗಿದೆ. ವಿಧಾನಮಂಡಲದ ಒಳಗೆ, ಹೊರಗೆ, ಸಂಸತ್ತಿನಲ್ಲಿ ಸಿಎಂ ಅಕ್ರಮದ ವಿರುದ್ಧ ಹೋರಾಡಿದ್ದೇವೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ ಸಿಎಂ, ಸಾಂವಿಧಾನಿಕ ಹುದ್ದೆಗೆ ಗೌರವ ನೀಡಿಲ್ಲ ಎಂದು ಚೌಟ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
You seem to have an Ad Blocker on.
To continue reading, please turn it off or whitelist Udayavani.