Road Mishap: ಕಟಪಾಡಿ ಜಂಕ್ಷನ್ ಬಳಿ ಸರಣಿ ಅಪಘಾತ: ರಿಕ್ಷಾ, ಓಮ್ನಿ ಸೇರಿ ಹಲವು ವಾಹನಗಳು ಜಖಂ
Team Udayavani, Oct 2, 2024, 10:06 PM IST
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಇತರೇ ವಾಹನಗಳಿಗೆ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ಬುಧವಾರ(ಅ.2) ರಾತ್ರಿ ವೇಳೆಯಲ್ಲಿ ನಡೆದಿದೆ.
ಉಡುಪಿಯಿಂದ ಬರುತ್ತಿದ್ದ ಟಾಟಾ ಪಂಚ್ ಇಲೆಕ್ಟ್ರಿಕ್ ಕಾರು ಸರ್ವೀಸ್ ರಸ್ತೆಯಲ್ಲಿನ ಹಂಪ್ಸ್ ಮೇಲೇರಿದ ಬಳಿಕ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಹೆದ್ದಾರಿ ದಾಟಿದ ರಿಕ್ಷಾಕ್ಕೆ ಢಿಕ್ಕಿ ಹೊಡೆದು, ಬಳಿಕ ಬಸ್, ಅಮ್ನಿ, ಅಂಗಡಿ ಬಳಿ ಪಾರ್ಕಿಂಗ್ ಮಾಡಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದು ವಾಹನಗಳು ಜಖಂಗೊಂಡಿದೆ.
ಸದಾ ಜನ ನಿಬಿಡತೆಯಿಂದ ಕೂಡಿದ್ದ ಈ ಪ್ರದೇಶದಲ್ಲಿ ಪವಾಡ ಸದೃಶವಾಗಿ ಜನರಿಗೆ ಯಾವುದೇ ಅಪಾಯ ಸಂಭವಿಸದೆ ಇದ್ದು, ವಾಹನಗಳು ಜಖಗೊಂಡಿರುತ್ತದೆ.
ಕಾಪು ಪೊಲೀಸ್ ಠಾಣೆ ಎಎಸ್ಐ ದಯಾನಂದ್, ಆರಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.