Rain: ಕರಾವಳಿಯಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮುಂಗಾರು ಮಳೆ; ಹಿಂಗಾರಿನ ಮೇಲೆ ನಿರೀಕ್ಷೆ
ದಕ್ಷಿಣ ಕನ್ನಡದಲ್ಲಿ ಶೇ.11, ಉಡುಪಿಯಲ್ಲಿ ಶೇ.13ರಷ್ಟು ಹೆಚ್ಚಳ
Team Udayavani, Oct 3, 2024, 6:50 AM IST
ಮಂಗಳೂರು: ವಾಡಿಕೆಯಂತೆ ಮುಂಗಾರು ಅವಧಿ ಪೂರ್ಣಗೊಂಡಿದ್ದು, ಕಳೆದ ಐದು ವರ್ಷಗಳ ಬಳಿಕ ಕರಾವಳಿಯಲ್ಲಿ ದಾಖಲೆಯ ಮಳೆ ಸುರಿದಿದೆ. 2019ರಲ್ಲಿ ಕರಾವಳಿಯಲ್ಲಿ ವಾಡಿಕೆಗಿಂತ ಶೇ.20ರಷ್ಟು ಮಳೆ ಹೆಚ್ಚಳವಾಗಿತ್ತು. 2024ರಲ್ಲೂ ಇದೇ ಪ್ರಮಾಣದಲ್ಲಿ ಮಳೆ ಹೆಚ್ಚಾಗಿದೆ.
ಕರಾವಳಿಯಲ್ಲಿ ಜೂನ್ ತಿಂಗಳಿನಿಂದ ಸೆಪ್ಟಂಬರ್ ಅಂತ್ಯದವರೆಗೆ ಮುಂಗಾರು ಋತುವಿನಲ್ಲಿ 3101 ಮಿ.ಮೀ. ಮಳೆಯಾಗಬೇಕು. ಅದರಂತೆ ಸೆ.30ರ ವರೆಗೆ 3,736 ಮಿ.ಮೀ. ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಶೇ.11, ಉಡುಪಿ ಜಿಲ್ಲೆಯಲ್ಲಿ ಶೇ.13 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಶೇ.20ರಷ್ಟು ಅಧಿಕ ಸುರಿದಿದೆ.
ಕಳೆದ ನಾಲ್ಕು ವರ್ಷ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ಇತ್ತು. ಒಟ್ಟಾರೆ ಮಳೆಗಾಲದ ಅವಧಿಯಲ್ಲಿ 2020ರ ಬಳಿಕ ಮಳೆ ವಾಡಿಕೆಯಂತೆ ಸುರಿಯಲಿಲ್ಲ. 2021 ಶೇ.13ರಷ್ಟು ಕಡಿಮೆ, 2022 ಶೇ.0, 2023-19 ಮತ್ತು ಈ ವರ್ಷ ಶೇ.20ರಷ್ಟು ಅಧಿಕ ಮಳೆಯಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ.12ರಷ್ಟು ಹೆಚ್ಚಳ, ಬಂಟ್ವಾಳ-ಶೇ.6, ಮಂಗಳೂರು-ಶೇ.7, ಪುತ್ತೂರು-ಶೇ.3, ಸುಳ್ಯ-ಶೇ.22, ಮೂಡುಬಿದಿರೆ-ಶೇ.19, ಕಡಬ-ಶೇ.8, ಮೂಲ್ಕಿ-ಶೇ.3, ಉಳ್ಳಾಲ-ಶೇ.5, ಉಡುಪಿ ಜಿಲ್ಲೆಯ ಕಾರ್ಕಳ-ಶೇ.6, ಕುಂದಾಪುರ-ಶೇ.45, ಉಡುಪಿ-ಶೇ.12, ಬೈಂದೂರು-ಶೇ.19, ಬ್ರಹ್ಮಾವರ-ಶೇ.17, ಕಾಪು-ಶೇ.11 ಮತ್ತು ಹೆಬ್ರಿಯಲ್ಲಿ ಶೇ.6ರಷ್ಟು ಹೆಚ್ಚು ಮಳೆಯಾಗಿದೆ.
ಕೇರಳ ಕರಾವಳಿ ತೀರಕ್ಕೆ ಮೇ 30ರಂದು ಪ್ರವೇಶ ಪಡೆದ ಮುಂಗಾರು ಜೂ.2 ರಂದು ರಾಜ್ಯ ಕರಾವಳಿ ಭಾಗಕ್ಕೆ ಅಪ್ಪಳಿಸಿತ್ತು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜೂನ್ ಮಧ್ಯಭಾಗದವರೆಗೆ ಮಳೆಗಾಲದ ಯಾವುದೇ ಲಕ್ಷಣ ಕಾಣಿಸಿಕೊಡಿರಲಿಲ್ಲ. ಸಾಮಾನ್ಯವಾಗಿ ಮುಂಗಾರು ಆಗಮನದ ವೇಳೆ ಕೆಲವು ದಿನ ಮೋಡದ ವಾತಾವರಣ, ಗಾಳಿ ಸಹಿತ ಬಿರುಸಿನ ಮಳೆಯಾಗುತ್ತದೆ. ಆದರೆ ಎರಡರಿಂದ ಮೂರು ವಾರಗಳ ಕಾಲ ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ. ಜುಲೈ ಅಂತ್ಯದಿಂದ ಆಗಸ್ಟ್ ತಿಂಗಳಿಡೀ ಕರಾವಳಿಯಲ್ಲಿ ಭಾರೀ ಮಳೆಯಾಗಿದೆ.
ಹಿಂಗಾರು ಮಳೆಯತ್ತ ನಿರೀಕ್ಷೆ
ಕರಾವಳಿ ಭಾಗದಲ್ಲಿ ಮುಂಗಾರು ಅವಧಿ ಪೂರ್ಣಗೊಂಡ ಬಳಿಕ ಅ. 1ರಿಂದ ಡಿಸೆಂಬರ್ ಅಂತ್ಯದವರೆಗಿನ ಹಿಂಗಾರು ಅವಧಿಯ ಮೇಲೆ ನಿರೀಕ್ಷೆ ಮೂಡಿದೆ. ಈ ಹಿಂದಿನ ಕೆಲವು ವರ್ಷಗಳಲ್ಲಿ ಕರಾವಳಿಗೆ ಉತ್ತಮ ಹಿಂಗಾರು ಇತ್ತು. ಈ ಬಾರಿ ಹೇಗಿರಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. ಹಿಂಗಾರು ಅವಧಿಯ ಮಳೆಯ ಕುರಿತಂತೆ ಹವಾಮಾನ ಇಲಾಖೆಯಿಂದ ಸದ್ಯದಲ್ಲೇ ವಿಶ್ಲೇಷಣೆಯೂ ಬಿಡುಗಡೆ ಮಾಡಲಿದೆ. ಕರಾವಳಿಯಲ್ಲಿ ಹಿಂಗಾರು ಅವಧಿಯಲ್ಲಿ 259.4 ಮಿ.ಮೀ. ವಾಡಿಕೆ ಮಳೆ ಸುರಿಯಬೇಕು. 2019ರಲ್ಲಿ ವಾಡಿಕೆಗಿಂತ ಶೇ.124 ಹೆಚ್ಚಳ, 2020ರಲ್ಲಿ ಶೇ.27, 2021ರಲ್ಲಿ ಶೇ.122, 2022ರಲ್ಲಿ ಶೇ.14ರಷ್ಟು ಕಡಿಮೆ ಮತ್ತು ಕಳೆದ ವರ್ಷ ಶೇ.6ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.