Bengaluru: ಜಾಸ್ತಿ ಬಾಡಿಗೆ ಕೊಡಲ್ಲಎಂದಿದ್ದಕ್ಕೆ ಯುವತಿಗೆ ಆಟೋ ಡ್ರೈವರ್ ನಿಂದನೆ
Team Udayavani, Oct 3, 2024, 12:35 PM IST
ಬೆಂಗಳೂರು: ಹೆಚ್ಚಿನ ಬಾಡಿಗೆ ಕೊಡುವುದಿಲ್ಲ ಎಂದು ಯುವತಿ ಹೇಳಿದ್ದಕ್ಕೆ ಆಟೋ ಚಾಲಕನೊಬ್ಬ ಅವಾಚ್ಯ ಶಬ್ದಗಳಿಂದ ಯುವತಿಗೆ ನಿಂದಿಸಿರುವ ಪ್ರಕರಣ ನಡೆದಿದೆ.
ಬೆಂಗಳೂರಿನ ಪ್ರದೇಶವೊಂದರಲ್ಲಿ ಯುವತಿ ಆಟೋ ಹತ್ತುವಾಗ ಬಾಡಿಗೆ ಎಷ್ಟಾಗುತ್ತದೆ ಎಂದು ಕೇಳಿದ್ದರು. ಈ ವೇಳೆ ಆಟೋ ಚಾಲಕ ಹೆಚ್ಚಿನ ಬಾಡಿಗೆ ಹೇಳಿದ್ದ. ಇಷ್ಟೊಂದು ಬಾಡಿಗೆ ಕೊಡಲು ಒಪ್ಪದ ಯುವತಿ ಆಟೋದಿಂದ ಕೆಳಗಿಳಿದಿದ್ದಾಳೆ. ಆಗ 150 ರೂ. ಬಾಡಿಗೆ ಕೊಡುತ್ತೇನೆ ಜಾಸ್ತಿ ಕೊಡುವುದಕ್ಕೆ ಆಗೋದಿಲ್ಲ ಎಂದು ಯುವತಿ ಹೇಳಿದ್ದಾರೆ.
ಇಷ್ಟಕ್ಕೆ ಆಕ್ರೋಶಗೊಂಡ ಆಟೋ ಚಾಲಕ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಚಾಲಕ ಅಸಭ್ಯವಾಗ ಮಾತನಾಡಿರುವುದನ್ನು ತನ್ನ ಮೊಬೈಲ್‌ನಲ್ಲಿ ಯುವತಿ ವಿಡಿಯೋ ಮಾಡಿದ್ದಾರೆ. ನಂತರ ಆ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಾಕಿ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮೈಕೋ ಲೇಔಟ್ ಪೊಲೀಸರು ಸ್ವಯಂ ಪ್ರೇರಿತರಾಗಿ ಆಟೋ ಚಾಲಕ ಬಿಳೇಕಲ್ಲಿ ನಿವಾಸಿ ಸಂತೋಷ್ (26) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.