Tollywood: ಸಮಂತಾ – ನಾಗ ಚೈತನ್ಯ ಬಗ್ಗೆ ಸಚಿವೆ ಸುರೇಖಾ ಹೇಳಿಕೆಗೆ ಇಡೀ ಟಾಲಿವುಡ್‌ ಆಕ್ರೋಶ


Team Udayavani, Oct 3, 2024, 2:48 PM IST

Tollywood: ಸಮಂತಾ – ನಾಗ ಚೈತನ್ಯ ಬಗ್ಗೆ ಸಚಿವೆ ಸುರೇಖಾ ಹೇಳಿಕೆಗೆ ಇಡೀ ಟಾಲಿವುಡ್‌ ಆಕ್ರೋಶ

ಹೈದರಾಬಾದ್:‌ ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಮತ್ತು ನಟಿ ಸಮಂತಾ ರುತ್​ ಪ್ರಭು(Samantha Ruth Prabhu) ಅವರ ವಿಚ್ಛೇದನಕ್ಕೆ ಬಿಆರ್​ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್​ (KTR​) ಅವರೇ ಕಾರಣವೆಂದು ಸಚಿವೆ ಕೊಂಡಾ ಸುರೇಖಾ (Konda Surekha) ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಡೀ ಟಾಲಿವುಡ್‌ ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿದೆ.

ಸಚಿವೆ ಕೊಂಡಾ ಸುರೇಖಾ ಅವರು ನೀಡಿದ್ದ ಹೇಳಿಕೆಯನ್ನು ಟಾಲಿವುಡ್‌ನ ಖ್ಯಾತ ಕಲಾವಿದರು ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲು ಅರ್ಜುನ್‌ (Allu Arjun), ಚಿರಂಜೀವಿ (Megastar Chiranjeevi) ಜೂ.ಎನ್‌ ಟಿಆರ್‌ (Jr NTR)  ಸೇರಿದಂತೆ ಅನೇಕರು ಹೇಳಿಕೆಯನ್ನು ಖಂಡಿಸಿ ನಾಗಾರ್ಜುನ್‌ ಕುಟುಂಬದ ಬೆನ್ನಿಗೆ ನಿಂತಿದ್ದಾರೆ.

ಅಲ್ಲು ಅರ್ಜುನ್‌ ಹೇಳಿದ್ದೇನು?:  ಸಚಿವೆ ಕೊಂಡಾ ಸುರೇಖಾ ಅವರ ಹೆಸರನ್ನು ಉಲ್ಲೇಖ ಮಾಡದೆ ಪರೋಕ್ಷವಾಗಿ ಅವರ ಹೇಳಿಕೆ ಬಗ್ಗೆ ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.

“ಸಿನಿಮಾ ವ್ಯಕ್ತಿಗಳು ಮತ್ತು ಚಲನಚಿತ್ರ ಕುಟುಂಬಗಳ ಬಗ್ಗೆ ಆಧಾರರಹಿತ ಅವಹೇಳನಕಾರಿಯಾಗಿ ನೀಡಿರುವ ಕಾಮೆಂಟ್‌ಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ನಡವಳಿಕೆಯು ಅಗೌರವ ಮತ್ತು ನಮ್ಮ ತೆಲುಗು ಸಂಸ್ಕೃತಿಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಸಾಮಾನ್ಯವೆಂದು ಪರಿಗಣಿಸಬಾರದು. ವೈಯಕ್ತಿಕ ಗೌಪ್ಯತೆಯನ್ನು ಗೌರವಿಸಿ, ವಿಶೇಷವಾಗಿ ಮಹಿಳೆಯರ ಕಡೆಗೆ ನಾವು ಸಮಾಜದಲ್ಲಿ ಗೌರವ ಮತ್ತು ಘನತೆಯನ್ನು ಉತ್ತೇಜಿಸಬೇಕು”ಎಂದು  ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಜೂ.ಎನ್‌ ಟಿಆರ್:‌  “ಕೊಂಡಾ ಸುರೇಖಾ ಅವರೇ, ರಾಜಕೀಯಕ್ಕೆ ವೈಯಕ್ತಿಕ ಬದುಕನ್ನು ಎಳೆದು ತರುತ್ತಿರುವುದು ಸರಿಯಲ್ಲ. ಸಾರ್ವಜನಿಕ ವ್ಯಕ್ತಿಗಳು, ವಿಶೇಷವಾಗಿ ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಗೌಪ್ಯತೆ, ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು.

ಚಿತ್ರರಂಗದ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡಿರುವುದು ಬೇಸರ ತಂದಿದೆ. ಇತರರು ನಮ್ಮ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವಾಗ ನಾವು ಸುಮ್ಮನಿರುವುದಿಲ್ಲ. ನಾವು ಇದಕ್ಕಿಂತ ಮೇಲೇರಬೇಕು ಮತ್ತು ಪರಸ್ಪರರ ಗೌರವವನ್ನು ಕಾಪಾಡಿಕೊಳ್ಳಬೇಕು. ಚಿತ್ರೋದ್ಯಮ ಇದನ್ನು ಸಹಿಸುವುದಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ: ಗೌರವಾನ್ವಿತ ಮಹಿಳಾ ಸಚಿವೆಯೊಬ್ಬರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನೋಡಿ ನನಗೆ ತುಂಬಾ ನೋವಾಗಿದೆ. ಖ್ಯಾತನಾಮರು ಮತ್ತು ಚಿತ್ರರಂಗದ ಸದಸ್ಯರು ಈ ರೀತಿಯ ಹೇಳಿಕೆಗಳಿಂದ ಸಾಫ್ಟ್ ಟಾರ್ಗೆಟ್ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ನಾವು ಚಲನಚಿತ್ರೋದ್ಯಮದ ಸದಸ್ಯರ ಮೇಲಿನ ಇಂತಹ ಕೆಟ್ಟ ಮೌಖಿಕ ಹಲ್ಲೆಗಳನ್ನು ವಿರೋಧಿಸಲು ಒಗ್ಗಟ್ಟಾಗಿ ನಿಲ್ಲುತ್ತೇವೆ. ರಾಜಕೀಯ ಲಾಭಕ್ಕಾಗಿ ಸಂಪರ್ಕವೇ ಇಲ್ಲದ ಜನರನ್ನು ಗುರಿಯಾಗಿಸಿಕೊಂಡು ಈ ರೀತಿ ಹೇಳಿಕೆ ನೀಡಿ ಆರೋಪಿಸುವುದು ಅಸಹ್ಯಕರವಾಗಿದೆ ಎಂದು ಅವರು ʼಎಕ್ಸ್‌ʼ ನಲ್ಲಿ ಬರೆದುಕೊಂಡಿದ್ದಾರೆ.

ನಟ ನಾನಿ: ರಾಜಕಾರಣಿಗಳು ಯಾವುದೇ ರೀತಿಯ ಅಸಂಬದ್ಧ ಮಾತನಾಡಿ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸುವುದು ಅಸಹ್ಯಕರವಾಗಿದೆ. ನಿಮ್ಮ ಮಾತುಗಳು ತುಂಬಾ ಬೇಜವಾಬ್ದಾರಿಯಾಗಿರುವಾಗ, ನಿಮ್ಮ ಜನರ ಬಗ್ಗೆ ನಿಮಗೆ ಯಾವುದೇ ಜವಾಬ್ದಾರಿ ಇರುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನ.

ಇದು ಕೇವಲ ನಟರು ಅಥವಾ ಸಿನಿಮಾದ ಬಗ್ಗೆ ಅಲ್ಲ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಗೌರವಾನ್ವಿತ ಸ್ಥಾನದಲ್ಲಿರುವವರು ಮಾಧ್ಯಮಗಳ ಮುಂದೆ ಆಧಾರರಹಿತವಾಗಿ ಮಾತನಾಡುವುದು ಮತ್ತು ಅದು ಸರಿ ಎಂದು ಭಾವಿಸುವುದು ಸರಿಯಲ್ಲ.  ನಮ್ಮ ಸಮಾಜದ ಮೇಲೆ ಕೆಟ್ಟದಾಗಿ ಪ್ರತಿಬಿಂಬಿಸುವ ಇಂತಹ ಆಚರಣೆಯನ್ನು ನಾವೆಲ್ಲರೂ ಖಂಡಿಸಬೇಕು ಎಂದು ನಾನಿ ಹೇಳಿದ್ದಾರೆ.

ನಟಿ ಖುಷ್ಬೂ ಸುಂದರ್:

2 ನಿಮಿಷದ ಪ್ರಸಿದ್ಧಿ ಮತ್ತು ಯೆಲ್ಲೋ ಜರ್ನಲಿಸಂನಲ್ಲಿ ಮುಳುಗಿರುವವರು ಮಾತ್ರ ಈ ಭಾಷೆಯನ್ನು ಮಾತನಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಇಲ್ಲಿ, ನಾನು ಹೆಣ್ತನಕ್ಕೆ ಸಂಪೂರ್ಣ ಅವಮಾನವನ್ನು ನೋಡುತ್ತೇನೆ. ಕೊಂಡಾ ಸುರೇಖಾ ಅವರೇ, ನಿಮ್ಮಲ್ಲಿ ಕೆಲವು ಮೌಲ್ಯಗಳು ತುಂಬಿವೆ ಎಂದು ನನಗೆ ಗೊತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯು ನನ್ನ ಉದ್ಯಮ, ನನ್ನ ಪೂಜಾ ಸ್ಥಳದ ಬಗ್ಗೆ ಆಧಾರರಹಿತ, ಭಯಾನಕ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಇನ್ನು ಮುಂದೆ ಇಂತಹ ನಿಂದನೆಗೆ ಸಿನಿಮಾ ಇಂಡಸ್ಟ್ರಿ ಮೂಕ ಪ್ರೇಕ್ಷಕರಾಗುವುದಿಲ್ಲ. ಸಾಕು ಸಾಕು. ಇಂತಹ ಆಧಾರರಹಿತ ಮತ್ತು ಸುಳ್ಳು ಆರೋಪಗಳಿಗಾಗಿ ನೀವು ಇನ್ನೊಬ್ಬ ಮಹಿಳೆಗೆ ಮಹಿಳೆಯಾಗಿ ಇಡೀ ಚಿತ್ರರಂಗದ ಕ್ಷಮೆಯಾಚಿಸಬೇಕು ಎಂದು ಖುಷ್ಬೂ ಸುಂದರ್ ಬರೆದುಕೊಂಡಿದ್ದಾರೆ.

ಇವರಷ್ಟೇ ಅಲ್ಲದೇ ನಿರ್ದೇಶಕ ಶ್ರೀಕಾಂತ್ ಒಡೆಲಾ, ನಟಿ -ನಿರ್ಮಾಪಕಿ ಲಕ್ಷ್ಮಿ ಮಂಚು, ನಿರ್ಮಾಪಕ ಕೋನ ವೆಂಕಟ್ ಸೇರಿದಂತೆ ಅನೇಕರು ಸುರೇಖಾ ಅವೆ ಹೇಳಿಕೆಯನ್ನು ಖಂಡಿಸಿದ್ದಾರೆ.

ಕ್ಷಮೆಯಾಚಿಸಿ ಹೇಳಿಕೆ ಹಿಂಪಡೆದ ಸಚಿವೆ: ತಮ್ಮ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಚಿವೆ ಸುರೇಖಾ ಅವರು ಸಮಂತಾ ಅವರ ಬಳಿ ಕ್ಷಮೆ ಕೇಳಿ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ನನ್ನ ಹೇಳಿಕೆಯಿಂದ ನಟಿ ಸಮಂತಾ ಅವರಿಗೆ ನೋವಾಗಿದ್ದರೆ ಈ ಕೂಡಲೇ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ, ಅಲ್ಲದೆ ನನ್ನ ಉದ್ದೇಶ ಯಾರ ಮನಸ್ಸನ್ನು ನೋಯಿಸುವುದು ಆಗಿರಲಿಲ್ಲ ಬದಲಾಗಿ ಒಬ್ಬ ನಾಯಕ ಓರ್ವ ಮಹಿಯನ್ನು ಯಾವ ಮಟ್ಟದಲ್ಲಿ ನೋಡುತ್ತಿದ್ದಾನೆ ಎಂಬುದನ್ನು ಗೊತ್ತುಪಡಿಸುವುದು ಆಗಿತ್ತು ಹೊರತು ನಿಮ್ಮ ಭಾವನೆಗೆ ಧಕ್ಕೆ ತರುವುದು ಆಗಿರಲಿಲ್ಲ ಅಲ್ಲದೆ ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲ ಅದು ಆದರ್ಶವೂ ಆಗಿದೆ ಎಂದು ʼಎಕ್ಸ್‌ʼನಲ್ಲಿ ಸಚಿವೆ ಬರೆದುಕೊಂಡಿದ್ದಾರೆ.

ಸಚಿವೆ ಮಾಡಿದ್ದ ಆರೋಪವೇನು?:

ಬುಧವಾರ(ಅ.2ರಂದು) ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮದವರ ಜೊತೆ ಮಾತನಾಡಿ, ಸಚಿವೆ ಕೊಂಡಾ ಸುರೇಖಾ, ನಾಗ ಚೈತನ್ಯ ಮತ್ತು ನಟಿ ಸಮಂತಾ ಜೀವನದಲ್ಲಿ ಹುಳಿ ಹಿಂಡಿದ್ದೆ ಕೆಟಿಆರ್ ಅಷ್ಟು ಮಾತ್ರವಲ್ಲದೆ ಸಮಂತಾ, ನಾಗಚೈತನ್ಯ ಮಾತ್ರವಲ್ಲದೆ ಟಾಲಿವುಡ್ ನ ಹಲವು ನಟಿಯರ ಫೋನ್ ಟ್ರ್ಯಾಪ್ ಮಾಡಿ ಅವರನ್ನು ಡ್ರಗ್ಸ್ ದಂಧೆಗೆ ಬಳಸಿ ಅವರ ಬಾಳನ್ನು ಹಾಳು ಮಾಡಿದ್ದಾನೆ ಎಂದು ಸಚಿವೆ ಆರೋಪಿಸಿದ್ದರು.

ಟಾಪ್ ನ್ಯೂಸ್

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

balachandra

Corruption;ರಾಜೀನಾಮೆ ಕೊಡಬೇಕೆಂಬ ಬೇಡಿಕೆಗಳಿಗೆ ಈಗ ಬೆಲೆ ಕಡಿಮೆ: ಬಾಲಚಂದ್ರ ಜಾರಕಿಹೊಳಿ

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

1-dde

Mysore Dasara ವೇದಿಕೆಯಲ್ಲಿ ರಾಜಕೀಯ..; ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ

121

Border 2: ಸನ್ನಿ ಡಿಯೋಲ್‌ ʼಬಾರ್ಡರ್-2‌ʼಗೆ ʼಫೌಜಿʼಯಾಗಿ ಬಂದ ಸುನಿಲ್‌ ಶೆಟ್ಟಿ ಪುತ್ರ

Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್‌ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು

Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್‌ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು

1-dinnu

Savarkar ಗೋ ಹ*ತ್ಯೆಯ ಪರವಾಗಿದ್ದರು,ಜಿನ್ನಾ ಹಂದಿ ಮಾಂಸ ಸೇವಿಸಿದ್ದರು: ದಿನೇಶ್ ಗುಂಡೂರಾವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Jani Master: ಅತ್ಯಾಚಾರ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ಗೆ ಷರತ್ತುಬದ್ಧ ಜಾಮೀನು

Indian 3: ʼಇಂಡಿಯನ್‌ -2ʼ ನಿಂದ ಅಪಾರ ನಷ್ಟ; ಮೂರನೇ ಭಾಗ ನೇರವಾಗಿ ಓಟಿಟಿಯಲ್ಲಿ ರಿಲೀಸ್?

Indian 3: ʼಇಂಡಿಯನ್‌ -2ʼ ನಿಂದ ಅಪಾರ ನಷ್ಟ; ಮೂರನೇ ಭಾಗ ನೇರವಾಗಿ ಓಟಿಟಿಯಲ್ಲಿ ರಿಲೀಸ್?

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ

12

Vettaiyan Trailer: ಪಾಪಿಗಳ ಎನ್‌ಕೌಂಟರ್‌ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

14

Paru Parvathy Movie: ಇನ್ಫಿನಿಟಿ ರೋಡ್‌ನ‌ಲ್ಲಿ ಪಾರ್ವತಿ!

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

Udupi: ಉಚ್ಚಿಲ ದಸರಾ 2024ಕ್ಕೆ ವಿದ್ಯುಕ್ತ ಚಾಲನೆ

balachandra

Corruption;ರಾಜೀನಾಮೆ ಕೊಡಬೇಕೆಂಬ ಬೇಡಿಕೆಗಳಿಗೆ ಈಗ ಬೆಲೆ ಕಡಿಮೆ: ಬಾಲಚಂದ್ರ ಜಾರಕಿಹೊಳಿ

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

1-dde

Mysore Dasara ವೇದಿಕೆಯಲ್ಲಿ ರಾಜಕೀಯ..; ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.