Women’s T20 World Cup;ಭಾರತೀಯ ವನಿತೆಯರಿಗೆ ಇಂದು ಕಿವೀಸ್ ಸವಾಲು
Team Udayavani, Oct 4, 2024, 6:59 AM IST
![1-ew](https://www.udayavani.com/wp-content/uploads/2024/10/1-ew-620x418.jpg)
![1-ew](https://www.udayavani.com/wp-content/uploads/2024/10/1-ew-620x418.jpg)
ದುಬಾೖ: ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಿಂದ ದುಬಾೖಗೆ ಆಗಮಿ ಸಿರುವ ಭಾರತೀಯ ವನಿತೆಯರು ಶುಕ್ರವಾರ ನಡೆಯುವ ವನಿತಾ ಟಿ20 ವಿಶ್ವಕಪ್‌ನ “ಎ’ ಬಣದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸವಾಲನ್ನು ಎದುರಿ ಸಲಿದ್ದಾರೆ. ತಂಡದ ಹಿರಿಯ ಆಟ ಗಾರರು ಉತ್ತಮ ನಿರ್ವಹಣೆ ನೀಡಿ ದರೆ ಭಾರತ ಭರ್ಜರಿ ಪ್ರದರ್ಶನ ನೀಡಿ ಉತ್ತಮ ಆರಂಭ ಪಡೆಯುವ ಸಾಧ್ಯತೆಯಿದೆ.
ನಾಯಕ ಹರ್ಮನ್‌ಪ್ರೀತ್ ಕೌರ್ ಕೊನೆಯ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿ ಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಹಲವು ಅವರು ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಗಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲಲು ತೀವ್ರವಾಗಿ ಹೋರಾಡುವ ಸಾಧ್ಯತೆ ಯಿದೆ. ಆರು ಬಾರಿ ಪ್ರಶಸ್ತಿ ಗೆದ್ದಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಬಿಟ್ಟರೆ ಸಾಕಷ್ಟು ಅನುಭವ ಮತ್ತು ಪ್ರತಿಭೆಯನ್ನು ಹೊಂದಿರುವ ತಂಡ ಗಳಲ್ಲಿ ಭಾರತ ಮುಂದಿದೆ.
ಬೃಹತ್ ಕೂಟಗಳಲ್ಲಿ ಭಾರತೀಯ ವನಿತೆಯರ ಹೋರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದಾಗಿ ನಿರ್ಣಾ ಯಕ ಹಂತದಲ್ಲಿ ಆಟಗಾರ್ತಿಯರು ಆಟವನ್ನು ಕೈಚೆಲ್ಲುವುದನ್ನು ಗಮನಿಸಿ ದ್ದೇನೆ. ಯಾವುದೇ ಹಂತದಲ್ಲೂ ಉತ್ತಮವಾಗಿ ಹೋರಾಡುವ ಛಲ ಆಟಗಾರ್ತಿಯರಲ್ಲಿ ಮೂಡಿದರೆ ಭಾರತ ಮೇಲುಗೈ ಸಾಧಿಸಬಹುದು.
ಅನುಭವಿಗಳಿಂದ ದೊಡ್ಡ ಕೊಡುಗೆ
ಗೆಲುವಿನೊಂದಿಗೆ ಶುಭಾರಂಭಗೈ ಯಲು ಭಾರತೀಯ ತಂಡಕ್ಕೆ ಅನು ಭವಿಗಳಾದ ಹರ್ಮನ್‌ಪ್ರೀತ್, ಸ್ಮತಿ ಮಂಧನಾ, ಜೆಮಿಮಾ ರಾಡ್ರಿಗಸ್, ಶಫಾಲಿ ಶರ್ಮ ಮತ್ತು ದೀಪ್ತಿ ಶರ್ಮ ದೊಡ್ಡ ಕೊಡುಗೆ ಸಲ್ಲಿಸುವುದು ಅನಿವಾರ್ಯ. ಅವರಲ್ಲಿ ಉತ್ತಮ ಫಾರ್ಮ್ನಲ್ಲಿರುವ ಶಫಾಲಿ ಮತ್ತು ಮಂಧನಾ ಕಳೆದ ಏಷ್ಯಾ ಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಆದರೂ ಭಾರತ ಫೈನಲ್‌ನಲ್ಲಿ ಶ್ರಿಲಂಕಾ ವಿರುದ್ಧ ಸೋತಿತ್ತು. ಕಳೆದ ಐದು ಟಿ20 ಪಂದ್ಯಗಳಲ್ಲಿ ಮಂಧನಾ ಮೂರು ಅರ್ಧಶತಕ ಬಾರಿಸಿದ್ದರು.
ಭಾರತದ ಬೌಲಿಂಗ್ ಪಾಳಯ ಕೂಡ ಬಲಿಷ್ಠವಾಗಿದೆ. ಯುಎಇ ಯಲ್ಲಿ ಅವರು ಯಾವ ರೀತಿಯ ದಾಳಿ ಸಂಘಟಿಸುತ್ತಾರೆಂದು ನೋಡಬೇಕಾ ಗಿದೆ. ತಂಡದಲ್ಲಿರುವ ಮೂವರು ವೇಗಿಗಳಾದ ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ಅರುಂಧತಿ ರೆಡ್ಡಿ ಪರಿಣಾಮಕಾರಿಯಾಗಿ ದಾಳಿ ನಡೆಸುವ ಸಾಧ್ಯತೆಯಿದೆ.
ನ್ಯೂಜಿಲ್ಯಾಂಡ್ ತಂಡವನ್ನು ಹಗು ರವಾಗಿ ಕಾಣುವ ಸಾಧ್ಯತೆಯಿಲ್ಲ. ಎರಡು ಬಾರಿ ರನ್ನರ್ ಅಪ್ ಆಗಿರುವ ನ್ಯೂಜಿಲ್ಯಾಂಡ್ ಯಾವುದೇ ಹಂತ ದಲ್ಲೂ ತಿರುಗೇಟು ನೀಡುವ ಸಾಧ್ಯತೆಯಿದೆ. ಅನುಭವಿ ಮತ್ತು ಯುವ ಆಟಗಾರ್ತಿಯರ ಪಡೆಯನ್ನು ಹೊಂದಿರುವ ನ್ಯೂಜಿಲ್ಯಾಂಡಿಗೆ ನಾಯಕಿ ಸೋಫಿ ಡಿವೈನ್, ಅನುಭವಿ ಆಲ್‌ರೌಂಡರ್ ಸುಜಿ ಬೇಟ್ಸ್ ಬಲ ತುಂಬಲಿದ್ದಾರೆ.
ಮುಖಾಮುಖಿ
ಒಟ್ಟು ಪಂದ್ಯ: 13
ಭಾರತ ಜಯ: 4
ಕಿವೀಸ್ ಜಯ: 9
ದಿನದ ಮೊದಲ ಪಂದ್ಯ
ದ. ಆಫ್ರಿಕಾ-ವೆಸ್ಟ್‌ಇಂಡೀಸ್
ಆರಂಭ: ಅಪರಾಹ್ನ 3.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
![Mujeeb joins Mumbai Indians team in place of another Afghan bowler](https://www.udayavani.com/wp-content/uploads/2025/02/mujeeb-150x82.jpg)

IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ