Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Team Udayavani, Oct 4, 2024, 8:16 AM IST
ಜೆರುಸಲೇಂ: ಬೈರುತ್ ನಲ್ಲಿ ಇಸ್ರೇಲಿ ದಾಳಿ ಮುಂದುವರಿದಿದ್ದು, ಹಿರಿಯ ಹಿಜ್ಬುಲ್ಲಾ ಅಧಿಕಾರಿ ಹಶೆಮ್ ಸಫೀದ್ದೀನ್ (Hashem Safieddine) ನನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪಾದ ಹಿಜ್ಬುಲ್ಲಾ (Hezbollah) ಮುಂದಿನ ನಾಯಕ ಎಂದು ಹಶೆಮ್ ಸಫಿದ್ದೀನ್ ನನ್ನು ಕರೆಯಲಾಗುತ್ತಿದೆ. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ನನ್ನು ಇತ್ತೀಚೆಗೆ ಇಸ್ರೇಲ್ ಹತ್ಯೆ ಮಾಡಿದೆ.
ಆದರೆ, ಹಶೆಮ್ ಸಫೀದ್ದೀನ್ ಮೇಲಿನ ದಾಳಿಯ ಬಗ್ಗೆ ಇಸ್ರೇಲಿ ರಕ್ಷಣಾ ಪಡೆಗಳು (IDF) ಅಥವಾ ಲೆಬನಾನ್ ನಲ್ಲಿರುವ ಹಿಜ್ಬುಲ್ಲಾದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಭೂಗತ ಬಂಕರ್ ನಲ್ಲಿ ಹಿರಿಯ ಹಿಜ್ಬುಲ್ಲಾ ಅಧಿಕಾರಿಗಳ ಸಭೆಯಲ್ಲಿ ಸಫೀದ್ದೀನ್ ಭಾಗವಹಿಸುತ್ತಿದ್ದಾಗ ಇಸ್ರೇಲ್ ಗುರುವಾರ ಮಧ್ಯರಾತ್ರಿ ವಾಯುದಾಳಿ ನಡೆಸಿದೆ. ಇಸ್ರೇಲ್ ನಸ್ರಲ್ಲಾನನ್ನು ಕೊಂದ ನಂತರ ಈ ಪ್ರದೇಶದಲ್ಲಿ ನಡೆದ ದೊಡ್ಡ ಬಾಂಬ್ ಸ್ಫೋಟವು ಇದಾಗಿದೆ.
ಲೆಬನಾನಿನ ಮಾಧ್ಯಮವನ್ನು ಉಲ್ಲೇಖಿಸಿದ ಸುದ್ದಿವಾಹಿನಿ ಆಕ್ಸಿಯೋಸ್ ಪ್ರಕಾರ, ಈ ಇಸ್ರೇಲಿ ದಾಳಿಯು ನಸ್ರಲ್ಲಾನನ್ನು ಕೊಂದ ದಾಳಿಗಿಂತ ದೊಡ್ಡದಾಗಿದೆ. ಮೃತಪಟ್ಟವರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.
2017 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಹಶೆಮ್ ಸಫಿದ್ದೀನ್, ಹಿಜ್ಬುಲ್ಲಾದ ರಾಜಕೀಯ ವ್ಯವಹಾರಗಳಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾನೆ. ಅದರ ಮಿಲಿಟರಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಗುಂಪಿನ ಜಿಹಾದ್ ಕೌನ್ಸಿಲ್ ನ ಸದಸ್ಯನಾಗಿದ್ದಾನೆ. ನಸ್ರಲ್ಲಾನ ಸೋದರ ಸಂಬಂಧಿ, ಸಫಿದ್ದೀನ್ ನನ್ನು ಹಿಜ್ಬುಲ್ಲಾದಲ್ಲಿ ‘ಎರಡನೇ ನಾಯಕ’ ಎಂದು ಪರಿಗಣಿಸಲಾಗಿದೆ. ಈತ ಇರಾನ್ ಆಡಳಿತದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.