PCB: ‘ನಮ್ಮ ಕ್ರಿಕೆಟ್‌ ಐಸಿಯುನಲ್ಲಿದೆ’ ಎಂದ ಪಾಕಿಸ್ತಾನದ ಮಾಜಿ ನಾಯಕ


Team Udayavani, Oct 4, 2024, 9:34 AM IST

PCB: ‘ನಮ್ಮ ಕ್ರಿಕೆಟ್‌ ಐಸಿಯುನಲ್ಲಿದೆ’ ಎಂದ ಪಾಕಿಸ್ತಾನದ ಮಾಜಿ ಆಟಗಾರ

ಇಸ್ಲಾಮಾಬಾದ್:‌ ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ದ ತವರಿನಲ್ಲಿ ಸರಣಿ ಸೋಲು ಕಂಡ ಪಾಕಿಸ್ತಾನ ಕ್ರಿಕೆಟ್ ನ (Pakistan Cricket) ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸೀಮಿತ ಮಾದರಿ ಕ್ರಿಕೆಟ್‌ ನ ನಾಯಕರಾಗಿದ್ದ ಬಾಬರ್‌ ಅಜಂ (Babar Azam) ಅವರು ಬುಧವಾರ ರಾಜೀನಾಮೆ ನೀಡಿದ್ದು, ಪಾಕಿಸ್ತಾನಿ ಕ್ರಿಕೆಟ್‌ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತಷ್ಟು ಜಗಜ್ಜಾಹೀರಾಗಿದೆ.

ಮೇಲಧಿಕಾರಿಗಳ ಸತತ ಬದಲಾವಣೆ ಮತ್ತು ಕ್ರೀಡೆಯಲ್ಲಿ ಸ್ವಜನಪಕ್ಷಪಾತವು ನುಸುಳಿದೆ ಎಂಬ ಆರೋಪಗಳಿವೆ. ಮಂಗಳವಾರ ಮಧ್ಯರಾತ್ರಿಯ ಸಮಯದಲ್ಲಿ ಬಾಬರ್ ಅಜ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮದಲ್ಲಿ ರಾಜೀನಾಮೆ ಘೋಷಿಸಿದರು. ಇದಾಗಿ 12 ಗಂಟೆಗಳ ನಂತರ ಅಧಿಕೃತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿಕೆ ನೀಡಿದೆ.

ಪಾಕಿಸ್ತಾನ ಕ್ರಿಕೆಟ್ ಕಳೆದ ಎರಡು ವರ್ಷಗಳಲ್ಲಿ ನಾಲ್ವರು ತರಬೇತುದಾರರು, ಮೂವರು ಬೋರ್ಡ್ ಮುಖ್ಯಸ್ಥರು ಮತ್ತು ನಾಲ್ವರು ನಾಯಕರನ್ನು ಕಂಡಿದೆ. ಅದೇ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವೂ ಕುಸಿತ ಕಂಡಿದೆ.

“ಇದು ನಾಯಕತ್ವದ ಬಿಕ್ಕಟ್ಟು” ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಟೀಕೆ ಮಾಡಿದ್ದಾರೆ. “ಪಾಕಿಸ್ತಾನ ಕ್ರಿಕೆಟ್ ಐಸಿಯುನಲ್ಲಿದೆ, ಚಿಕಿತ್ಸೆಗಾಗಿ ತಜ್ಞರಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವರ್ಷದ ನವೆಂಬರ್‌ ನಲ್ಲಿ ನಡೆದ ಏಕದಿನ ವಿಶ್ವಕಪ್‌ ನಿಂದ ಪಾಕಿಸ್ತಾನದ ಆರಂಭಿಕ ನಿರ್ಗಮನದ ನಂತರ ಬಾಬರ್‌ ಅಜಂ ಅವರು ಎಲ್ಲಾ ಮೂರು ಸ್ವರೂಪಗಳಿಗೆ ರಾಜೀನಾಮೆ ನೀಡಿದ್ದರು. ಆದರೆ ಕಳೆದ ಮಾರ್ಚ್‌ನಲ್ಲಿ ವೈಟ್-ಬಾಲ್ ತಂಡಗಳ ನಾಯಕತ್ವಕ್ಕೆ ಮರಳಿದರು. ಆದರೆ ಕೇವಲ ಆರು ತಿಂಗಳುಗಳ ಬಳಿಕ ರಾಜೀನಾಮೆ ನೀಡಿದ್ದಾರೆ. ನಾಲ್ಕು ಪ್ರಮುಖ ಸರಣಿಗಳು ಮತ್ತು ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಇದ್ದರೂ ಬಾಬರ್‌ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

vaibhavi shandilya

Vaibhavi Shandilya: ಮಾರ್ಟಿನ್‌ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

2-bng

Anekal: ನಗರದಲ್ಲಿ ಮತ್ತೆ ಮೂವರು ಪಾಕ್‌ ಪ್ರಜೆಗಳ ಬಂಧನ

1-munirathna

DNA Test: ಮುನಿರತ್ನಗೆ ಡಿಎನ್‌ಎ ಟೆಸ್ಟ್‌: ಎಸ್‌ಐಟಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ew

Women’s T20 World Cup;ಭಾರತೀಯ ವನಿತೆಯರಿಗೆ ಇಂದು ಕಿವೀಸ್‌ ಸವಾಲು

1-ffff

Michael Schumacher; 11 ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡರೆ?

1-wewqewqe

West Indies; 9 ಕ್ರಿಕೆಟರ್‌ ಜತೆ ಬಹುವರ್ಷ ಒಪ್ಪಂದ

1–wewqe

Women’s T20 World Cup: ಸ್ಕಾಟ್ಲೆಂಡ್‌ಗೆ ಆಘಾತ: ಪಾಕ್‌ಗೆ ಜಯ

1-sa

ODI; ಐರ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 139 ರನ್‌ ಜಯಭೇರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Manipal Hospital has set a new Guinness World Record by performing 3,319 CPRs in just 24 hours!

24 ಗಂಟೆಗಳಲ್ಲಿ 3,319 ಸಿಪಿಆರ್; ಗಿನ್ನೆಸ್ ವಿಶ್ವ ದಾಖಲೆ ಬರೆದ ಮಣಿಪಾಲ್‌ ಆಸ್ಪತ್ರೆ

5

Anandapura ಗ್ರಾಮ ಪಂಚಾಯತ್ ಗಳ ಸೇವೆ ಸಂಪೂರ್ಣ ಬಂದ್

4(1)

Thekkatte: ನವರಾತ್ರಿಗೆ ಮತ್ತೆ ಹೊಸತು ಬರುತಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.