Successful Operation: ಅಪಘಾತದಲ್ಲಿ ಎದೆಗೆ ಹೊಕ್ಕ ಪೈಪ್‌-ಯುವಕನಿಗೆ ಮರುಜನ್ಮ

ಸುಮಾರು 98 ಸೆಂಟಿಮೀಟರ್‌ನಷ್ಟು ಪೈಪ್‌ ದೇಹದಲ್ಲಿಯೇ ಉಳಿದಿತ್ತು. 

Team Udayavani, Oct 4, 2024, 3:22 PM IST

Successful Operation: ಅಪಘಾತದಲ್ಲಿ ಎದೆಗೆ ಹೊಕ್ಕ ಪೈಪ್‌-ಯುವಕನಿಗೆ ಮರುಜನ್ಮ

■ ಉದಯವಾಣಿ ಸಮಾಚಾರ
ಹುಬ್ಬಳ್ಳಿ: ರಸ್ತೆ ಅಪಘಾತವೊಂದರಲ್ಲಿ ಯುವಕನ ಎದೆಗೂಡಿಗೆ ಹೊಕ್ಕಿದ್ದ ದೊಡ್ಡ ಕಬ್ಬಿಣದ ಪೈಪ್‌ ಅನ್ನು ಕೆಎಂಸಿಆರ್‌ಐ
ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದು ಯುವಕನ ಪ್ರಾಣ ರಕ್ಷಣೆ ಮಾಡಿದೆ. ಅತ್ಯಂತ ಸಂಕೀರ್ಣ ಹಾಗೂ ಸವಾಲು ರೂಪದ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಹಾವೇರಿ ಜಿಲ್ಲೆ ರಾಣಿಬೆನ್ನೂರು ಬಳಿ ಬುಧವಾರ ಬೆಳಗಿನ ಜಾವ ಲಾರಿ ಮಗುಚಿ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್‌ ರಸ್ತೆಗೆ ಬಿದ್ದಿತ್ತು. ಲಾರಿಯ ಕ್ಲೀನರ್‌ ಸ್ಥಾನದಲ್ಲಿ ಕುಳಿತಿದ್ದ ಉತ್ತರ ಕನ್ನಡ ಜಿಲ್ಲೆ ಶಿರಸಿಯ ದಯಾನಂದ ಜವಳಮಕ್ಕಿ (27)ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದವರು ದಯಾನಂದ ಎದೆಗೂಡು ಸೇರಿದ್ದ ಉದ್ದನೆಯ ಕಬ್ಬಿಣದ ಪೈಪ್‌ ಅನ್ನು ಒಂದು ಭಾಗದಲ್ಲಿ ಗ್ಯಾಸ್‌ ಕಟರ್‌ ಬಳಸಿ ಕತ್ತರಿಸಿದ್ದರಾದರೂ ಸುಮಾರು 98 ಸೆಂಟಿಮೀಟರ್‌ನಷ್ಟು
ಪೈಪ್‌ ದೇಹದಲ್ಲಿಯೇ ಉಳಿದಿತ್ತು.

ತೀವ್ರವಾಗಿ ಗಾಯಗೊಂಡ ದಯಾನಂದನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ತಜ್ಞ ವೈದ್ಯರ ಲಭ್ಯತೆ ಇಲ್ಲದೆ ಹುಬ್ಬಳ್ಳಿಯ ಕೆಎಂಸಿಆರ್‌ ಐಗೆ ತರಲಾಗಿತ್ತು. ಕೆಎಂಸಿಆರ್‌ಐ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಕೈಗೊಂಡು
ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ದಯಾನಂದಗೆ ಶಸ್ತ್ರಚಿಕಿತ್ಸೆ ಹಾಗೂ ಪ್ರಾಣ ರಕ್ಷಣೆ ಅತ್ಯಂತ ಸವಾಲಿನದ್ದಾಗಿತ್ತು. ನಮ್ಮ ವೈದ್ಯರು, ತಾಂತ್ರಿಕ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬ ಸಿಬ್ಬಂದಿ ಸೈನಿಕರ ರೀತಿಯಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿದ್ದು, ಕೇವಲ ಎರಡ್ಮೂರು ತಾಸಿನಲ್ಲಿಯೇ ಎಲ್ಲ ಪರೀಕ್ಷೆ ಕೈಗೊಂಡು ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿದ್ದಾರೆ. ತುಕ್ಕು ಹಿಡಿದ ಕಬ್ಬಿಣ ಒಳಗೆ ಸೇರಿದ್ದರಿಂದ ಧನುರ್ವಾಯು ಹಾಗೂ ನಂಜು ಕಾರಣದ ಅಪಾಯ ಬಾರದ ರೀತಿಯಲ್ಲಿ ನಂಜುನಿವಾರಕ, ಇನ್ನಿತರ ಔಷಧ ನೀಡಲಾಗಿದೆ.
*ಡಾ| ಎಸ್‌.ಎಫ್‌. ಕಮ್ಮಾರ, ಕೆಎಂಸಿಆರ್‌ಐ ನಿರ್ದೇಶಕ

ಟಾಪ್ ನ್ಯೂಸ್

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

udupi1

Udupi: ಜಿಲ್ಲಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ತಬ್ಧ, ಕಚೇರಿಗಳು ಬಂದ್… ನೌಕರರ ಮುಷ್ಕರ

ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ: ಅಶೋಕ

R. Ashok: ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

CT-Ravi

MUDA Case: ಸಿದ್ದರಾಮಯ್ಯ ಕಳಂಕ ರಹಿತರೆಂದು ತನಿಖೆಯಲ್ಲಿ ಸಾಬೀತಾಗಲಿ: ಎಂಎಲ್‌ಸಿ ಸಿ.ಟಿ.ರವಿ

15-uv-fusion

UV Fusion: ಮೃಗಗಳ ಜಗತ್ತು

1-wqeqwewqe

Belagavi DCC Bank ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ‌ ದಿಢೀರ್ ರಾಜೀನಾಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister V. Somanna: ಭಾರತೀಯ ರೈಲ್ವೇ ಜತೆ ಕೊಂಕಣ ರೈಲ್ವೇ ಶೀಘ್ರ ವಿಲೀನ

Minister V. Somanna: ಭಾರತೀಯ ರೈಲ್ವೇ ಜತೆ ಕೊಂಕಣ ರೈಲ್ವೇ ಶೀಘ್ರ ವಿಲೀನ

gold

Dharwad: ಖಾಸಗಿ ಬಸ್‌ನಲ್ಲಿ 77 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

ಬಸವರಾಜ ಬೊಮ್ಮಾಯಿ

Hubli: ಸೈಟು ಹಿಂದೆ ಕೊಟ್ಟು ಸಂಕಷ್ಟ ಮೈಮೇಲೆ ಎಳೆದುಕೊಂಡ ಸಿಎಂ: ಬಸವರಾಜ ಬೊಮ್ಮಾಯಿ

Dharwad: ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

Dharwad: ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-reasad

Pune; ಘಾಟ್ ಪ್ರದೇಶದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇ*ಪ್:ಸ್ನೇಹಿತನಿಗೆ ಹಲ್ಲೆ

7

Kollegala: ದೇವಾಲಯದ ಹಿಂಭಾಗದ ಕಾವೇರಿ ನದಿಯಲ್ಲಿ ಯುವಕನ ಶವ ಪತ್ತೆ

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Balaganuru: ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

Manipur

Manipur ಹಿಂಸಾಚಾರ: ಪೊಲೀಸ್‌ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರ ಲೂಟಿಗೈದ ಗುಂಪು

udupi1

Udupi: ಜಿಲ್ಲಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ತಬ್ಧ, ಕಚೇರಿಗಳು ಬಂದ್… ನೌಕರರ ಮುಷ್ಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.