UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ


Team Udayavani, Oct 4, 2024, 3:43 PM IST

8-uv-fusion-1

ಭೂತವಾಗಿ ಹೋಗುತ್ತಿರುವ ಕ್ಷಣವನ್ನು ಭವಿಷ್ಯತ್ತಿನಿಂದ ಕಿತ್ತುಕೊಂಡು ಅದಕ್ಕೆ ವರ್ತಮಾನವೆಂದು ಹೆಸರಿಟ್ಟು ಅಲ್ಲಿ ಬದುಕಬೇಕಲ್ಲವೇ? ಅಪೇಕ್ಷೆಯಲ್ಲಿ ಮುರುಟದೆ, ವರ್ತಮಾನವನ್ನು ಸ್ವೀಕರಿಸುವ ಸ್ಥಿತಿಯನ್ನು ಜೀವ ಮುಟ್ಟಬೇಕು. ಯಾವ ನಿರ್ದಿಷ್ಟ ಗುರಿಯನ್ನೂ ಇಟ್ಟುಕೊಳ್ಳದೆ ತೆರೆದ ಮನಸ್ಸಿನಿಂದ ಗಮನಿಸಿ ನೋಡುವಲ್ಲಿಯೂ ಕಲ್ಪನೆಯ ಅಲೆಗಳು ಅಡ್ಡ ಬಂದುಬಿಡುತ್ತವೆ. ವಾಸ್ತವವನ್ನು ಅರಗಿಸಿಕೊಳ್ಳುವ ಮನಸ್ಥಿತಿ ಬೆಳೆಸುವುದು ತೀರಾ ಕಷ್ಟವೇನೋ!?

ಪರಿಚಿತವಲಯದಿಂದ, ರೂಢಿಯ ನಡವಳಿಕೆಯಿಂದ ದೂರವಾಗಿ ವರ್ತಮಾನವನ್ನು ಅರಗಿಸಿ, ಅರಿಯದ ಭವಿಷ್ಯತ್ತಿನತ್ತ ಮುಖಮಾಡಲು ಅಗಾಧವಾದ ಸಹನೆ ವಿಶಾಲವಾದ ವಿಚಕ್ಷಣೆಯಿಂದ ಮಾತ್ರ ಸಾಧ್ಯ.

ಶೋಕಸ್ಥಾನಸಹಪ್ರಾಣಿ ದುಃಖಸ್ಥಾನಶತಾನಿ ಚ| ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್‌||

ಅಂದರೆ ವ್ಯಥೆಪಡಲು ಸಾವಿರಾರು ವಿಷಯಗಳೂ ದುಃಖೀ ಸಲು ನೂರಾರು ಸಂದರ್ಭಗಳೂ ಪ್ರತಿದಿನವೂ ಒದಗುತ್ತವೆ. ಅವು ಮೂಢನಿಗೆ, ಪಂಡಿತನಿಗಲ್ಲ. ಅರ್ಥಾತ್‌ ವರ್ತಮಾನವನ್ನು ಹೊರತುಪಡಿಸಿ ಆಗಿಹೋದುದರ ಬಗೆಗೆ ಚಿಂತಿಸುವುದು, ಮುಂದೆ ಆಗಲಿರುವುದರ ಬಗೆಗೆ ತೀರಾ ಯೋಚಿಸಿ ತಲೆಕೆಡಿಸಿಕೊಳ್ಳುವುದು ಮೂಢನ ಒಂದು ಲಕ್ಷಣವಾಗಿಲ್ಲಿ ವ್ಯಕ್ತವಾಗುತ್ತದೆ. ವಿವೇಕಿಯು ಭೂತವನ್ನು ಸ್ವೀಕರಿಸಿ, ವರ್ತಮಾನವನ್ನು ಆನಂದಿಸಿ, ಭವಿಷ್ಯದಲ್ಲಿ ಭರವಸೆಯಲ್ಲಿ ಜೀವಿಸುತ್ತಲಿರುತ್ತಾನೆಯೇ ಹೊರತು ಉದ್ವೇಗದ ಉರುಳಿನೊಳಗೆ ಆತ ಬಲಿಪಶುವಾಗುವ ಸಂದರ್ಭವನ್ನೇ ಒದಗಿಸುವುದಿಲ್ಲ. ಸತ್ತು ಹೋದ ನಾಯಿಗೆ ಎಷ್ಟು ಕಣ್ಣಿತ್ತು? ಎಷ್ಟು ಹಲ್ಲಿತ್ತು? ಎಂದು ಲೆಕ್ಕ ಹಾಕುವುದರಿಂದಲೋ ಅಥವಾ ಜೀವತಳೆಯದ ಜಂತುವಿನ ಬಗೆಗೆ ತರ್ಕಿಸುವುದರಿಂದ ವರ್ತಮಾನದಲ್ಲೇನು ಪ್ರಯೋಜನ?

ವರ್ತಮಾನದ ಸಂದಿಗ್ಧತೆಯಿಂದ ಹೊರಬರುವುದು ತೀರಾ ಸುಲಭವೇನಲ್ಲ. ಮನಸ್ಸು ಸುಲಭವಾಗಿ ವರ್ತಮಾನದ ಸಂದರ್ಭಗಳಿಗೆ ಒಗ್ಗಿಕೊಳ್ಳಲು ಸಮ್ಮತಿಸುವುದೂ ಇಲ್ಲ. ಕ್ಲಿಷ್ಟ ಸಮಯದಲ್ಲಿ ಬುದ್ಧಿಗೊದಗುವ ಅಂಧತನದಿಂದ, ಬುದ್ಧಿಗೆ ಮನಸ್ಸು ದಾಸ್ಯನಾಗಿರುವುದೇ ಲೇಸು ಎನ್ನುವ ಭ್ರಮೆಯು ಬಲಿಯಲು ಬಿಡದೆ ವರ್ತಮಾನದ ವಾರ್ತೆಯನ್ನು ನಿಭಾಯಿಸುವ ಅರ್ಹತೆಯನ್ನು ಮನಸ್ಸು ಹೊಂದಬೇಕು. ಪ್ರತಿಯೊಂದನ್ನು ಊಹಾಕಾರದಲ್ಲಿರಿಸಿ ವರ್ತಮಾನವನ್ನು ಹಾಹಾಕಾರದಲ್ಲಿ ಸ್ವೀಕರಿಸಿದರೆ ಕ್ಷಣಮಾತ್ರದ ಸಂತೃಪ್ತಿಯೂ ಬದುಕಲ್ಲಿ ಲಭಿಸುವುದು ಅಸಾಧ್ಯ.

ಆದರೆ ಪ್ರತೀ ಸಂದರ್ಭವನ್ನು ನಾನೇ ಎನ್ನುವ ಅಹಂ ಭಾವದ ಕೋಟೆಯೊಳಗಿನಿಂದ ಮಾತ್ರ ಆಲೋಚಿಸದೆ ಹಲವಾರು ಆಯಾಮಗಳಿಂದ ವಿವೇಚಿಸಬೇಕು. ಸಮಸ್ಯೆಗಳಲ್ಲಿ ಭಾಗಿಯಾಗದ ಮೂರನೆಯ ವ್ಯಕ್ತಿಯಾಗಿ ವರ್ತಿಸಿ, ತರ್ಕಿಸಿ ತೀರ್ಪನ್ನು ನೀಡುವ ಸನ್ನಿವೇಶವನ್ನು ರೂಢಿಗೊಳಿಸಬೇಕು. ಇದರಿಂದ ಅದೆಷ್ಟೋ ಸಮಸ್ಯೆಗಳು ಕ್ಷಣಮಾತ್ರದಲ್ಲಿ ಪರಿಹಾರವಾಗಿಬಿಡುತ್ತವೆ.

ಆದಾಗ್ಯೂ, ಭೂತಭವಿಷ್ಯದ ಬಗೆಗೆ ಎಷ್ಟು ಚಿಂತಿಸುತ್ತಾ ಕೂತರೂ ವಿಧಿಯ ಬರಹವನ್ನು ಎಂದಿಗೂ ತಪ್ಪಿಸಲು ಸಾಧ್ಯವಿಲ್ಲ. ಅಂತಹ ಚಿಂತೆಯ ಬೆಂಕಿಯು ನೆಮ್ಮದಿಯನ್ನು ಸುಟ್ಟಿàತು, ಮನಸ್ಸನ್ನು ಅಸ್ವಸ್ಥಗೊಳಿಸೀತೇ ಹೊರತು ಬೆಂಕಿಯ ಜ್ವಾಲೆಯನ್ನು ನಂದಿಸಲಾರದು. ಅತಿಯಾಗಿ ಯೋಚಿಸಿ ಜಗತ್ತನ್ನು ನಡೆಸುವ ಅಚ್ಯುತವಾದ ಶಕ್ತಿಯ ಕಾರ್ಯದಲ್ಲಿ ಚ್ಯುತಿ ಉಂಟಾದಿತೇನೋ ಎಂದು ಭಾವಿಸುವುದು ಮೂರ್ಖತನ. ಹಾಗಾಗಿ ಶಕ್ತಿಗೆ ವ್ಯಾಕುಲತೆಯಿಂದ ತಲೆಬಾಗಿ ಬಿಡುವುದು ಹೆಚ್ಚು ಸಮಂಜಸವೆಂದೆನಿಸುತ್ತದೆ. ದಾಸನು ದೀನನಾದರೆ ಕೃಪೆಯ ಕಾವು ತಟ್ಟಿಯೇ ತಟ್ಟುತ್ತದೆ. ಹಾಗಾಗಿ ವಿಧಿ ಎಂತಹದ್ದೇ ಆಟಕ್ಕೂ ಕೃಪಾಕಟಾಕ್ಷದಡಿಯಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸಿದ್ಧಿಸಿಬಿಡುತ್ತದೆ.

 ಪಂಚಮಿ ಬಾಕಿಲಪದವು

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.