Women’s T20 World Cup 2024: ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಆಘಾತ

Team Udayavani, Oct 5, 2024, 7:00 AM IST

Women’s T20 World Cup 2024: ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಆಘಾತ

ದುಬಾೖ: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಸೋಲಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖೀಯಲ್ಲಿ ನ್ಯೂಜಿಲ್ಯಾಂಡ್‌ ಕೈಯಲ್ಲಿ 58 ರನ್ನುಗಳ ಆಘಾತಕ್ಕೆ ಸಿಲುಕಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡ ನ್ಯೂಜಿಲ್ಯಾಂಡ್‌ 4ಕ್ಕೆ 160 ರನ್ನುಗಳ ಸವಾಲಿನ ಮೊತ್ತ ಪೇರಿಸಿದರೆ, ಭಾರತ 19 ಓವರ್‌ಗಳಲ್ಲಿ 102ಕ್ಕೆ ಆಲೌಟ್‌ ಆಯಿತು.

ಚೇಸಿಂಗ್‌ ವೇಳೆ ಭಾರತ ಉತ್ತಮ ಆರಂಭ ಪಡೆಯಲು ವಿಫ‌ಲವಾಯಿತು. ಶಫಾಲಿ ವರ್ಮ ಕೇವಲ 2 ರನ್‌ ಮಾಡಿ ಮೊದಲಿಗರಾಗಿ ಪೆವಿಲಿಯನ್‌ ಸೇರಿಕೊಂಡರು. ಸ್ಮತಿ ಮಂಧನಾ (12), ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (ಸರ್ವಾಧಿಕ 15) ಕಿವೀಸ್‌ ದಾಳಿಯನ್ನು ತಡೆದು ನಿಲ್ಲಲು ವಿಫ‌ಲರಾದರು. ಪವರ್‌ ಪ್ಲೇ ಒಳಗಾಗಿ 42 ರನ್ನಿಗೆ 3 ವಿಕೆಟ್‌ ಬಿತ್ತು. ಜೆಮಿಮಾ (13), ರಿಚಾ ಘೋಷ್‌ (12) ಕೂಡ ನೆರವಿಗೆ ನಿಲ್ಲಲಿಲ್ಲ. ರೋಸ್‌ಮೇರಿ ಮೈರ್‌ 4, ಲೀ ಟಹುಹು 3 ವಿಕೆಟ್‌ ಉರುಳಿಸಿದರು.

ನ್ಯೂಜಿಲ್ಯಾಂಡ್‌ ಉತ್ತಮ ಆರಂಭ ಪಡೆದ ಬಳಿಕ ನಾಯಕಿ ಸೋಫಿ ಡಿವೈನ್‌ ಬಾರಿಸಿದ ಅರ್ಧ ಶತಕದ ನೆರವಿನಿಂದ ನೂರೈವತ್ತರ ಗಡಿ ದಾಟಿತು. ಆರಂಭಿಕರಾದ ಸುಝೀ ಬೇಟ್ಸ್‌-ಜಾರ್ಜಿಯಾ ಪ್ಲಿಮ್ಮರ್‌ 7.4 ಓವರ್‌ಗಳಿಂದ 67 ರನ್‌ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು.

4ನೇ ಕ್ರಮಾಂಕದಲ್ಲಿ ಆಡಿದ ಸೋಫಿ ಡಿವೈನ್‌ 36 ಎಸೆತಗಳಿಂದ 57 ರನ್‌ ಬಾರಿಸಿ ಅಜೇಯರಾಗಿ ಉಳಿದರು (7 ಬೌಂಡರಿ). ಅಮೇಲಿಯಾ ಕೆರ್‌ (13) ಮತ್ತು ಬ್ರೂಕ್‌ ಹಾಲಿಡೇ (16) ಬೇಗನೇ ಔಟಾದರೂ ಡಿವೈನ್‌ ಒಂದೆಡೆ ಕ್ರೀಸ್‌ ಆಕ್ರಮಿಸಿದ್ದರಿಂದ ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಬೆಳೆಯುತ್ತ ಹೋಯಿತು. ಭಾರತದ ಪರ ರೇಣುಕಾ ಸಿಂಗ್‌ 2, ಅರುಂಧತಿ ರೆಡ್ಡಿ ಮತ್ತು ಆಶಾ ಶೋಭನಾ ತಲಾ ಒಂದು ವಿಕೆಟ್‌ ಉರುಳಿಸಿದರು.

ಟಾಪ್ ನ್ಯೂಸ್

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Mangaluru ವಿಶ್ವವಿದ್ಯಾನಿಲಯ ವಾರ್ಷಿಕ ಘಟಿಕೋತ್ಸವ: ನೋಂದಣಿಗೆ ಅವಕಾಶ

Kundapura: ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ: ಸಂಸದ ರಾಘವೇಂದ್ರ ಮನವಿ

Udupi: ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಫ್ಲೈಓವರ್‌ ಆಗಲಿ: ರಮೇಶ್‌ ಕಾಂಚನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ODI Series: ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯ… ಮಂಧನಾ ಶತಕ ಬಳಿಕ ಮಂಕಾದ ಭಾರತ

Brisbane Test: ಅಡಿಲೇಡ್‌ನ‌ಲ್ಲೇ ಭಾರತ ಅಭ್ಯಾಸ

Boxing Day Test : ಮೊದಲ ದಿನದ ಟಿಕೆಟ್‌ ಸೋಲ್ಡ್‌ ಔಟ್‌!

WTA Player of the Year: ರಿನಾ ಸಬಲೆಂಕಾ ವರ್ಷದ ಆಟಗಾರ್ತಿ

Women’s Tennis: ಒಸ್ಮಾನಿಯ ವಿವಿಗೆ ಪ್ರಶಸ್ತಿ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.